ಎಸ್ ಎ ಚಂದ್ರಶೇಖರ್ 
ದೇಶ

ಟಿವಿಕೆ ಜತೆ ಮೈತ್ರಿ ಮಾಡಿಕೊಳ್ಳಿ, ತಮಿಳುನಾಡಿನಲ್ಲಿ 'ಹಳೆ ವೈಭವ ಮರುಕಳಿಸುತ್ತದೆ': ಕಾಂಗ್ರೆಸ್‌ಗೆ ನಟ ವಿಜಯ್ ತಂದೆ ಆಗ್ರಹ

ಇಂದು ತಿರುವರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ, ಕಾಂಗ್ರೆಸ್‌ಗೆ ಬೆಂಬಲ ನೀಡುವ ಬಗ್ಗೆ ಯೋಚಿಸುತ್ತಿದೆ ಎಂದು ಬಹಿರಂಗಪಡಿಸಿದರು.

ಚೆನ್ನೈ: ತಮಿಳುನಾಡಿನಲ್ಲಿ ಕಳೆದುಹೋದ ವೈಭವವನ್ನು ಮರಳಿ ಪಡೆಯಲು ತಮ್ಮ ಮಗನ ಪಕ್ಷವಾದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳುವಂತೆ ನಟ ವಿಜಯ್ ಅವರ ತಂದೆ, ನಿರ್ಮಾಪಕ ಎಸ್ ಎ ಚಂದ್ರಶೇಖರ್ ಅವರು ಗುರುವಾರ ಕಾಂಗ್ರೆಸ್ ಗೆ ಒತ್ತಾಯಿಸಿದ್ದಾರೆ.

ಇಂದು ತಿರುವರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ, ಕಾಂಗ್ರೆಸ್‌ಗೆ ಬೆಂಬಲ ನೀಡುವ ಬಗ್ಗೆ ಯೋಚಿಸುತ್ತಿದೆ ಎಂದು ಬಹಿರಂಗಪಡಿಸಿದರು.

"ಕಾಂಗ್ರೆಸ್‌ಗೆ ಒಂದು ಇತಿಹಾಸ ಮತ್ತು ಪರಂಪರೆ ಇದೆ... ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು. ಆದರೆ ಈಗ ಕ್ಷೀಣಿಸುತ್ತಿರುವ ಪಕ್ಷವಾಗಿದೆ. ಅವರು ಇತರ ಪಕ್ಷಗಳಿಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದಾರೆ. ಅವರು ವಿಜಯ್ ಅವರಿಗೆ ಬೆಂಬಲ ನೀಡಿದ್ರೆ ಹಳೆಯ ವೈಭವವನ್ನು ಮರಳಿ ಪಡೆಯಬಹುದು. ಈ ಅವಕಾಶವನ್ನು ಬಳಸಿಕೊಳ್ಳುವುದು ಕಾಂಗ್ರೆಸ್‌ಗೆ ಬಿಟ್ಟದ್ದು" ಎಂದು ಹೇಳಿದ್ದಾರೆ.

ಆದಾಗ್ಯೂ, ಖ್ಯಾತ ನಟ ವಿಜಯ್ ಅವರಿಗೆ ರಾಜಕೀಯ ಭವಿಷ್ಯ ಉಜ್ವಲವಾಗಿದೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲದೆ ಸ್ಪರ್ಧಿಸುವಂತೆ ಜನರು ಟಿವಿಕೆಗೆ ಸಲಹೆ ನೀಡುತ್ತಿದ್ದಾರೆ. ಏಕೆಂದರೆ ಅವರ ಗೆಲುವು ಖಚಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಏತನ್ಮಧ್ಯೆ, ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಕೆ ಸೆಲ್ವಪೆರುಂಥಗೈ ಅವರು, ಚಂದ್ರಶೇಖರ್ ಅವರ ಬೇಡಿಕೆಯನ್ನು ತಳ್ಳಿಹಾಕಿದ್ದು, ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಪಕ್ಷಕ್ಕೆ ಅಗತ್ಯವಿರುವ ಎಲ್ಲಾ "ಉತ್ತೇಜನ" ನೀಡುತ್ತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅಪಾಯಕಾರಿ ಪರಿಣಾಮಕ್ಕೆ ಕಾರಣ, ಸಮಾಜ ವಿಭಜನೆ': ಜಾತಿ ತಾರತಮ್ಯದ ವಿರುದ್ಧದ ಹೊಸ UGC ನಿಯಮಗಳಿಗೆ ಸುಪ್ರೀಂ ಕೋರ್ಟ್ ತಡೆ!

ಕೊಡಗಿನ ಯುವತಿಯರ ಜತೆ ರಾಸಲೀಲೆ; ವಿಡಿಯೋ ಮಾಡಿ, ಪ್ರಸಾರ: ಬಿಬಿಎ ವಿದ್ಯಾರ್ಥಿ ಮೊಹಮ್ಮದ್ ಬಂಧನ

ಬೆಚ್ಚಿಬಿದ್ದ ದೆಹಲಿ: ಜಿಮ್ ಡಂಬಲ್ ನಿಂದ ತಲೆ ಜಜ್ಜಿ ಪತಿಯಿಂದಲೇ SWAT ಮಹಿಳಾ ಕಮಾಂಡೋ ಹತ್ಯೆ!

ವಿಬಿ-ಜಿ ರಾಮ್ ಜಿ ಟೀಕಿಸುವ ಜಾಹೀರಾತು ಖಂಡಿಸಿ ಬಿಜೆಪಿ ಸಭಾತ್ಯಾಗ; ಸರ್ಕಾರ ಸಮರ್ಥನೆ

ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಜನ್ಮದಿನ, ವಾರ್ಷಿಕೋತ್ಸವಕ್ಕೂ ರಜೆ ಘೋಷಣೆ

SCROLL FOR NEXT