ಪ್ರಧಾನಿ ಮೋದಿ 
ದೇಶ

ದೇಶದ Gen Z ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ: ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ

ಒಳನುಸುಳುವಿಕೆ ರಾಜ್ಯದ ಮುಂದೆ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಮತ್ತು ಪ್ರಪಂಚದಾದ್ಯಂತದ ಶ್ರೀಮಂತ ರಾಷ್ಟ್ರಗಳು ಸಹ ಅಕ್ರಮ ವಲಸಿಗರನ್ನು ಗುರುತಿಸಿ, ಅವರನ್ನು ಗಡೀಪಾರು ಮಾಡಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಪ್ರತಿಪಾದಿಸಿದರು.

ಮಾಲ್ಡಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ದೊಡ್ಡ ಪ್ರಮಾಣದ ಒಳನುಸುಳುವಿಕೆ ರಾಜ್ಯದ ಜನಸಂಖ್ಯಾಶಾಸ್ತ್ರವನ್ನೇ ಬದಲಾಯಿಸಿದೆ. ಇದು ಮಾಲ್ಡಾ ಮತ್ತು ಮುರ್ಷಿದಾಬಾದ್‌ನಂತಹ ಜಿಲ್ಲೆಗಳಲ್ಲಿ ಗಲಭೆಗಳಿಗೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ.

ಇಂದು ಮಾಲ್ಡಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಳನುಸುಳುವಿಕೆ ರಾಜ್ಯದ ಮುಂದೆ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಮತ್ತು ಪ್ರಪಂಚದಾದ್ಯಂತದ ಶ್ರೀಮಂತ ರಾಷ್ಟ್ರಗಳು ಸಹ ಅಕ್ರಮ ವಲಸಿಗರನ್ನು ಗುರುತಿಸಿ, ಅವರನ್ನು ಗಡೀಪಾರು ಮಾಡಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಪ್ರತಿಪಾದಿಸಿದರು.

"ಒಳನುಸುಳುವಿಕೆ ಬಂಗಾಳಕ್ಕೆ ಬಹಳ ದೊಡ್ಡ ಸವಾಲಾಗಿದೆ. ಹಣದ ಕೊರತೆಯಿಲ್ಲದ ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ದೇಶಗಳು ಸಹ ಒಳನುಸುಳುಕೋರರನ್ನು ಹೊರಗೆ ಹಾಕುತ್ತಿವೆ. ಪಶ್ಚಿಮ ಬಂಗಾಳದಿಂದ ಒಳನುಸುಳುವವರನ್ನು ಹೊರಗೆ ಹಾಕುವುದು ಅಷ್ಟೇ ಅವಶ್ಯಕ" ಎಂದು ಮೋದಿ ಹೇಳಿದರು.

ಮಾಲ್ಡಾ ಮತ್ತು ಮುರ್ಷಿದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಘಟನೆಗೆ ಒಳನುಸುಳುಕೋರರೇ ಕಾರಣ ಮತ್ತು ಅವರಿಗೆ ಇಲ್ಲಿನ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಟಿಎಂಸಿ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

Gen Z ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ

"ಮಹಾರಾಷ್ಟ್ರ ನಗರ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ನಿನ್ನೆ ಪ್ರಕಟವಾಗಿದ್ದು, ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ವಿಶೇಷವಾಗಿ, ಮಹಾರಾಷ್ಟ್ರದ ರಾಜಧಾನಿ ಮತ್ತು ವಿಶ್ವದ ಅತಿದೊಡ್ಡ ಪುರಸಭೆಗಳಲ್ಲಿ ಒಂದಾದ ಬಿಎಂಸಿಯಲ್ಲಿ ಬಿಜೆಪಿ ಮೊದಲ ಬಾರಿಗೆ ದಾಖಲೆಯ ಗೆಲುವು ಸಾಧಿಸಿದೆ. ಕೆಲವೇ ದಿನಗಳ ಹಿಂದೆ, ಕೇರಳದ ರಾಜಧಾನಿ ತಿರುವನಂತಪುರಂನಲ್ಲಿಯೂ ಬಿಜೆಪಿ ಅಭ್ಯರ್ಥಿ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಇದರರ್ಥ ಒಂದು ಕಾಲದಲ್ಲಿ ಬಿಜೆಪಿ ಚುನಾವಣೆಗಳನ್ನು ಗೆಲ್ಲುವುದು ಅಸಾಧ್ಯವೆಂದು ಪರಿಗಣಿಸಲಾಗಿದ್ದ ಸ್ಥಳಗಳಲ್ಲಿಯೂ ಸಹ, ಬಿಜೆಪಿಗೆ ಈಗ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಇದು ದೇಶದ ಮತದಾರರು ಅದರಲ್ಲೂ ವಿಶೇಷವಾಗಿ ದೇಶದ Gen Z ಬಿಜೆಪಿಯ ಅಭಿವೃದ್ಧಿ ಮಾದರಿಯನ್ನು ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ" ಎಂದು ಹೇಳಿದರು.

ಟಿಎಂಸಿ ಸರ್ಕಾರ ಬದಲಾಯಿಸಬೇಕಿದೆ

ಹೃದಯಹೀನ ಮತ್ತು ಕ್ರೂರ ತೃಣಮೂಲ ಸರ್ಕಾರವು ಸಾರ್ವಜನಿಕ ಹಣವನ್ನು ಲೂಟಿ ಮಾಡುತ್ತಿದೆ. ಕೇಂದ್ರದ ನೆರವು ಬಂಗಾಳದ ಜನರನ್ನು ತಲುಪದಂತೆ ತಡೆಯುತ್ತಿದೆ. ಹೀಗಾಗಿ ಈ ಬಾರಿ ಸರ್ಕಾರ ಬದಲಾಯಿಸಬೇಕಿದೆ. ತೃಣಮೂಲವನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಬಂಗಾಳ ಅಭಿವೃದ್ಧಿಯಾಗುತ್ತದೆ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.

"ಟಿಎಂಸಿ ಸರ್ಕಾರ ಅಭಿವೃದ್ಧಿ ವಿರೋಧಿ" ಎಂದು ಟೀಕಿಸಿದ ಪ್ರಧಾನಿ, ಇಂದು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರದ ಏಕೈಕ ರಾಜ್ಯ ಪಶ್ಚಿಮ ಬಂಗಾಳವಾಗಿದ್ದು, ಟಿಎಂಸಿ ಸರ್ಕಾರವು ಬಂಗಾಳದಲ್ಲಿರುವ ನನ್ನ ಸಹೋದರ ಸಹೋದರಿಯರು ಆಯುಷ್ಮಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯುವುದನ್ನು ತಡೆಯುತ್ತಿದೆ. ಬಂಗಾಳದಿಂದ ಇಂತಹ ಕ್ರೂರ ಸರ್ಕಾರಕ್ಕೆ ವಿದಾಯ ಹೇಳುವುದು ಅತ್ಯಗತ್ಯ" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

RCB ಅಭಿಮಾನಿಗಳಿಗೆ ಸಿಹಿ ಸುದ್ದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ಅನುಮತಿ

ನೀವು ದ್ವೇಷದಿಂದ ಕುರುಡರಾಗಿದ್ದೀರಿ...: ನಾನು ಮುಸ್ಲಿಂ ಅಂತ ಅವಕಾಶ ಸಿಗುತ್ತಿಲ್ಲ; ರೆಹಮಾನ್ ಹೇಳಿಕೆ ಖಂಡಿಸಿದ ಕಂಗನಾ!

ಡಿಸೆಂಬರ್‌ನಲ್ಲಿ ವಿಮಾನ ಹಾರಾಟದಲ್ಲಿ ಭಾರಿ ಅವ್ಯವಸ್ಥೆ: ಇಂಡಿಗೋಗೆ 22 ಕೋಟಿ ರೂ. ದಂಡ ವಿಧಿಸಿದ DGCA

BBK 12 ವಿನ್ನರ್'ಗೆ ಸಿಕ್ಕ ವೋಟು 37 ಕೋಟಿ; ಯಾರಾಗ್ತಾರೆ Winner ಸಿಕ್ಕೇ ಬಿಡ್ತು ಸುಳಿವು!

ಯಾವುದೇ ದೇವಸ್ಥಾನ ಕೆಡವಿಲ್ಲ; ಕಾಶಿಗೆ ಕಳಂಕ ತರಲು ಕಾಂಗ್ರೆಸ್ ನಿಂದ AI ಬಳಕೆ: UP ಸಿಎಂ ಯೋಗಿ

SCROLL FOR NEXT