ಪೋಷಕರನ್ನೇ ಹತ್ಯೆಗೈದ ನರ್ಸ್ ಸುರೇಖಾ 
ದೇಶ

No Love Marriage: 'ಮೈಕೈ ನೋವು' ಎಂದ ತಂದೆ-ತಾಯಿಗೆ ಅನಸ್ತೇಶಿಯಾ ಕೊಟ್ಟು ಕೊಲೆಗೈದ 'ನರ್ಸ್' ಮಗಳು!

ವೃತ್ತಿಪರ ನರ್ಸ್ 25 ವರ್ಷದ ನಕ್ಕಲ ಸುರೇಖಾ ಎಂಬುವವರು ಸ್ವಂತ ತಂದೆ-ತಾಯಿಗೇ ಹೆಚ್ಚು ಡೋಸ್ ಅನಸ್ತೇಶಿಯಾ ಇಂಜೆಕ್ಷನ್‌ ನೀಡಿ ಕೊಂದು ಹಾಕಿದ್ದಾರೆ.

ಹೈದರಾಬಾದ್: ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಗೆ ಒಪ್ಪಲಿಲ್ಲ ಎಂಬ ಒಂದೇ ಕಾರಣಕ್ಕೆ ನರ್ಸ್ ಕೆಲಸ ಮಾಡುತ್ತಿದ್ದ ಮಗಳು ತನ್ನ ಪೋಷಕರನ್ನೇ ಅನಸ್ತೇಶಿಯಾ ಕೊಟ್ಟು ಕೊಲೆಗೈದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೃತ್ತಿಪರ ನರ್ಸ್ 25 ವರ್ಷದ ನಕ್ಕಲ ಸುರೇಖಾ ಎಂಬುವವರು ಸ್ವಂತ ತಂದೆ-ತಾಯಿಗೇ ಹೆಚ್ಚು ಡೋಸ್ ಅನಸ್ತೇಶಿಯಾ ಇಂಜೆಕ್ಷನ್‌ ನೀಡಿ ಕೊಂದು ಹಾಕಿದ್ದಾರೆ.

ಈ ಹಿಂದೆ ಮೈಕೈ ನೋವು ಎಂದು ಹೇಳುತ್ತಿದ್ದ ಪೋಷಕರನ್ನು ತನ್ನ ವೃತ್ತಿಪರ ತರಬೇತಿಯನ್ನು ಬಳಸಿಕೊಂಡು ನಿದ್ರಾಜನಕ ಇಂಜೆಕ್ಷನ್‌ ನೀಡುವ ಮೂಲಕ ಕೊಂದು ಹಾಕಿದ್ದಾರೆ. ಮೃತ ಪೋಷಕರನ್ನು ತಂದೆ ದಶರಥ ಮತ್ತು ತಾಯಿ ಲಕ್ಷ್ಮಿ ಎಂದು ಗುರುತಿಸಲಾಗಿದೆ.

ಆರೋಪಿ ನಕ್ಕಲ ಸುರೇಖಾ ತನ್ನ ತಾಯಿ ಲಕ್ಷ್ಮಿ (54) ಮತ್ತು ತಂದೆ ದಶರತ್ (58) ಅವರಿಗೆ ಆರ್ಟಾಸಿಲ್ (Artacil) ಎಂಬ ನಿದ್ರಾಜನಕ ಔಷಧ (ಅನಸ್ತೇಷಿಯಾ)ವನ್ನು ಅಧಿಕ ಪ್ರಮಾಣದಲ್ಲಿ ಇಂಜೆಕ್ಟ್‌ ಮಾಡಿ ಅವರನ್ನು ಸಾಯಿಸಿದ ಆರೋಪ ಹೊತ್ತಿದ್ದಾರೆ. ಸುರೇಖಾ ಸಂಗಾರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಇಂಜೆಕ್ಷನ್‌ ಮತ್ತು ಅದನ್ನು ನೀಡುವ ಜ್ಞಾನವನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ ಸ್ಟಾಗ್ರಾಂ ಪ್ರೇಮಿ, ಮದುವೆಗೆ ಪೋಷಕರ ನಕಾರ

ಬಂಟ್ವಾರಂ ಪೊಲೀಸರ ಪ್ರಕಾರ, ಸುರೇಖಾ ಸೋಶಿಯಲ್‌ ಮೀಡಿಯಾ ಇನ್ಸ್‌ಟಾಗ್ರಾಮ್‌ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಆ ವ್ಯಕ್ತಿ ಬೇರೆ ಜಾತಿಗೆ ಸೇರಿದವನಾದ್ದರಿಂದ, ಆಕೆಯ ಪೋಷಕರು ಈ ಸಂಬಂಧವನ್ನು ವಿರೋಧಿಸಿದರು. ಇದು ಮನೆಯಲ್ಲಿ ಪದೇ ಪದೇ ಜಗಳಗಳಿಗೆ ಕಾರಣವಾಗಿತ್ತು.

ಪೋಷಕರ ಹತ್ಯೆಗೇ ಸಂಚು

ನರ್ಸಿಂಗ್‌ ಕೌಶಲ ತನಗೆ ಇದ್ದ ಕಾರಣ ಕೊಲೆ ಮಾಡಿದರೂ ನನ್ನ ಮೇಲೆ ಅನುಮಾನ ಬಾರದಂತೆ ಮಾಡಬಹುದು ಎಂದು ಸುರೇಖಾ ಯೋಜಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 24 ರ ರಾತ್ರಿ, ಮೈ-ಕೈ ನೋವಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವಳು ತನ್ನ ಹೆತ್ತವರಿಗೆ ನಿದ್ರಾಜನಕ ಇಂಜೆಕ್ಷನ್‌ನ ಹೈ ಡೋಸ್‌ ನೀಡಿದ್ದಾಳೆ ಎಂದು ಹೇಳಲಾಗಿದೆ.

ಮನೆಯಲ್ಲಿ ಸಿರಿಂಜ್ ಪತ್ತೆ

ಇಂಜೆಕ್ಷನ್‌ ಚುಚ್ಚಿದ ನಂತರ, ಇಬ್ಬರೂ ಪೋಷಕರು ಪ್ರಜ್ಞೆ ಕಳೆದುಕೊಂಡರು ಎಂದು ವರದಿಯಾಗಿದೆ. ನಂತರ ಸುರೇಖಾ ತನ್ನ ಸಹೋದರನಿಗೆ ಇದರ ಮಾಹಿತಿ ನೀಡಿದರು. ಇಬ್ಬರೂ ಸೇರಿ ತಂದೆ-ತಾಯಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ವಿಚಾರ ತಳಿದ ಪೊಲೀಸರು ಪರಿಶೀಲನೆ ನಡೆಸಿದಾಗ ಮನೆಯಲ್ಲಿ ಇಂಜೆಕ್ಷನ್ ಹಾಗೂ ಅವುಗಳಿಗೆ ರಕ್ತದ ಕಲೆಗಳು ಇರೋದನ್ನು ಗಮನಿಸಿದರು. ಅನುಮಾನಗೊಂಡು ಮೃತರ ಮಗಳನ್ನೇ ಪ್ರಶ್ನಿಸಿದ ವೇಳೆ ಘಟನೆ ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಪ್ರಶ್ನೆ ಮಾಡುತ್ತಿದ್ದಂತೆ ಆರೋಪಿ, ಮೃತ ಮಗಳಾದ ಸುರೇಖಾ ತಾನೇ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾಳೆ.

ಕೂಡಲೇ ಪೊಲೀಸರು ಆರೋಪಿ ಸುರೇಖಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

'ಅಪಾಯಕಾರಿ ಪರಿಣಾಮಕ್ಕೆ ಕಾರಣ, ಸಮಾಜ ವಿಭಜನೆ': ಜಾತಿ ತಾರತಮ್ಯದ ವಿರುದ್ಧದ ಹೊಸ UGC ನಿಯಮಗಳಿಗೆ ಸುಪ್ರೀಂ ಕೋರ್ಟ್ ತಡೆ!

ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ: ಸಚಿವ ದಿನೇಶ್ ಗುಂಡೂರಾವ್

ಪ್ರಧಾನಿ ಮೋದಿ ಭೇಟಿಯಾದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ: ಬಜೆಟ್ ಅನುದಾನ ಕುರಿತು ಚರ್ಚೆ!

ಬೆಂಗಳೂರು: 4 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಕೆ.ಪಿ ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್‌ ಲೋಕಾಯುಕ್ತ ಬಲೆಗೆ

SCROLL FOR NEXT