ಬಾಲಿವುಡ್ ನಟ ನದೀಮ್ ಖಾನ್ 
ದೇಶ

ಮನೆಕೆಲಸದವಳಿಗೆ ಲೈಂಗಿಕ ಕಿರುಕುಳ; ‘ಧುರಂದರ್’ ನಟ ನದೀಮ್ ಖಾನ್ ಬಂಧನ

ಕಳೆದ 10 ವರ್ಷಗಳಿಂದ ಮನೆ ಕೆಲಸದಾಕೆಯನ್ನ ನದೀಮ್ ಖಾನ್ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು. ಮದುವೆ ಆಗೋದಾಗಿ ಭರವಸೆ ನೀಡಿದ್ದರು.

ಮುಂಬೈ: ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧುರಂಧರ್ (Dhurandhar) ಸಿನಿಮಾ ಕಲಾವಿದ ನದೀಮ್ ಖಾನ್ ಅವರನ್ನು ಬಂಧಿಸಲಾಗಿದೆ.

ಕಳೆದ 10 ವರ್ಷಗಳಿಂದ ಮನೆ ಕೆಲಸದಾಕೆಯನ್ನ ನದೀಮ್ ಖಾನ್ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು. ಮದುವೆ ಆಗೋದಾಗಿ ಭರವಸೆ ನೀಡಿದ್ದರು. ಆದರೆ ಈಗ ಅವರು ಮೋಸ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಎನ್ನಲಾಗಿದೆ.

41 ವರ್ಷದ ಮಹಿಳೆ ಈ ದೂರನ್ನು ನೀಡಿದ್ದು, 2015ರಲ್ಲಿ ನದೀಮ್ ಖಾನ್ ಅವರನ್ನು ಸಂತ್ರಸ್ತೆ ಭೇಟಿ ಮಾಡಿದರು. ಆಗ ಅವರಿಗೆ 31 ವರ್ಷ. ಮನೆಕೆಲಸದವಳಾಗಿ ಅವರು ಸೇರಿಕೊಂಡರು. ನಂತರ ಇದು ದೈಹಿಕ ಸಂಬಂಧಕ್ಕೆ ತಿರುಗಿತು. ಇಬ್ಬರೂ ಆಪ್ತರಾದರು. ಈ ವೇಳೆ ನದೀಮ್ ಖಾನ್ ಅವರಿಗೆ ಮದುವೆ ಆಗುವ ಭರವಸೆ ನೀಡಿದ್ದು, ಈ ಭರವಸೆ ಮೇಲೆ ಅವರು ದೈಹಿಕ ಸಂಪರ್ಕಕ್ಕೆ ಒಪ್ಪಿದರು.ಇದು 10 ವರ್ಷಗಳ ಕಾಲ ಮುಂದುವರಿಯಿತು. ಈಗ ಅವರು ಮದುವೆ ಆಗಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದು, ಹೀಗಾಗಿ, ಪೊಲೀಸರನ್ನು ಸಂಪರ್ಕಿಸಲು ಅವರು ನಿರ್ಧರಿಸಿದರು. ಆರಂಭಿಕ ತನಿಖೆ ನಡೆಸಿ ನದೀಮ್ ಖಾನ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದ್ದು, ಅಧಿಕಾರಿಗಳು ಹೆಚ್ಚುವರಿ ಹೇಳಿಕೆಗಳನ್ನು ದಾಖಲಿಸುವ ಮತ್ತು ಆರೋಪಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ.

ಯಾರು ಈ ನದೀಮ್ ಖಾನ್?

‘ಧುರಂಧರ್’ ಸಿನಿಮಾದಲ್ಲಿ ಡಕಾಯಿತ್ ರೆಹಮಾನ್ ಮನೆಯ ಬಾಣಸಿಗ ಅಖ್ಲಾಕ್ ಆಗಿ ನದೀಮ್ ಖಾನ್ ಕಾಣಿಸಿಕೊಂಡಿದ್ದರು. ನದೀಮ್ ಖಾನ್ ಅವರನ್ನು ಪೊಲೀಸರು ವಶದಲ್ಲಿ ಇಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಧುರಂಧರ್ ಸಿನಿಮಾ ಹೊಸ ದಾಖಲೆ ಬರೆದಿದೆ. ಈ ಚಿತ್ರ ವಿಶ್ವಾದ್ಯಂತ 1300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಜನವರಿ 30ರಂದು ಸಿನಿಮಾ ನೆಟ್​​ಫ್ಲಿಕ್ಸ್ ಮೂಲಕ ಪ್ರಸಾರ ಕಾಣಲಿದೆ.

ರಣವೀರ್ ಸಿಂಗ್ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದ ಸೀಕ್ವೆಲ್ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಕನ್ನಡದ ‘ಟಾಕ್ಸಿಕ್’ ಎದುರು ಸಿನಿಮಾ ತೆರೆಗೆ ಬರುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

77ನೇ ಗಣರಾಜ್ಯೋತ್ಸವ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಕರ್ತವ್ಯ ಪಥದಲ್ಲಿ ಪರೇಡ್ ಆರಂಭ

77ನೇ ಗಣರಾಜ್ಯೋತ್ಸವ: ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ಪ್ರಧಾನಿ ಮೋದಿ ನಮನ

ತೂಚ್... 'ಕ್ರಿಕೆಟ್ ಆಡಿ ಅಂದ್ರೆ ವಿಡಿಯೋ ಗೇಮ್ ಆಡ್ತೀರಲ್ರೋ'; ಅಭಿಷೇಕ್ ಶರ್ಮಾ ಬ್ಯಾಟ್ ಚೆಕ್ ಮಾಡಿದ ಕಿವೀಸ್ ಆಟಗಾರರು!

77ನೇ ಗಣರಾಜ್ಯೋತ್ಸವ ಸಂಭ್ರಮ: ರಾಜ್ಯ ಸರ್ಕಾರ ಸಿದ್ದಪಡಿಸಿಕೊಟ್ಟ ಭಾಷಣ ಯಥಾವತ್ ಓದಿದ ರಾಜ್ಯಪಾಲ ಗೆಹ್ಲೋಟ್..!

ರಾಜ್ಯದಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ; ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಧ್ವಜಾರೋಹಣ, ಪರೇಡ್ ಆರಂಭ

SCROLL FOR NEXT