ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಸಾಂದರ್ಭಿಕ ಚಿತ್ರ 
ದೇಶ

H-2A visa ಕಾರ್ಮಿಕರ ಶೇ.12. 5 ರಷ್ಟು ಸುಂಕವನ್ನು ಕೈಬಿಡುವಂತೆ ಅಮೆರಿಕಕ್ಕೆ ಭಾರತದ ಮನವಿ

ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಿದ ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಬ್ರಿಜ್ ಮೋಹನ್ ಮಿಶ್ರಾ, ಬಲವಂತದ ಕಾರ್ಮಿಕರ ಸಮಸ್ಯೆಗಳ ಕುರಿತು ಭಾರತದ ನಿಜವಾದ ಪಾಲ್ಗೊಳ್ಳುವಿಕೆಯ ಹಿನ್ನೆಲೆಯಲ್ಲಿ ವರದಿಯಲ್ಲಿ ಸಲ್ಲಿಸಿದರು.

ನವದೆಹಲಿ: ಯುಎಸ್ ಜೊತೆಗಿನ ವ್ಯಾಪಾರ ಸಮಸ್ಯೆಗಳನ್ನು ಏಕಪಕ್ಷೀಯ ಕ್ರಮಗಳ ಬದಲು ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳ ಮೂಲಕ ಪರಿಹರಿಸಬೇಕು ಎಂದು ಭಾರತ ಪ್ರತಿಪಾದಿಸಿದೆ. H-2A visa ಕಾರ್ಮಿಕರ (ಬಲವಂತದ ಕಾರ್ಮಿಕರ) ಕಾಳಜಿ ಕುರಿತಾದ ಸೆಕ್ಷನ್ 301 ರಲ್ಲಿನ ಅಸಮಂಜಸತೆಯನ್ನು ಉಲ್ಲೇಖಿಸಿದ್ದು, ಯುಎಸ್‌ಟಿಆರ್ ತನ್ನ ಪ್ರಸ್ತಾವಿತ ಶೇ. 12.5 ರಷ್ಟು ಸುಂಕವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ.

ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಿದ ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಬ್ರಿಜ್ ಮೋಹನ್ ಮಿಶ್ರಾ, ಈ ಕಾರ್ಮಿಕರ ಸಮಸ್ಯೆಗಳ ಕುರಿತು ಭಾರತದ ನಿಜವಾದ ಪಾಲ್ಗೊಳ್ಳುವಿಕೆಯ ಹಿನ್ನೆಲೆಯಲ್ಲಿ ವರದಿಯಲ್ಲಿ ಸಲ್ಲಿಸಿದರು. ಅದರಲ್ಲಿ ಯುಎಸ್‌ಟಿಆರ್‌ನ (US Trade Representative))ನಿರ್ಣಯದ ಬಗ್ಗೆ ಬಲವಾದ ಕಳವಳ ವ್ಯಕ್ತಪಡಿಸಿದೆ.

ಭಾರತ ಜೀತದಾಳು ಸಮಸ್ಯೆಯನ್ನು ನಿರ್ಮೂಲನೆಯನ್ನು ಸಾಂವಿಧಾನಿಕ ಬಾಧ್ಯತೆಯಾಗಿ ಮತ್ತು ಅಂತಾರಾಷ್ಟ್ರೀಯ ಕಾನೂನು ಮತ್ತು ತತ್ವದ ವಿಷಯವಾಗಿ ಗಂಭೀರವಾಗಿ ಪರಿಗಣಿಸುತ್ತದೆ. ಯುಎಸ್‌ಟಿಆರ್ ವರದಿ ಮತ್ತು ಭಾರತದ ವಿರುದ್ಧದ ಸಂಶೋಧನೆಗಳ ಬಗ್ಗೆ ಭಾರತವು ತನ್ನ ಕಳವಳಗಳನ್ನು ತೋರಿಸಲು ಬಯಸುತ್ತದೆ ಎಂದು ಅವರು ಹೇಳಿದ್ದಾರೆ.

ಯುಎಸ್‌ಟಿಆರ್ ವ್ಯಾಪಾರ ಕಾಯ್ದೆಯ ಸೆಕ್ಷನ್ 301(ಡಿ) ಅಡಿಯಲ್ಲಿ ಸಂಬಂಧಿತ ಕಾನೂನು ಮಾನದಂಡಗಳನ್ನು ಪೂರೈಸಿಲ್ಲ. ಬಲವಂತದ ಕಾರ್ಮಿಕರ ಆಮದು ನಿಷೇಧವನ್ನು ವಿಧಿಸಲು ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಫಲವಾಗಿವೆ ಎಂದು ಅವರು ಹೇಳಿದ್ದಾರೆ.

ಜುಲೈ 8 ರಂದು ನಡೆದ ಮತ್ತು USTR ವೆಬ್‌ಸೈಟ್‌ನಲ್ಲಿ ಪ್ರಕಟವಾದ ವಿಚಾರಣೆಯ ಲಿಖಿತ ಪ್ರತಿಲೇಖನದ ಪ್ರಕಾರ, USTR ನಿರ್ಣಯವು ದೇಶಾದ್ಯಂತ ಸುಂಕಗಳಿಗೆ ತಾರ್ಕಿಕತೆಯನ್ನು ಒದಗಿಸುವುದಿಲ್ಲ ಮತ್ತು 46 ಆರ್ಥಿಕತೆಗಳನ್ನು (ಭಾರತ ಸೇರಿದಂತೆ) ಒಂದೇ ವರ್ಗಕ್ಕೆ ಸೇರಿಸುತ್ತದೆ ಎನ್ನಲಾಗಿದೆ.

USTR ನ ಸೆಕ್ಷನ್ 301 ತನಿಖಾ ವರದಿಯು ಬಲವಂತದ ಕಾರ್ಮಿಕರಿಂದ ಉತ್ಪಾದಿಸಲ್ಪಟ್ಟ ಸರಕುಗಳ ಆಮದಿನ ಮೇಲೆ ನಿಷೇಧವನ್ನು ವಿಧಿಸಲು ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಫಲವಾಗಿದೆ ಎಂದು ಕಳವಳ ವ್ಯಕ್ತಪಡಿಸುತ್ತದೆ.

ನಿರ್ಣಯವು ಬೆರಳೆಣಿಕೆಯಷ್ಟು ಆರ್ಥಿಕತೆಗಳ ಅಧ್ಯಯನಗಳನ್ನು ಆಧರಿಸಿದ್ದು, ವಿಶಾಲ ವ್ಯಾಪಾರ ಮಾದರಿಗಳನ್ನು ಅವಲಂಬಿಸಿಲ್ಲ. ಈ ವಿಧಾನವು ವಿಶೇಷವಾಗಿ ದೋಷಪೂರಿತವಾಗಿದೆ ಎಂದು ಭಾರತ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!