ಪ್ರಿಯಾಂಕಾ ಮತ್ತು ಅನುರಾಗ್ ಠಾಕೂರ್ 
ದೇಶ

ಪ್ರಿಯಾಂಕಾ ಮಿದುಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ: RSS ಸೇರಿ, ಗೋಮೂತ್ರ ಸೇವಿಸುವುದು ಉತ್ತಮ; ಅನುರಾಗ್ ಠಾಕೂರ್

ಗಂಭೀರ ವಿಷಯಗಳ ಬಗ್ಗೆ ಮಾತನಾಡುವಾಗ ಅವರು ಮುಗ್ಧ ಮುಖಭಾವ ತೋರುವುದು, ಜನರನ್ನು ದಾರಿ ತಪ್ಪಿಸುವುದು, ಮಂದಹಾಸ ಬೀರುವುದು. ಸ್ಪೀಕರ್ ಕೂಡ ನಗುವಂತೆ ಕೇಳಿಕೊಳ್ಳುವುದು ಹೀಗೆಲ್ಲಾ ಮಾಡುತ್ತಾರೆ.

ನವದೆಹಲಿ: ಲೋಕಸಭೆಯಲ್ಲಿ ಮಂಡಿಸಿರುವ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಕಾನೂನನ್ನು ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ 'ಗೋಮೂತ್ರ ತಜ್ಞ' ಎಂಬ ಹೇಳಿಕೆಗೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಕಿಡಿಕಾರಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಿದ ಅನುರಾಗ್ ಠಾಕೂರ್ ನಾನು ಇದಕ್ಕೆ ಪ್ರಿಯಾಂಕಾ ಅವರಿಗೆ ನಂತರ ಉತ್ತರಿಸುತ್ತೇನೆ. ಗಂಭೀರ ವಿಷಯಗಳ ಬಗ್ಗೆ ಮಾತನಾಡುವಾಗ ಅವರು ಮುಗ್ಧ ಮುಖಭಾವ ತೋರುವುದು, ಜನರನ್ನು ದಾರಿ ತಪ್ಪಿಸುವುದು, ಮಂದಹಾಸ ಬೀರುವುದು.

ಸ್ಪೀಕರ್ ಕೂಡ ನಗುವಂತೆ ಕೇಳಿಕೊಳ್ಳುವುದು ಹೀಗೆಲ್ಲಾ ಮಾಡುತ್ತಾರೆ. ತಮ್ಮದೇ ಹಿಂದಿನ ಸರ್ಕಾರದ ತಪ್ಪುಗಳು ಮತ್ತು ವೈಫಲ್ಯಗಳನ್ನು ಮುಚ್ಚಿಹಾಕಲು ಅವರು ಪ್ರಯತ್ನಿಸುತ್ತಾರೆ" ಎಂದು ಅನುರಾಗ್‌ ಠಾಕೂರ್‌ ಹರಿಹಾಯ್ದರು.

ಭಾರತದ ಶ್ರೇಷ್ಠ ವಿಜ್ಞಾನಿ ಮತ್ತು ಐಐಟಿ ಮದ್ರಾಸ್‌ನ ಪ್ರಾಧ್ಯಾಪಕರಾದ ವಿ. ಕಾಮಕೋಟಿ ಅವರ ಬಗ್ಗೆ, ಪ್ರಿಯಾಂಕಾ ಗಾಂಧಿ ಆಡಿದ ಮಾತುಗಳು ನನಗೆ ಬೇಸರ ತಂದಿವೆ. ಅವರು ನಮ್ಮ ಸಲಹಾ ಗುಪ್ತಚರ ಕಾರ್ಯಪಡೆಯ ಮಾಜಿ ಅಧ್ಯಕ್ಷರಾಗಿದ್ದಾರೆ.

ಅವರು ಆರ್‌ಎಸ್‌ಎಸ್ ಜೊತೆ ಗುರುತಿಸಿಕೊಂಡಿದ್ದರೆ ಅದರಲ್ಲಿ ತಪ್ಪೇನಿದೆ? ನೀವೂ ಕೂಡ ಆರ್‌ಎಸ್‌ಎಸ್ ಸೇರಬೇಕು. ಆಗ ನೀವು ಕೆಲವು ಮೌಲ್ಯಗಳನ್ನು ಕಲಿಯುತ್ತೀರಿ ಮತ್ತು ದೇಶದ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೀರಿ" ಎಂದು ಅನುರಾಗ್‌ ಠಾಕೂರ್‌ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಅವರಿಗಿಂತ ಪ್ರಿಯಾಂಕಾ ಗಾಂಧಿ ಉತ್ತಮವಾಗಿರುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಐಐಟಿ ಮದ್ರಾಸ್ ನಿರ್ದೇಶಕರ ಬಗ್ಗೆ ಇಂದು ಅವರು ಆಡಿದ ಮಾತುಗಳನ್ನು ಕೇಳಿದ ನಂತರ, ಈ ಅಣ್ಣ-ತಂಗಿ ಇಬ್ಬರೂ ಒಂದೇ ಎಂದು ನನಗೆ ಅನ್ನಿಸುತ್ತಿದೆ. ಅವರು ಒಂದೇ ಹಾದಿಯಲ್ಲಿದ್ದಾರೆ.

ಬಹುಶಃ ಅವರು ಮೆದುಳಿನ ಸರಿಯಾದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವಂತಹ ಯಾವುದೊ ವಸ್ತುವನ್ನು ಸೇವಿಸುತ್ತಿರಬೇಕು. ಬಹುಶಃ ಅವರು ಅದರ ಬದಲಿಗೆ ಗೋಮೂತ್ರವನ್ನು ಸೇವಿಸುವುದು ಉತ್ತಮವೇನೋ" ಎಂದು ಅನುರಾಗ್‌ ಠಾಕೂರ್‌ ತರಾಟೆಗೆ ತೆಗೆದುಕೊಂಡರು.

ಕಾಮಕೋಟಿ ವೀಳಿನಾಥನ್ ಅಲಿಯಾಸ್ ವಿ. ಕಾಮಕೋಟಿ ಅವರು ಐಐಟಿ ಮದ್ರಾಸ್‌ನಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಎಂಎಸ್ ಮತ್ತು ಪಿಎಚ್‌ಡಿ ಪದವಿಗಳನ್ನು ಪಡೆದರು. ಅವರು 2001 ರಲ್ಲಿ ಐಐಟಿ ಮದ್ರಾಸ್‌ನ ಅಧ್ಯಾಪಕರನ್ನು ಸೇರಿದರು ಮತ್ತು ಜನವರಿ 2022 ರಲ್ಲಿ ಅದರ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾಕ್‌ನಲ್ಲಿ ಅಮೆರಿಕ-ಸೌದಿ ಜಂಟಿ ವಾಯುದಾಳಿ: ಇರಾನ್ ಬೆಂಬಲಿತ ಉಗ್ರ ನೆಲೆಗಳು ಧ್ವಂಸ, ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ..!

ರಾಜ್ಯ ಸಚಿವ ಸಂಪುಟ ವಿಸ್ತರಣೆ: ಇಂದೇ ರಾಹುಲ್ ಗಾಂಧಿ ಒಪ್ಪಿಗೆ ಸಾಧ್ಯತೆ, ನಾಳೆ ಸಂಜೆ ನೂತನ ಸಚಿವರ ಪಟ್ಟಾಭಿಷೇಕ..?

ಪಾದಚಾರಿ ಮಾರ್ಗದಲ್ಲಿ Bescom ಅಟಾಟೋಪಕ್ಕೆ ಬ್ರೇಕ್; ಸಚಿವ ಕೃಷ್ಣ ಬೈರೇಗೌಡ ಖಡಕ್ ವಾರ್ನಿಂಗ್..!

ಕರಾವಳಿಯಲ್ಲಿ ವಿಷ ಬಿತ್ತಿದರೆ ಪರಿಣಾಮ ನೆಟ್ಟಗಿರಲ್ಲ, ಅರಬ್ಬಿ ಸಮುದ್ರದ ಮೀನುಗಳಿಗೆ ಆಹಾರವಾಗ್ತೀರಿ: ಪ್ರಕಾಶ್ ರಾಜ್‌ಗೆ ಉಡುಪಿ BJP ಶಾಸಕ ಎಚ್ಚರಿಕೆ..!

ಸುಪ್ರೀಂನ ಮಧ್ಯಂತರ ಆದೇಶ ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆಯಾಗುವ ಸಾಧ್ಯತೆ: 'ಕಿರುಕುಳ' ಮುಂದುವರಿದರೆ ಸರಿ ಇರಲ್ಲ- ದೀಪ್ಕೆ ವಾರ್ನಿಂಗ್!