ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳತನದ ದೃಶ್ಯ 
ದೇಶ

ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಮಹಿಳೆ; ಬಟ್ಟೆ ಕಳಚುವುದಾಗಿ ಮನೆ ಮಾಲೀಕರಿಗೆ ಬೆದರಿಕೆ! ದೂರು ದಾಖಲು

ಜೈಪುರದ ಮುಹಾನಾ ಪ್ರದೇಶದಲ್ಲಿರುವ ಮನೆಯ ಮಾಲೀಕರು, ಆಕೆ ಕೂಗಾಡುತ್ತಾ ಮತ್ತು ತಮಗೆ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದಾರೆ.

ಜೈಪುರ: ಜೈಪುರದ ಮನೆಯೊಂದರ ಮಲಗುವ ಕೋಣೆಯಿಂದ ಆಭರಣಗಳನ್ನು ಕದ್ದ ಮಹಿಳೆಯೊಬ್ಬಳು, ಮನೆಯೊಳಗೆ ಲಾಕ್ ಆಗಿದ್ದರಿಂದ ಅಲ್ಲಿಂದ ಹೊರಹೋಗಲಾಗದೆ ಸಿಕ್ಕಿಬಿದ್ದಿದ್ದಾರೆ. ಮನೆಯ ಮಾಲೀಕರು ಬಂದು ಪ್ರಶ್ನಿಸಿದಾಗ, ಆ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು, ಆಕೆ ತನ್ನ ಬಟ್ಟೆಗಳನ್ನು ಕಳಚುವುದಾಗಿ ಮತ್ತು ಪೊಲೀಸರಿಗೆ ಕರೆ ಮಾಡಿ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಜೈಪುರದ ಮುಹಾನಾ ಪ್ರದೇಶದಲ್ಲಿರುವ ಮನೆಯ ಮಾಲೀಕರು, ಆಕೆ ಕೂಗಾಡುತ್ತಾ ಮತ್ತು ತಮಗೆ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಮನೆಯಿಂದ ಆಭರಣಗಳು ಮತ್ತು ನಗದು ಕಳುವಾದ ಬಗ್ಗೆ ದೂರು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆ ನಂತರ ಮನೆಯ ಮಾಲೀಕರು ಭದ್ರತೆ ಮತ್ತು ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು.

ಗುರುವಾರ ಕುಟುಂಬದೊಂದಿಗೆ ಹೊರಗೆ ಹೋಗಿದ್ದಾಗ, ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಮಹಿಳೆಯೊಬ್ಬರು ಬೆಡ್ ರೂಂಗೆ ಪ್ರವೇಶಿಸಿ ಕಬೋರ್ಡ್ ಅನ್ನು ತೆರೆಯುತ್ತಿರುವುದು ಕಂಡುಬಂದಿದೆ. ಮಹಿಳೆ ಸಣ್ಣ ಬಾಕ್ಸ್‌ವೊಂದನ್ನು ಹೊರತೆಗೆದು ಹಾಸಿಗೆಯ ಮೇಲೆಟ್ಟು, ಅದರಲ್ಲಿದ್ದ ವಸ್ತುಗಳನ್ನು ಪರಿಶೀಲಿಸುತ್ತಿದ್ದರು; ಅವುಗಳಲ್ಲಿ ಹೆಚ್ಚಿನವು ಆಭರಣಗಳಾಗಿದ್ದವು.

ಮನೆಯ ಮಾಲೀಕರು ತಕ್ಷಣವೇ ನೆರೆಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಮತ್ತು ಮುಖ್ಯ ದ್ವಾರಕ್ಕೆ ಬೀಗ ಹಾಕಿಸಿದ್ದಾರೆ. ಬಳಿಕ ಅವರು ಕೂಡಲೇ ಮನೆಗೆ ಧಾವಿಸಿ ಬಂದಿದ್ದಾರೆ.

ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದ ಮಹಿಳೆ, ಮನೆಯ ಮಾಲೀಕರು ಮತ್ತು ಅವರ ನೆರೆಯವರನ್ನು ಬೆದರಿಸಿದ್ದಾರೆ.

'ನಾನು ನನ್ನ ಬಟ್ಟೆಗಳನ್ನು ಹರಿದುಹಾಕುತ್ತೇನೆ. ಪೊಲೀಸರು ನಿಮ್ಮನ್ನು ಹಿಡಿದುಕೊಳ್ಳುತ್ತಾರೆ' ಎಂದು ಮನೆಯ ಮಾಲೀಕರು ಚಿತ್ರೀಕರಿಸಿದ ವಿಡಿಯೋದಲ್ಲಿ ಆಕೆ ಹೇಳುತ್ತಿರುವುದು ಕೇಳಿಬಂದಿದೆ.

ಪೊಲೀಸರು ಶೀಘ್ರದಲ್ಲೇ ಮನೆಗೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮನೆಯ ಮಾಲೀಕರ ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!