ಏರ್ ಇಂಡಿಯಾ ಎಕ್ಸ್‌ಪ್ರೆಸ್ 
ದೇಶ

ಪಶ್ಚಿಮ ಏಷ್ಯಾದ ಎಲ್ಲಾ ದೇಶಗಳಿಗೆ ವಿಮಾನ ಸೇವೆ ಪುನರಾರಂಭಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್

ಕುವೈತ್‌ಗೆ ಸೇವೆಗಳನ್ನು ಪುನರಾರಂಭಿಸುವುದರೊಂದಿಗೆ, ಪಶ್ಚಿಮ ಏಷ್ಯಾ ಜಾಲದಾದ್ಯಂತ ಎಲ್ಲಾ ವಿಮಾನ ನಿಲ್ದಾಗಳಿಗೆ ಸಂಪರ್ಕವನ್ನು ಪುನಃಸ್ಥಾಪಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ನವದೆಹಲಿ: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಯುದ್ಧದಿಂದ ವಿಮಾನಯಾನ ಸೇವೆ ಸ್ಥಗಿತಗೊಳಿಸಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗುರುವಾರ ಪಶ್ಚಿಮ ಏಷ್ಯಾದ ಎಲ್ಲಾ ವಿಮಾನ ನಿಲ್ದಾಣಗಳಿಗೆ ವಿಮಾನ ಸೇವೆಯನ್ನು ಪುನಃಸ್ಥಾಪಿಸಿದ್ದು, ಒಮಾನ್ ಮತ್ತು ಕುವೈತ್‌ಗೆ ವಿಮಾನಗಳು ಆರಂಭವಾಗಲಿವೆ ಎಂದು ಹೇಳಿದೆ.

ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯು, ಈ ಪ್ರದೇಶದಲ್ಲಿ ಸಂಘರ್ಷದ ಹಿನ್ನೆಲೆಯಲ್ಲಿ ಕೆಲವು ಪಶ್ಚಿಮ ಏಷ್ಯಾಗೆ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿತ್ತು.

ಒಮನ್‌ನ ಸಲಾಲಾ ಮತ್ತು ಕುವೈತ್‌ಗೆ ಸೇವೆಗಳನ್ನು ಪುನರಾರಂಭಿಸುವುದರೊಂದಿಗೆ, ಪಶ್ಚಿಮ ಏಷ್ಯಾ ಜಾಲದಾದ್ಯಂತ ಎಲ್ಲಾ ವಿಮಾನ ನಿಲ್ದಾಗಳಿಗೆ ಸಂಪರ್ಕವನ್ನು ಪುನಃಸ್ಥಾಪಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

"ಕೋಝಿಕೋಡ್-ಸಲಾಲಾ ಮಾರ್ಗದಲ್ಲಿ ಜುಲೈ 2 ರಿಂದ ವಿಮಾನ ಸೇವೆ ಪುನರಾರಂಭಗೊಂಡಿದ್ದು, ಕೋಝಿಕೋಡ್ ಮತ್ತು ಕುವೈತ್ ನಡುವಿನ ಸೇವೆಗಳು ಜುಲೈ 3 ರಿಂದ ಪುನರಾರಂಭಗೊಳ್ಳಲಿದ್ದು, ಬೆಂಗಳೂರು ಮತ್ತು ಕುವೈತ್ ನಡುವಿನ ವಿಮಾನ ಸೇವೆ ಜುಲೈ 4 ರಿಂದ ಪ್ರಾರಂಭವಾಗಲಿದೆ. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ವಿಮಾನ ಸೇವೆಯನ್ನು ಹೆಚ್ಚಿಸಲಾಗುವುದು" ಎಂದು ಏರ್ ಇಂಡಿಯಾ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!

ಅಭಿಮನ್ಯು ಇಲ್ಲದ ದಸರಾ; ಈ ಬಾರಿ ಹೊರೋದ್ಯಾರು ಅಂಬಾರಿ?

ಅಮೆರಿಕ ಯೋಧನ ತಲೆಗೆ 30 ಸಾವಿರ ಡಾಲರ್ ಬಹುಮಾನ: ಇರಾನ್‌ನಿಂದ ವಿಜಯನಗರದ ಅರಸನ ತಂತ್ರ ಬಳಕೆ!