ಅಮೆರಿಕದ ವ್ಯಾಪಾರ ಪ್ರತಿನಿಧಿ (US Trade Representative) ಜೇಮಿಸನ್ ಗ್ರೀರ್ 
ದೇಶ

EU ವ್ಯಾಪಾರ ಒಪ್ಪಂದದಲ್ಲಿ ಭಾರತ 'ಬಿಗ್ ವಿನ್ನರ್': ಒಪ್ಪಿಕೊಳ್ತಾ ಅಮೆರಿಕ?

ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದ ಮಾತುಕತೆಗಳು ವೇಗ ಪಡೆಯುವಲ್ಲಿ ವಿಫಲವಾಗಿದೆ. ಪ್ರಮುಖ ವಲಯಗಳಲ್ಲಿ ಅಮೆರಿಕ ಸೇರಿದಂತೆ ಎದುರಾಗಳಿಗೆ ಸೂಕ್ತ ಪೈಪೋಟಿ ನೀಡಲು ಭಾರತೀಯ ರಫ್ತುದಾರರಿಗೆ ಅವಕಾಶ ನೀಡಲಾಗಿದೆ.

ಚೆನ್ನೈ: ಇತ್ತೀಚಿಗೆ ಅಂತಿಮಗೊಂಡ ಭಾರತ-ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಭಾರತವೇ 'ಬಿಗ್ ವಿನ್ನರ್' ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ (US Trade Representative) ಜೇಮಿಸನ್ ಗ್ರೀರ್ ಒಪ್ಪಿಕೊಂಡಿದ್ದಾರೆ. ಆದರೆ, ಭಾರತ ಹಾಗೂ ಅಮೆರಿಕ ನಡುವಣ ಮುಕ್ತ ವ್ಯಾಪಾರ ಒಪ್ಪಂದ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದೆ.

ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಗ್ರೀರ್, ಭಾರತ-EU ಒಪ್ಪಂದ ತನ್ನ ರಫ್ತುದಾರರಿಗೆ ಯುರೋಪಿಯನ್ ಮಾರುಕಟ್ಟೆಗೆ ವ್ಯಾಪಕ ಪ್ರವೇಶವನ್ನು ಒದಗಿಸುವ ಮೂಲಕ ಮತ್ತು ಕಡಿಮೆ-ವೆಚ್ಚದ ಉತ್ಪಾದನೆ ಮತ್ತು ಸೇವೆಗಳ ಕೇಂದ್ರವಾಗಿ ದೇಶದ ಪ್ರಯೋಜನವನ್ನು ಬಲಪಡಿಸುವ ಮೂಲಕ ಭಾರತಕ್ಕೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಣ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ದೀರ್ಘಕಾಲದಿಂದ ಸ್ಥಗಿತ, ರಷ್ಯಾದ ತೈಲ ಖರೀದಿ ಮೇಲೆ ಹೆಚ್ಚುವರಿ ಸುಂಕ ಮತ್ತಿತರ ಕಾರಣಗಳಿಂದ ಉಭಯ ರಾಷ್ಟ್ರಗಳ ನಡುವಣ ಸಂಬಂಧ ಅಷ್ಟಕಷ್ಟೇ ಎನ್ನುತ್ತಿರುವಾಗಲೇ ಗೀರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಭಾರತದ ವ್ಯಾಪಾರ ತಂತ್ರ ಪ್ರಮುಖ ಆರ್ಥಿಕತೆಯ ರಾಷ್ಟ್ರಗಳೊಂದಿಗೆ ಸಮಗ್ರ ಒಪ್ಪಂದಗಳನ್ನು ಭದ್ರಪಡಿಸಿಕೊಳ್ಳುವಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಿದ್ದು, ಅಮೆರಿಕದಲ್ಲಿ ಭಾರತದ ಖ್ಯಾತಿ ಹೆಚ್ಚುತ್ತಿರುವುದು ಗೀರ್ ಅವರ ಹೇಳಿಕೆಯಿಂದಲೇ ತಿಳಿದುಬರುತ್ತದೆ. ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದ ಮಾತುಕತೆಗಳು ವೇಗ ಪಡೆಯುವಲ್ಲಿ ವಿಫಲವಾಗಿದೆ. ಆದರೆ ಯುರೋಪಿಯನ್ ಒಕ್ಕೂಟದೊಂದಿಗೆ ವ್ಯಾಪಾರ ಒಪ್ಪಂದ ಅಂತಿಮಗೊಳಿಸುವ ಮೂಲಕ ಭಾರತವು ವಿಶ್ವದ ಅತಿದೊಡ್ಡ ಗ್ರಾಹಕ ಮಾರುಕಟ್ಟೆಗಳಲ್ಲಿ ತನ್ನ ನೆಲೆಯನ್ನು ಬಲಪಡಿಸಿಕೊಂಡಿದೆ. ಪ್ರಮುಖ ವಲಯಗಳಲ್ಲಿ ಅಮೆರಿಕ ಸೇರಿದಂತೆ ಎದುರಾಗಳಿಗೆ ಸೂಕ್ತ ಪೈಪೋಟಿ ನೀಡಲು ಭಾರತೀಯ ರಫ್ತುದಾರರಿಗೆ ಅವಕಾಶ ನೀಡಲಾಗಿದೆ.

ಅಧಿಕಾರಿಗಳ ಪ್ರಕಾರ, ಭಾರತ-EU ಒಪ್ಪಂದದಿಂದ ಅನೇಕ ಸರಕುಗಳ ಸುಂಕಗಳ ಕಡಿಮೆಯಾಗಲಿದೆ ಅಥವಾ ರದ್ದುಗೊಳ್ಳಲಿದೆ. ನಿಯಂತ್ರಣ ವಿಧಾನಗಳು ಸರಳಗೊಳ್ಳಲಿವೆ. ಸೇವೆಗಳು ಮತ್ತು ಹೂಡಿಕೆಗೆ ಅನುಕೂಲವಾಗಲಿದೆ. ಫಾರ್ಮಾಸ್ಯುಟಿಕಲ್ಸ್, ಜವಳಿ, ವಾಹನ ಘಟಕಗಳು, ರಾಸಾಯನಿಕಗಳು, ಮಾಹಿತಿ ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಇಂಧನ ಉಪಕರಣಗಳಂತಹ ವಲಯಗಳಲ್ಲಿ ಭಾರತಕ್ಕೆ ಹೆಚ್ಚಿನ ಉಪಯೋಗ ಆಗಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT