ಸಾಂದರ್ಭಿಕ ಚಿತ್ರ 
ದೇಶ

ಜಾರ್ಖಂಡ್: ಆಸ್ಪತ್ರೆಯಲ್ಲಿ ರಕ್ತ ಪಡೆದ ನಂತರ ದಂಪತಿ, ಮಗುವಿಗೆ HIV ಪಾಸಿಟಿವ್!

ಗಮನಾರ್ಹವಾಗಿ, ಪಶ್ಚಿಮ ಸಿಂಗ್‌ಭೂಮ್‌ನಲ್ಲಿ ನಿರ್ಲಕ್ಷ್ಯದ ಮೊದಲ ಪ್ರಕರಣ ಇದಲ್ಲ; ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಪಶ್ಚಿಮ ಸಿಂಗ್‌ಭೂಮ್‌ನ ಸದರ್ ಆಸ್ಪತ್ರೆಯಲ್ಲಿ ಸೋಂಕಿತ ರಕ್ತ ಪಡೆದ ನಂತರ ಥಲಸ್ಸೆಮಿಯಾ ಚಿಕಿತ್ಸೆ ಪಡೆಯುತ್ತಿದ್ದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲಿತ್ತು.

ರಾಂಚಿ: ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್‌ನ ಸದರ್ ಆಸ್ಪತ್ರೆಯಲ್ಲಿ ಸೋಂಕಿತ ರಕ್ತ ಪಡೆದ ನಂತರ ಒಂದೇ ಕುಟುಂಬದ ಮೂವರು ಸದಸ್ಯರು - ಪತಿ, ಪತ್ನಿ ಮತ್ತು ಅವರ ಹಿರಿಯ ಮಗುವಿಗೆ ಎಚ್‌ಐವಿ ಪಾಸಿಟಿವ್ ದೃಢಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಗಮನಾರ್ಹವಾಗಿ, ಪಶ್ಚಿಮ ಸಿಂಗ್‌ಭೂಮ್‌ನಲ್ಲಿ ನಿರ್ಲಕ್ಷ್ಯದ ಮೊದಲ ಪ್ರಕರಣ ಇದಲ್ಲ; ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಪಶ್ಚಿಮ ಸಿಂಗ್‌ಭೂಮ್‌ನ ಸದರ್ ಆಸ್ಪತ್ರೆಯಲ್ಲಿ ಸೋಂಕಿತ ರಕ್ತ ಪಡೆದ ನಂತರ ಥಲಸ್ಸೆಮಿಯಾ ಚಿಕಿತ್ಸೆ ಪಡೆಯುತ್ತಿದ್ದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲಿತ್ತು.

ಪುನರಾವರ್ತಿತ ಘಟನೆಗಳು ಆಸ್ಪತ್ರೆ ಆಡಳಿತದ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿವೆ.

ಸಂತ್ರಸ್ಥರ ಕುಟುಂಬದ ಪ್ರಕಾರ, ಮಹಿಳೆ ಜನವರಿ 2023 ರಲ್ಲಿ ಚೈಬಾಸಾ ಸದರ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿಕೊಂಡಿದ್ದಾಳೆ. ಹೆರಿಗೆಯ ಸಮಯದಲ್ಲಿ ಅತಿಯಾದ ರಕ್ತಸ್ರಾವದಿಂದಾಗಿ, ಆಸ್ಪತ್ರೆಯ ರಕ್ತ ನಿಧಿಯಿಂದ ಅವರಿಗೆ ರಕ್ತದ ವ್ಯವಸ್ಥೆ ಮಾಡಲಾಗಿದೆ.

ಆ ಸಮಯದಲ್ಲಿ ಮಹಿಳೆ ಸೋಂಕಿತ ರಕ್ತವನ್ನು ಪಡೆದಿದ್ದಾಳೆ, ಇದು ನಂತರ ಇಡೀ ಕುಟುಂಬಕ್ಕೆ ಸೋಂಕು ತಗುಲುವುದಕ್ಕೆ ಕಾರಣವಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಜೂನ್ 2025 ರಲ್ಲಿ ಮಹಿಳೆ ಎರಡನೇ ಬಾರಿಗೆ ಗರ್ಭಿಣಿಯಾದಾಗ ಈ ವಿಷಯ ಬೆಳಕಿಗೆ ಬಂದಿದೆ. ನಿಯಮಿತ ತಪಾಸಣೆಯ ಸಮಯದಲ್ಲಿ, ಆಕೆಗೆ ಎಚ್ಐವಿ ಪಾಸಿಟಿವ್ ಇರುವುದು ಕಂಡುಬಂದಿದೆ. ಆಕೆಯ ಪತಿಯನ್ನು ಪರೀಕ್ಷಿಸಿದಾಗ, ಅವರಿಗೂ ಸೋಂಕು ದೃಢಪಟ್ಟಿದೆ.

ಜನವರಿ 2, 2026 ರಂದು, ಮಹಿಳೆ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಆ ಮಗು ತೀವ್ರ ಅಸ್ವಸ್ಥಗೊಂಡಿದ್ದು, ರಕ್ತ ಪರೀಕ್ಷೆಯ ಸಮಯದಲ್ಲಿ ಎಚ್ಐವಿ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ.

ಪಶ್ಚಿಮ ಸಿಂಗ್ಭೂಮ್ ಸಿವಿಲ್ ಸರ್ಜನ್ ಡಾ. ಭಾರತಿ ಗೋರ್ತಿ ಮಿಂಜ್, ಈ ಸಮಯದಲ್ಲಿ ಆರೋಪಗಳ ಆಧಾರದ ಮೇಲೆ ಮಾತ್ರ ರಕ್ತ ನಿಧಿಯನ್ನು ಹೊಣೆಗಾರರನ್ನಾಗಿ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.

ಆರೋಗ್ಯ ಇಲಾಖೆಯು ವೈದ್ಯಕೀಯ ದಾಖಲೆಗಳು, ರಕ್ತ ವರ್ಗಾವಣೆಯ ದಿನಾಂಕ, ರಕ್ತದಾನಿಗಳ ಪರೀಕ್ಷಾ ವರದಿಗಳು ಮತ್ತು ರಕ್ತ ವರ್ಗಾವಣೆ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರವೇ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup: ಭಾರತಕ್ಕೆ ಬರದಿದ್ದರೇ ಟೂರ್ನಿಯಿಂದ ಹೊರಕ್ಕೆ; ಬಾಂಗ್ಲಾಗೆ ಐಸಿಸಿ 24 ಗಂಟೆ ಅಂತಿಮ ಗಡುವು!

35 ಎಸೆತಗಳಲ್ಲಿ 84 ರನ್: 5000 ರನ್ ಸೇರಿದಂತೆ ಒಂದೇ ಪಂದ್ಯದಲ್ಲಿ 5 ದಾಖಲೆ ಮುರಿದ ಅಭಿಷೇಕ್ ಶರ್ಮಾ

ರಾಸಲೀಲೆ ಪ್ರಕರಣ: ಅಮಾನತುಗೊಂಡ ಡಿಜಿಪಿ ರಾಮಚಂದ್ರ ರಾವ್ ಸ್ಥಾನಕ್ಕೆ ಉಮೇಶ್ ಕುಮಾರ್ ನೇಮಕ

ಜಂಟಿ ಅಧಿವೇಶನ: ಸದನ ಕದನಕ್ಕೆ ಆಡಳಿತರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸಿದ್ಧತೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ನಾವು ರೆಡಿ, ಆದರೆ RCB ಹಿಂಜರಿಯುತ್ತಿದೆ: ವೆಂಕಟೇಶ್ ಪ್ರಸಾದ್

SCROLL FOR NEXT