ಸಾಂದರ್ಭಿಕ ಚಿತ್ರ 
ದೇಶ

ಮಹಾರಾಷ್ಟ್ರ ರೈತರಿಗೆ ಬಂಪರ್ ಕೊಡುಗೆ: 2 ಲಕ್ಷ ರೂ ವರೆಗಿನ ಸಾಲ ಮನ್ನಾ; 56 ಲಕ್ಷ ಕೃಷಿಕರಿಗೆ ಪ್ರಯೋಜನ!

2024ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ನೀಡಿದ ಪ್ರಮುಖ ಭರವಸೆಗಳಲ್ಲಿ ಕೃಷಿ ಸಾಲ ಮನ್ನಾ ಒಂದಾಗಿತ್ತು.

ಮುಂಬೈ: ಮಹಾರಾಷ್ಟ್ರ ಸರ್ಕಾರ ರೈತರಿಗೆ ಬಂಪರ್ ಕೊಡುಗೆ ಪ್ರಕಟಿಸಿದೆ. 2 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ ಮಾಡುವ ಮಹತ್ವದ ನಿರ್ಧಾರಕ್ಕೆ ಸಚಿವ ಸಂಪುಟ ಸಭೆ ಮಂಗಳವಾರ ಅನುಮೋದನೆ ನೀಡಿದೆ.

ಮುಂಗಾರು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

2024ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ನೀಡಿದ ಪ್ರಮುಖ ಭರವಸೆಗಳಲ್ಲಿ ಕೃಷಿ ಸಾಲ ಮನ್ನಾ ಒಂದಾಗಿತ್ತು.

ಆದಾಗ್ಯೂ, ವಿಧಾನ ಪರಿಷತ್ ಚುನಾವಣೆಯಿಂದಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಧಿಕೃತ ಘೋಷಣೆ ಸದ್ಯಕ್ಕೆ ಅಸಂಭವ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಒಳಗೊಳ್ಳಲಿದ್ದು, ಸುಮಾರು 56 ಲಕ್ಷ ರೈತರಿಗೆ ಸೇರಿದ 36, 585 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡುವ ನಿರೀಕ್ಷೆಯಿದೆ. ನಿಯಮಿತವಾಗಿ ಬೆಳೆ ಸಾಲ ಮರುಪಾವತಿಸಿದ ರೈತರಿಗೆ 50,000 ರೂ.ಗಳವರೆಗೆ ಪ್ರೋತ್ಸಾಹ ಧನ ನೀಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್; ಭಾರತ್ ಜೋಡೋ ಯುವ ಸಂಘಕ್ಕೆ 10 ಲಕ್ಷ ರೂ: ನೂತನ CM ಡಿಕೆಶಿ ಹಲವು ಘೋಷಣೆ

KPCC ಅಧ್ಯಕ್ಷ ಸ್ಥಾನಕ್ಕೆ CM ಡಿಕೆಶಿ ರಾಜೀನಾಮೆ: ಬಿ.ಕೆ ಹರಿಪ್ರಸಾದ್ ನೂತನ ಸಾರಥಿ; ಸತೀಶ್ ಜಾರಕಿಹೊಳಿಗೆ ತೀವ್ರ ನಿರಾಸೆ!

IPL 2026: ನಿಷೇಧದ ಬೆನ್ನಲ್ಲೇ RCB ಸ್ಫೋಟಕ ಬ್ಯಾಟರ್ ಸಿಗರೇಟ್ ಸೇದುವ ವಿಡಿಯೋ ವೈರಲ್; ಮತ್ತೆ ನಿಯಮ ಉಲ್ಲಂಘಿಸಿದ್ರಾ ಟಿಮ್?

'ಯೋಗಿ ಜೀ ನಮ್ಮನ್ನು ಕ್ಷಮಿಸಿ': ಉತ್ತರ ಪ್ರದೇಶ CM ಕ್ಷಮೆ ಕೋರಿದ 150 ರೌಡಿಶೀಟರ್ಸ್!

ನೆತನ್ಯಾಹು 'ಹುಚ್ಚ'; ಇರಾನ್ ಜೊತೆಗಿನ ಶಾಂತಿ ಮಾತುಕತೆ ಹಳ್ಳಹಿಡಿಸುತ್ತಿದ್ದಾರೆ: ಡೊನಾಲ್ಡ್ ಟ್ರಂಪ್

SCROLL FOR NEXT