ಸಾಂದರ್ಭಿಕ ಚಿತ್ರ 
ದೇಶ

ಸಚಿವರುಗಳಿಗೆ ಪತ್ರಿಕೆ, ಮ್ಯಾಗಜೀನ್: ಆನ್‌ಲೈನ್ ವ್ಯವಸ್ಥೆಗೆ ಬದಲಾಯಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ!

ಹೊಸ ವ್ಯವಸ್ಥೆಯಡಿ ಸಚಿವರು ಪತ್ರಿಕೆಗಳು ಮತ್ತು ಮ್ಯಾಗಜೀನ್ ಗಾಗಿ ಆನ್‌ಲೈನ್ ಚಂದಾದಾರಿಕೆಯನ್ನು ಪಡೆಯಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚ, ಬಿಲ್‌ಗಳನ್ನು ಸಲ್ಲಿಸಿದ ನಂತರ ಲಭ್ಯವಿರುವ ಕಚೇರಿ ವೆಚ್ಚದ ಅನುದಾನದಿಂದ ಆಯಾ ಆಡಳಿತಾತ್ಮಕ ಇಲಾಖೆಗಳು ಭರಿಸಲಿವೆ.

ಮುಂಬೈ: ಸೆಪ್ಟೆಂಬರ್ 1 ರಿಂದ ಉಪ ಮುಖ್ಯಮಂತ್ರಿಗಳು ಮತ್ತು ಸಚಿವರ ಕಚೇರಿಗಳು ಹಾಗೂ ಅಧಿಕೃತ ನಿವಾಸಗಳಿಗೆ ಭೌತಿಕ ರೂಪದ (ಮುದ್ರಿತ) ಪತ್ರಿಕೆಗಳು ಮತ್ತು ಮ್ಯಾಗಜೀನ್ ಒದಗಿಸುವ ವ್ಯವಸ್ಥೆಯನ್ನು ನಿಲ್ಲಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಬದಲಾಗಿ ಅವರು ಆನ್‌ಲೈನ್ ಚಂದಾದಾರಿಕೆಯನ್ನು ಪಡೆಯುವಂತೆ ಸೂಚಿಸಲಾಗಿದೆ.

ಈ ಸಂಬಂಧ ಸಾಮಾನ್ಯ ಆಡಳಿತ ಇಲಾಖೆಯು (GAD) ಗುರುವಾರ ಆದೇಶ ಹೊರಡಿಸಿದ್ದು, ಉಪ ಮುಖ್ಯಮಂತ್ರಿಗಳು, ಸಚಿವರು, ರಾಜ್ಯ ಸಚಿವರ ಕಚೇರಿಗಳು ಹಾಗೂ ನಿವಾಸಗಳಿಗೆ ಇಲಾಖೆಯ ಮೂಲಕ ಮುದ್ರಿತ ಪತ್ರಿಕೆಗಳು ಮತ್ತು ಮ್ಯಾಗಜೀನ್ ಒದಗಿಸುವ ಪ್ರಸ್ತುತ ವ್ಯವಸ್ಥೆಯನ್ನು ಸೆಪ್ಟೆಂಬರ್ 1 ರಿಂದ ರದ್ದುಗೊಳಿಸಲಾಗುವುದು ಎಂದು ಹೇಳಲಾಗಿದೆ.

ಹೊಸ ವ್ಯವಸ್ಥೆಯಡಿ ಸಚಿವರು ಪತ್ರಿಕೆಗಳು ಮತ್ತು ಮ್ಯಾಗಜೀನ್ ಗಾಗಿ ಆನ್‌ಲೈನ್ ಚಂದಾದಾರಿಕೆಯನ್ನು ಪಡೆಯಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚ, ಬಿಲ್‌ಗಳನ್ನು ಸಲ್ಲಿಸಿದ ನಂತರ ಲಭ್ಯವಿರುವ ಕಚೇರಿ ವೆಚ್ಚದ ಅನುದಾನದಿಂದ ಆಯಾ ಆಡಳಿತಾತ್ಮಕ ಇಲಾಖೆಗಳು ಭರಿಸಲಿವೆ.

ಆದಾಗ್ಯೂ, ಮುಖ್ಯಮಂತ್ರಿಯವರಿಗೆ ವಿನಾಯಿತಿ ನೀಡಲಾಗಿದೆ. ಮುಖ್ಯಮಂತ್ರಿಯವರ ಕಚೇರಿ ಮತ್ತು ಅಧಿಕೃತ ನಿವಾಸಕ್ಕೆ ಭೌತಿಕ ಪತ್ರಿಕೆಗಳು, ಮ್ಯಾಗಜೀನ್ ಪೂರೈಸುವ ಪ್ರಸ್ತುತ ವ್ಯವಸ್ಥೆಯು ಮುಂದುವರಿಯಲಿದ್ದು, ಇದರ ವೆಚ್ಚವನ್ನು ಸಾಮಾನ್ಯ ಆಡಳಿತ ಇಲಾಖೆಯೇ (GAD) ಭರಿಸಲಿದೆ.

ಈ ನಿರ್ಧಾರವು, ಬೇಡಿಕೆಯ ಆಧಾರದ ಮೇಲೆ ಸಚಿವರಿಗೆ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಖರೀದಿಸಿ ಪೂರೈಸುವ ಹಾಗೂ ಬಿಲ್‌ಗಳನ್ನು ಕೇಂದ್ರೀಕೃತವಾಗಿ ಪಾವತಿಸುವ ಹಿಂದಿನ ವ್ಯವಸ್ಥೆಯನ್ನು ರದ್ದುಗೊಳಿಸುತ್ತದೆ. ಈ ಪದ್ಧತಿಯು ಹಲವು ವರ್ಷಗಳಿಂದ ಜಾರಿಯಲ್ಲಿತ್ತು ಎಂದು ಸರ್ಕಾರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ