ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ಚಿತ್ರ 
ದೇಶ

10 ವರ್ಷ ಜೈಲು ಶಿಕ್ಷೆ, 1 ಕೋಟಿ ರೂ ದಂಡ: ಪ್ರಶ್ನೆಪತ್ರಿಕೆ ಸೋರಿಕೆ, ಕಠಿಣ ಶಿಕ್ಷೆ ವಿಧಿಸುವ ಮಸೂದೆ ಜಾರಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ!

ಈ ಕಾನೂನು ಜಾರಿಗೆ ಬರುವ ಮುನ್ನಾ ಕೇಂದ್ರ ಸರ್ಕಾರ ಮತ್ತು ಅದರ ಸಂಸ್ಥೆಗಳು ನಡೆಸುವ ಪರೀಕ್ಷೆಗಳಲ್ಲಿ ಅಕ್ರಮ ಮಾರ್ಗ ಅನುಸರಿಸುವ ಅಥವಾ ಅಪರಾಧವೆಸಗುವ ವಿವಿಧ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ನಿರ್ದಿಷ್ಟ ಹಾಗೂ ಸಮಗ್ರ ಕಾನೂನು ಇರಲಿಲ್ಲ.

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಮಸೂದೆ ಜಾರಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ನೀಡಿದೆ.

2024ರಲ್ಲೂ ಇದೇ ರೀತಿಯ ಹೊಸ ಕಾನೂನನ್ನು ಜಾರಿಗೆ ತಂದಿತ್ತು. ಪಬ್ಲಿಕ್ ಪರೀಕ್ಷೆಗಳ ಅಕ್ರಮಗಳ ತಡೆ ಕಾಯ್ದೆ 2024ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ ಸುಮಾರು 4 ತಿಂಗಳ ನಂತರ ಅದೇ ವರ್ಷದ ಜೂನ್ ತಿಂಗಳಲ್ಲಿ ಬಿಲ್ ಅಧಿಸೂಚನೆ ಹೊರಡಿಸಲಾಗಿತ್ತು.

ಈ ಕಾನೂನು ಜಾರಿಗೆ ಬರುವ ಮುನ್ನಾ ಕೇಂದ್ರ ಸರ್ಕಾರ ಮತ್ತು ಅದರ ಸಂಸ್ಥೆಗಳು ನಡೆಸುವ ಪರೀಕ್ಷೆಗಳಲ್ಲಿ ಅಕ್ರಮ ಮಾರ್ಗ ಅನುಸರಿಸುವ ಅಥವಾ ಅಪರಾಧವೆಸಗುವ ವಿವಿಧ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ನಿರ್ದಿಷ್ಟ ಹಾಗೂ ಸಮಗ್ರ ಕಾನೂನು ಇರಲಿಲ್ಲ.

ಈ ಕಾಯ್ದೆಯು ಕೇಂದ್ರ ಲೋಕಸೇವಾ ಆಯೋಗ (UPSC), ಸಿಬ್ಬಂದಿ ನೇಮಕಾತಿ ಆಯೋಗ (SSC), ರೈಲ್ವೆ, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮುಂತಾದವು ನಡೆಸುವ ಪಬ್ಲಿಕ್ ಪರೀಕ್ಷೆಗಳಲ್ಲಿ ಅಕ್ರಮ ಮಾರ್ಗಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ.

ನಕಲು ಮಾಡುವುದನ್ನು ತಡೆಯಲು ಈ ಹಿಂದಿನ ಮಸೂದೆಯಲ್ಲಿ ಕನಿಷ್ಠ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆಯ ಅವಕಾಶವಿತ್ತು. ಆದರೆ, ಸಂಘಟಿತ ಅಪರಾಧದ ಮೂಲಕ ನಕಲು ಮಾಡುವಲ್ಲಿ ಭಾಗಿಯಾದವರಿಗೆ ಐದರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 1 ಕೋಟಿ ರೂ. ದಂಡ ವಿಧಿಸುವ ಅವಕಾಶವನ್ನು ಇದರಲ್ಲಿ ಕಲ್ಪಿಸಲಾಗಿದೆ.

ಮಸೂದೆಯು ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡುವುದು, OMR ಹಾಳೆಗಳನ್ನು ತಿರುಚುವುದು, ನಕಲಿ ವೆಬ್‌ಸೈಟ್‌ಗಳನ್ನು ರಚಿಸುವುದು ಮತ್ತು ನಕಲಿ ಪ್ರವೇಶ ಪತ್ರಗಳನ್ನು ನೀಡುವುದು ಸೇರಿದಂತೆ 15 ಕಾನೂನುಬಾಹಿರ ಕೃತ್ಯಗಳನ್ನು ವಿವರಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

APMCಗೆ CM ಡಿಕೆಶಿ ದಿಢೀರ್ ಭೇಟಿ ಬೆನ್ನಲ್ಲೇ ಫೀಲ್ಡಿಗಿಳಿದ ಪೊಲೀಸರು; 19 ಬಾಲ ಕಾರ್ಮಿಕರ ರಕ್ಷಣೆ; ನಾಲ್ಕು ಅಂಗಡಿ ಮಾಲೀಕರ ಬಂಧನ!

ಒಮರ್ ಅಬ್ದುಲ್ಲಾ ಮುಂದೆ 'ವಂದೇ ಮಾತರಂ' ಸಂಪೂರ್ಣ ರಾಷ್ಟ್ರಗೀತೆ ಗಾಯನ, ಬಾಂಬ್ ದಾಳಿ ಪೀಡಿತ ಕಾಶ್ಮೀರ ಈಗ ಬದಲು!

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೂ ಮುನ್ನ ಭಾರೀ ಭದ್ರತಾಲೋಪ: ನಕಲಿ PMO ಅಧಿಕಾರಿ, ಗನ್ ಹೊಂದಿದ್ದ ಇಬ್ಬರ ಬಂಧನ!

ದರ್ಶನ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್: 59ನೇ ಸಿಹೆಚ್ ಹೆಚ್ ಕೋರ್ಟ್ ಆದೇಶ ರದ್ದು!

ಕೊನೆಗೂ ಬಳ್ಳಾರಿಯಲ್ಲಿ ಬಿಜೆಪಿ ಸಮಾವೇಶಕ್ಕೆ ಅನುಮತಿ ಕೊಟ್ಟ ಡಿಕೆಶಿ ಸರ್ಕಾರ!