ಪಾಕ್ ಬಲೂನ್ 
ದೇಶ

ಹಿಮಾಚಲ ಪ್ರದೇಶ: ಹೊಲದಲ್ಲಿ 'ಪಾಕಿಸ್ತಾನಿ' ಬಲೂನ್ ಪತ್ತೆ! ಗ್ರಾಮಸ್ಥರಲ್ಲಿ ಆತಂಕ

PIA ಎಂದು ಹಸಿರು ಬಣ್ಣದಲ್ಲಿ ಬರೆಯಲಾದ ಬಲೂನ್ ಹೊಲದಲ್ಲಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತದನಂತರ ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಸಿರ್ಮೌರ್: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಬಖೋಗ್ ಗ್ರಾಮದ ಹೊಲದಲ್ಲಿ ಭಾನುವಾರ ಪಾಕಿಸ್ತಾನಿ ಬಲೂನ್ ಪತ್ತೆಯಾದ ನಂತರ ಗ್ರಾಮಸ್ಥರು ಕೆಲಕಾಲ ಆತಂಕಗೊಂಡರು.

PIA ಎಂದು ಹಸಿರು ಬಣ್ಣದಲ್ಲಿ ಬರೆಯಲಾದ ಬಲೂನ್ ಹೊಲದಲ್ಲಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತದನಂತರ ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ ಇದೊಂದು ಆಟಿಕೆ ವಸ್ತು ಎಂದು ಪೊಲೀಸರು ಹೇಳಿದ್ದು, ಯಾವುದೇ ಭದ್ರತಾ ಬೆದರಿಕೆ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಮೇಲ್ನೋಟಕ್ಕೆ ಬಲೂನ್ ಅನುಮಾನಾಸ್ಪದವಾಗಿ ಕಾಣಿಸುತ್ತಿಲ್ಲ ಮತ್ತು ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ರಾಜ್‌ಗಢ ಡಿಎಸ್‌ಪಿ ವಿದ್ಯಾಚಂದ್ ನೇಗಿ ಹೇಳಿದ್ದಾರೆ.

ಸಾರ್ವಜನಿಕರು ಎಲ್ಲಿಯಾದರೂ ಅನುಮಾನಾಸ್ಪದ ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಈ ಹಿಂದೆಯೂ ಉನಾ, ಬಿಲಾಸ್‌ಪುರ ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ ಇಂತಹ ಬಲೂನ್‌ಗಳು ಕಾಣಿಸಿಕೊಂಡಿದ್ದವು.

ಇಂತಹ ಬಲೂನ್‌ಗಳು ಭಾರತ-ಪಾಕಿಸ್ತಾನದ ಗಡಿಯಲ್ಲಿ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಆಗಾಗ್ಗೆ ಕಂಡುಬರುತ್ತವೆ. ಮನರಂಜನಾ ಚಟುವಟಿಕೆಯಾಗಿ ಪ್ರಚಾರ ಮತ್ತು ಧಾರ್ಮಿಕ ಸಂದೇಶಗಳನ್ನು ತಲುಪಿಸುವ ಉದ್ದೇಶಗಳಿಗಾಗಿ ಇಂತಹ ಬಲೂನ್ ಗಳನ್ನು ಆಗಾಗ್ಗ ಹಾರಿಬಿಡಲಾಗುತ್ತದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಮತ್ತೊಂದು F-15 ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್, 4ನೇ ಯುದ್ಧ ವಿಮಾನ ಪತನ!

US ಏರ್​ಪೋರ್ಟ್ ಭದ್ರತಾ ಸಿಬ್ಬಂದಿಯ ವೇತನ ಪಾವತಿಗೆ ಎಲೋನ್ ಮಸ್ಕ್ ಮುಂದು! ಟ್ರಂಪ್ ಕಿಡಿ

IPL 2026: 6,6,6,6,6,6,6,6.. 69 ಎಸೆತಗಳಲ್ಲಿ 195 ರನ್ ಚಚ್ಚಿದ RCBಯ ಅನ್ ಸೋಲ್ಡ್ ಬ್ಯಾಟರ್ Swastik Chikara!

Lamborghini ಕೇಸ್ ಗೆ ಬಿಗ್ ಟ್ವಿಸ್ಟ್: ಮುತ್ತಪ್ಪ ರೈ ಪುತ್ರ ರಿಕ್ಕಿಗೆ ಪೊಲೀಸ್ ಸಮನ್ಸ್, ಐಷಾರಾಮಿ ಕಾರು ಸೀಜ್!

ಮಡಿಕೇರಿ: ವಿರಾಜಪೇಟೆಯ ಕಕ್ಲೂರು ಸುತ್ತಮುತ್ತ ಭೀತಿ ಮೂಡಿಸಿದ್ದ ಒಂಟಿ ಸಲಗ ಸೆರೆ; ಕಾರ್ಯಾಚರಣೆ ಯಶಸ್ವಿ

SCROLL FOR NEXT