ಬ್ರಿಜ್ ಭೂಷಣ್ 
ದೇಶ

ನಾನು ವೀಕ್, ಅವರು ಸ್ಟ್ರಾಂಗ್, ಸತ್ಯ ಹೇಳುವ ಸ್ಥಿತಿಯಲ್ಲಿ ನಾನಿಲ್ಲ: ರಾಮಮಂದಿರ ದೇಣಿಗೆ ಅಕ್ರಮದ ಬಗ್ಗೆ ಬ್ರಿಜ್ ಭೂಷಣ್ ಮಾತು!

ನಾನು ತುಂಬಾ ದುರ್ಬಲ ವ್ಯಕ್ತಿ. ಅವರು ಬಹಳ ಪ್ರಭಾವಶಾಲಿ ಜನರು, ನಾನು ಸತ್ಯವನ್ನು ಮಾತನಾಡಿದರೆ ತೊಂದರೆಗೆ ಸಿಲುಕುತ್ತೇನೆ. ನನಗೆ ಈಗ ಸತ್ಯವನ್ನು ಮಾತನಾಡಲು ಧೈರ್ಯವಿಲ್ಲ. ಸಮಯ ಬಂದರೆ, ನಾನು ಮಾತನಾಡುತ್ತೇನೆ"

ನವದೆಹಲಿ: ಅಯೋಧ್ಯೆ ರಾಮಮಂದಿರದ ದೇಣಿಗೆ ದುರುಪಯೋಗ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಈಗ ಸತ್ಯವನ್ನು ಬಹಿರಂಗಪಡಿಸುವ ಸ್ಥಿತಿಯಲ್ಲಿ ನಾನಿಲ್ಲ ಎಂದು ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.

ದೆಹಲಿಯಲ್ಲಿ 10 ದಿನಗಳ ವಾಸ್ತವ್ಯದಿಂದ ಹಿಂದಿರುಗಿದ ನಂತರ ವಿಷ್ಣೋಹರ್‌ಪುರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್ ನಾನು ತುಂಬಾ ದುರ್ಬಲ ವ್ಯಕ್ತಿ. ಅವರು ಬಹಳ ಪ್ರಭಾವಶಾಲಿ ಜನರು, ನಾನು ಸತ್ಯವನ್ನು ಮಾತನಾಡಿದರೆ ತೊಂದರೆಗೆ ಸಿಲುಕುತ್ತೇನೆ. ನನಗೆ ಈಗ ಸತ್ಯವನ್ನು ಮಾತನಾಡಲು ಧೈರ್ಯವಿಲ್ಲ. ಸಮಯ ಬಂದರೆ, ನಾನು ಮಾತನಾಡುತ್ತೇನೆ" ಎಂದು ಹೇಳಿದರು.

ಆದರೆ, ‘ಅವರು’ ಎಂದರೆ ‘ಯಾರು’ ಎಂಬುದನ್ನು ಸಿಂಗ್‌ ಸ್ಪಷ್ಟಪಡಿಸಲಿಲ್ಲ. ಅಯೋಧ್ಯೆಯ ರಾಮಮಂದಿರಕ್ಕೆ ಬಂದ ದೇಣಿಗೆ ಹಣ ದುರುಪಯೋಗಪಡಿಸಿಕೊಳ್ಳಾಗಿದೆ ಎಂಬ ಆರೋಪದ ನಡುವೆಯೇ ಸಿಂಗ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ.

ಇದೇ ವೇಳೆ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ‍‍ಪ್ರತಿಕ್ರಿಯಿಸಿದ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಧರ್ಮೇಂದ್ರ ಅವರ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಣಿಪುರದಲ್ಲಿ ಮತ್ತೆ ರಕ್ತಪಾತ: ಅಪಹರಣಕ್ಕೊಳಗಾಗಿದ್ದ ನಾಗಾ ಸಮುದಾಯದ 6 ಮಂದಿ ಶವವಾಗಿ ಪತ್ತೆ, ಇನ್ನು ಸುಮ್ಮನಿರಲ್ಲ- ಮಣಿಪುರ CM ಖಡಕ್ ಎಚ್ಚರಿಕೆ!

Hormuz ಜಲಸಂಧಿ ಮತ್ತೆ ಸ್ಥಗಿತ, ಜಗತ್ತಿಗೆ ಶಾಕ್ ಕೊಟ್ಟ Iran, ಅಮೆರಿಕ ಮುಂದಿನ ನಡೆಯೇನು?

ಹಾರ್ಮುಜ್ ಸಮೀಪ ದಾಳಿ: ಇಬ್ಬರು ಭಾರತೀಯ ನಾವಿಕರು ಸಾವು, ಮುಖ್ಯ ಇಂಜಿನಿಯರ್ ನಾಪತ್ತೆ

US-Iran war: ಅಮೆರಿಕಾ ದಾಳಿಗೆ ಇರಾನ್ ತಿರುಗೇಟು; ಬಹ್ರೇನ್-ಕುವೈತ್ ನೆಲೆಗಳ ಮೇಲೆ ಕ್ಷಿಪಣಿ ದಾಳಿ, ಯುದ್ಧ ಪುನರಾರಂಭ..!

ವಾಹನ ಸವಾರರಿಗೆ Good news: Ethanol ಮಿಶ್ರಿತ ಪೆಟ್ರೋಲ್ ಮೇಲಿನ ಎಲ್ಲಾ ಸೆಸ್-ಅಬಕಾರಿ ಸುಂಕ ರದ್ದುಗೊಳಿಸಿದ ಕೇಂದ್ರ ಸರ್ಕಾರ..!

SCROLL FOR NEXT