ಸೋನಮ್ ವಾಂಗ್‌ಚುಕ್‌ 
ದೇಶ

ಉಪವಾಸ ಅಂತ್ಯಗೊಳಿಸುವಂತೆ ಸೋನಮ್ ವಾಂಗ್‌ಚುಕ್‌ಗೆ ಪ್ರತಿಪಕ್ಷಗಳ ಸಂಸದರ ನಿಯೋಗ, CJP ಮನವಿ!

ವಾಂಗ್‌ಚುಕ್ ಅವರನ್ನು ಭೇಟಿಯಾಗಲಿರುವವರಲ್ಲಿ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ವಿವೇಕ್ ತಂಖಾ, ಟಿಎಂಸಿಯ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಮತ್ತು ಸಿಪಿಐ(ಎಂ)ನ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಇದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಹೊಣೆಗಾರಿಕೆಗೆ ಸಂಬಂಧಿಸಿದಂತೆ ತಮ್ಮ 25 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮನವೊಲಿಸಲು ವಿರೋಧ ಪಕ್ಷದ ಸಂಸದರ ನಿಯೋಗವೊಂದು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿರುವ ಸೋನಮ್ ವಾಂಗ್‌ಚುಕ್ ಅವರನ್ನು ಭೇಟಿ ಮಾಡಲಿದೆ ಎಂದು ಮಂಗಳವಾರ ಮೂಲಗಳು ತಿಳಿಸಿವೆ.

ಕಳೆದ 25 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ಅವರನ್ನು ಭೇಟಿಯಾಗಲಿರುವ ವಿರೋಧ ಪಕ್ಷದ ನಿಯೋಗವು, ಸಂಸತ್ತಿನ ಒಳಗೆ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಭರವಸೆ ನೀಡಿ ಉಪವಾಸವನ್ನು ಕೈಬಿಡುವಂತೆ ಅವರನ್ನು ಕೋರಲಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ವಾಂಗ್‌ಚುಕ್ ಅವರನ್ನು ಭೇಟಿಯಾಗಲಿರುವವರಲ್ಲಿ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ವಿವೇಕ್ ತಂಖಾ, ಟಿಎಂಸಿಯ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಮತ್ತು ಸಿಪಿಐ(ಎಂ)ನ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಇದ್ದಾರೆ.

'ಕಾಕ್ರೋಚ್ ಜನತಾ ಪಾರ್ಟಿ' (CJP) ಕೂಡ ವಾಂಗ್‌ಚುಕ್ ಅವರಿಗೆ ತಮ್ಮ ಉಪವಾಸವನ್ನು ಕೊನೆಗೊಳಿಸುವಂತೆ ಮನವಿ ಮಾಡಿದೆ.

'ಆತ್ಮೀಯ ಸೋನಮ್ ಸರ್, ಅಪಾರ ಗೌರವ ಮತ್ತು ಕೃತಜ್ಞತೆಯೊಂದಿಗೆ, ದಯವಿಟ್ಟು ನಿಮ್ಮ ಉಪವಾಸವನ್ನು ಕೊನೆಗೊಳಿಸುವಂತೆ ನಾವು ನಿಮ್ಮಲ್ಲಿ ವಿನಂತಿಸುತ್ತೇವೆ' ಎಂದು ಸಿಜೆಪಿ 'ಎಕ್ಸ್' ಖಾತೆಯಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.

'ನಿಮ್ಮ ತ್ಯಾಗವು ದೇಶದಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ಜುಲೈ 20 ರಂದು, ಯುವಕರು ವಿವಿಧ ರಾಜ್ಯಗಳಿಂದ ಆಗಮಿಸಿ ನಿಮ್ಮ ಹಾಗೂ ಈ ಚಳುವಳಿಯ ಬೆಂಬಲಕ್ಕೆ ನಿಂತರು. ಈ ಹೋರಾಟವು ಯಾವುದೇ ಒಬ್ಬ ವ್ಯಕ್ತಿಗಿಂತಲೂ ದೊಡ್ಡದು ಮತ್ತು ವಿದ್ಯಾರ್ಥಿಗಳು ನ್ಯಾಯಕ್ಕೆ ಅರ್ಹರು ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ. ಆದರೆ ಸದ್ಯಕ್ಕೆ, ನಿಮ್ಮ ಆರೋಗ್ಯದ ಕಡೆಗೆ ನೀವು ಗಮನಹರಿಸುವುದು ನಮಗೆ ಅಗತ್ಯ' ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿದೆ.

ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಸಿಜೆಪಿ ತಿಳಿಸಿದೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಶಿಕ್ಷಣ ಕ್ಷೇತ್ರದ ಹೊಣೆಗಾರಿಕೆಯ ವಿಷಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸತ್ತಿನ ಸದಸ್ಯರು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಭರವಸೆ ನೀಡಿದರೆ ಉಪವಾಸವನ್ನು ಕೊನೆಗೊಳಿಸುವುದಾಗಿ ವಾಂಗ್ಚುಕ್ ಹೇಳಿದ್ದರು.

ಆದಾಗ್ಯೂ, 'ಕಾಕ್ರೋಚ್ ಜನತಾ ಪಾರ್ಟಿ'ಯ 'ಸಂಸದ್ ಚಲೋ' ಮೆರವಣಿಗೆಯ ವೇಳೆ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಕೈಗೊಂಡ ಕಠಿಣ ಕ್ರಮದ ನಂತರ, ಅಂತಹ ಭರವಸೆ ಸಿಗುವವರೆಗೂ ತಮ್ಮ ಉಪವಾಸವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಕ್ರೋಚ್​ಗಳ ಮೇಲೆ ಲಾಠಿಚಾರ್ಜ್: ವಿಡಿಯೋ ನೋಡಲು ಟೈಮ್ ಇಲ್ಲ - ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಜುಲೈ 20ರ ಪ್ರತಿಭಟನೆ ಕೇವಲ Trailer ಅಷ್ಟೇ, ಸರ್ಕಾರ ಮಣಿಯದಿದ್ದರೆ ಲಕ್ಷಾಂತರ ಮಂದಿ ದೆಹಲಿಗೆ ಲಗ್ಗೆ: CJP ಹೊಸ ಎಚ್ಚರಿಕೆ

‘ಫ್ಲಾಪ್ ಸಾಂಗಿದು, ದಯವಿಟ್ಟು ನಿಲ್ಲಿಸಿ’: ನೆನಪಿರಲಿ ಪ್ರೇಮ್​​ಗೆ ನಾದಬ್ರಹ್ಮ ಹಂಸಲೇಖ ಹೀಗೆ ಹೇಳಿದ್ಯಾಕೆ ಗೊತ್ತಾ?

US-Iran ವಾರ್ ಎಫೆಕ್ಟ್: ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಹೆಚ್ಚಳ; ಜೂನ್ ನಂತರ ಸಾರ್ವಕಾಲಿಕ ಏರಿಕೆ!

CJP protest: RAF ಯೋಧನ ಮೇಲೆ ಹಲ್ಲೆಯ ವಿಡಿಯೋ ವೈರಲ್; ಎಫ್‌ಐಆರ್ ದಾಖಲು