ಛೋಟಾ ರಾಜನ್‌ 
ದೇಶ

ನಕಲಿ ದಾಖಲೆ ಬಳಸಿ ಪಾಸ್ ಪೋರ್ಟ್ ಪಡೆದ ಪ್ರಕರಣ: ಛೋಟಾ ರಾಜನ್‌ಗೆ 7 ವರ್ಷ ಜೈಲು ಶಿಕ್ಷೆ!

ಶಿಕ್ಷೆಗೆ ಗುರಿಯಾಗಿರುವ ಛೋಟಾ ರಾಜನ್ ಪ್ರಸ್ತುತ ನವದೆಹಲಿಯ ತಿಹಾರ್ ಜೈಲಿನಲ್ಲಿದ್ದು, ಅಲ್ಲಿ ಈಗಾಗಲೇ ಜೀವಾವಧಿ ಕಠಿಣ ಕಾರಾಗೃಹವಾಸವನ್ನು ಅನುಭವಿಸುತ್ತಿದ್ದಾನೆ ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನವದೆಹಲಿ: ನಕಲಿ ದಾಖಲೆಗಳನ್ನು ಬಳಸಿಕೊಂಡು ಪಾಸ್‌ಪೋರ್ಟ್ ಪಡೆದಿದ್ದಕ್ಕಾಗಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಚೆನ್ನೈನ ವಿಶೇಷ ಸಿಬಿಐ ನ್ಯಾಯಾಲಯವು ಗುರುವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲಾ ವರ್ಗಾವಣೆ ಪ್ರಮಾಣಪತ್ರ ಮತ್ತು ಪಡಿತರ ಚೀಟಿಯಂತಹ ಸುಳ್ಳು ದಾಖಲೆಗಳನ್ನು ಸಲ್ಲಿಸುವ ಮೂಲಕ 'ವಿಜಯ ಕದಮ್' ಎಂಬ ನಕಲಿ ಗುರುತನ್ನು ಸೃಷ್ಟಿಸಿಕೊಂಡಿದ್ದ ರಾಜನ್ ವಿರುದ್ಧದ 22 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಆತನಿಗೆ ಶಿಕ್ಷೆ ವಿಧಿಸುವಲ್ಲಿ ತನಿಖಾ ಸಂಸ್ಥೆ ಸಿಬಿಐ ಯಶಸ್ವಿಯಾಗಿದೆ.

ಶಿಕ್ಷೆಗೆ ಗುರಿಯಾಗಿರುವ ಛೋಟಾ ರಾಜನ್ ಪ್ರಸ್ತುತ ನವದೆಹಲಿಯ ತಿಹಾರ್ ಜೈಲಿನಲ್ಲಿದ್ದು, ಅಲ್ಲಿ ಈಗಾಗಲೇ ಜೀವಾವಧಿ ಕಠಿಣ ಕಾರಾಗೃಹವಾಸವನ್ನು ಅನುಭವಿಸುತ್ತಿದ್ದಾನೆ ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿಯು ನಕಲಿ ದಾಖಲೆಗಳನ್ನು ಸಲ್ಲಿಸಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ ಪಡೆದುಕೊಂಡಿದ್ದಾನೆ. ಆ ಮೂಲಕ ಚೆನ್ನೈನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ವಂಚಿಸಿರುವ ಆರೋಪದ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿತ್ತು. ಬಳಿಕ ತನಿಖಾ ಸಂಸ್ಥೆಯು 2002ರ ಮಾರ್ಚ್ 19ರಂದು ತನಿಖೆಯನ್ನು ಪ್ರಾರಂಭಿಸಿತ್ತು.

"ಆರೋಪಿ ಛೋಟಾ ರಾಜನ್ ಸುಳ್ಳು ದಾಖಲೆಗಳನ್ನು ಸಲ್ಲಿಸುವ ಮೂಲಕ 'ವಿಜಯ ಕದಮ್' ಹೆಸರಿನಲ್ಲಿ ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಅಲ್ಲದೆ, ವಿಜಯ ಕದಮ್‌ನ ನಿಜವಾದ ಹೆಸರು ರಾಜೇಂದ್ರ (ಅಲಿಯಾಸ್ ನಾನಾ ಅಲಿಯಾಸ್ ಛೋಟಾ ರಾಜನ್) ಆಗಿದ್ದು, ಆತ ಮುಂಬೈ ನಿವಾಸಿ ಸದಾಶಿವ ಅವರ ಪುತ್ರ ಎಂಬುದು ಕೂಡ ಪತ್ತೆಯಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IIT Madras ನಿರ್ದೇಶಕ ಕಾಮಕೋಟಿ 'ಗೋಮೂತ್ರ ತಜ್ಞ': ಪ್ರಿಯಾಂಕಾ ಗಾಂಧಿ ಹೇಳಿಕೆ ಖಂಡಿಸಿ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರಿಂದ ಪತ್ರ

ಪ್ರಧಾನಿ ಮೋದಿ ವಿಷ್ಣುವಿನ ಅವತಾರ; ಅವರ ಪಾದ ತೊಳೆದು ನೀರು ಕುಡಿಯುತ್ತೇನೆ: CJPಗರು ನಿಷ್ಪ್ರಯೋಜಕರು: ಬಾರ್ಡರ್ ನಟ ಸುದೇಶ್ ಬೆರ್ರಿ

ರಾಮಾಯಣ ಟ್ರೈಲರ್: ಸೀತಾ ಮಾತೆ ಪಾತ್ರಕ್ಕೆ ಸಾಯಿ ಪಲ್ಲವಿ ಬೇಕಿತ್ತಾ? ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ!

ಪಾಕ್ ಸೇನೆ ಇಸ್ರೇಲ್ ಗಿಂತಲೂ ಕೆಟ್ಟದು: ಮುನೀರ್ ಒಬ್ಬ 'Zalim'; ಕ್ಯಾಮರಾ ಮುಂದೆ ಒಂದೇ ಸಮನೆ ಕಣ್ಣೀರಿಟ್ಟ PoK ವ್ಯಕ್ತಿ! ಮನಕಲಕುವ Video

BJP ಸೇರಿ, ಇಲ್ಲದಿದ್ದರೆ ನಿಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ: ಅಭಿಜೀತ್ ದೀಪ್ಕೆಗೆ 'ವಿಡಿಯೋ ಬೆದರಿಕೆ' ಬಿಚ್ಚಿಟ್ಟ ತಾಯಿ!