ಮಾಲೆಗಾಂವ್: ಇಂಡಿಯನ್ ಸೆಕ್ಯುಲರ್ ಲಾರ್ಜೆಸ್ಟ್ ಅಸೆಂಬ್ಲಿ ಆಫ್ ಮಹಾರಾಷ್ಟ್ರ(ಇಸ್ಲಾಂ) ಪಕ್ಷವು ನಾಸಿಕ್ ಜಿಲ್ಲೆಯ ಮಾಲೆಗಾಂವ್ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಶುಕ್ರವಾರ ಚುನಾವಣಾ ಫಲಿತಾಂಶಗಳು ತಿಳಿಸಿವೆ.
ನಗರಸಭೆಯ ಒಟ್ಟು 84 ಸ್ಥಾನಗಳಲ್ಲಿ 35 ಸ್ಥಾನಗಳನ್ನು ಇಸ್ಲಾಂ ಪಕ್ಷ ಗೆದ್ದಿದ್ದರೆ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) 21 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 18 ಸ್ಥಾನಗಳನ್ನು ಪಡೆದಿದ್ದು, ಸಮಾಜವಾದಿ ಪಕ್ಷಕ್ಕೆ ಐದು ಮತ್ತು ಕಾಂಗ್ರೆಸ್‌ಗೆ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಮುಸ್ಲಿಂ ಪ್ರಾಬಲ್ಯದ ಈ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷ ಕೇವಲ ಎರಡು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ.