ಪಳನಿಸ್ವಾಮಿ 
ದೇಶ

ತಮಿಳುನಾಡು ವಿಧಾನಸಭಾ ಚುನಾವಣೆ: AIADMK 23 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಇಂದು ಪ್ರಕಟವಾದ ಪಟ್ಟಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ, ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಸೇರಿದಂತೆ ಹಲವಾರು ಹಿರಿಯ ನಾಯಕರು ಮತ್ತು ಮಾಜಿ ಸಚಿವರಿಗೆ ಟಿಕೆಟ್ ನೀಡಲಾಗಿದೆ.

ಚೆನ್ನೈ: ಏಪ್ರಿಲ್‌ನಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(AIADMK) ಬುಧವಾರ 23 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇಂದು ಪ್ರಕಟವಾದ ಪಟ್ಟಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ, ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಸೇರಿದಂತೆ ಹಲವಾರು ಹಿರಿಯ ನಾಯಕರು ಮತ್ತು ಮಾಜಿ ಸಚಿವರಿಗೆ ಟಿಕೆಟ್ ನೀಡಲಾಗಿದೆ.

ಪಳನಿಸ್ವಾಮಿ ಎಡಪ್ಪಾಡಿಯಿಂದ ಸ್ಪರ್ಧಿಸಲಿದ್ದಾರೆ. ಸಿ. ವಿಜಯಭಾಸ್ಕರ್(ವಿರಳಿಮಲೈ), ಎಂ.ಆರ್. ವಿಜಯಭಾಸ್ಕರ್ (ಕರೂರು), ಎಸ್.ಪಿ. ವೇಲುಮಣಿ(ತೊಂಡಮುತ್ತೂರ್), ಮತ್ತು ಡಿ. ಜಯಕುಮಾರ್(ರಾಯಪುರಂ) ಅವರು ಟಿಕೆಟ್ ಘೋಷಿಸಲಾದ ಇತರ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಇತರ ಅಭ್ಯರ್ಥಿಗಳೆಂದರೆ, ನಾಥಂ ಆರ್. ವಿಶ್ವನಾಥನ್(ನಾಥಂ), ಪಿ. ತಂಗಮಣಿ(ಕುಮಾರಪಾಳ್ಯಂ), ಸಿ.ವಿ. ಷಣ್ಮುಗಂ (ಮೈಲಂ), ಸೆಲ್ಲೂರ್ ಕೆ.ರಾಜು (ಮಧುರೈ ಪಶ್ಚಿಮ), ಕೆ.ಪಿ. ಅನ್ಬಳಗನ್ (ಪಾಲಕೋಡ್), ಆರ್.ಕಾಮರಾಜ್ (ನನ್ನಿಲಂ), ಓ.ಎಸ್. ಮಣಿಯನ್(ವೇದಾರಣ್ಯಂ), ಸಿ.ವಿಜಯಭಾಸ್ಕರ್(ವಿರಾಲಿಮಲೈ), ಕಡಂಬೂರ್ ಸಿ.ರಾಜು (ಕೋವಿಲ್ಪಟ್ಟಿ), ಆರ್.ಬಿ.ಉದಯಕುಮಾರ್ (ತಿರುಮಂಗಲಂ), ಕೆ.ಟಿ. ರಾಜೇಂದ್ರ ಭಾಲಾಜಿ (ಶಿವಕಾಶಿ), ಪಿ.ಬೆಂಜಮಿನ್ (ಮಧುರವಾಯಲ್), ಅಗ್ರಿ ಎಸ್.ಎಸ್.ಕೃಷ್ಣಮೂರ್ತಿ (ಕಳಸಪಕ್ಕಂ), ವಿ.ವಿ. ರಾಜನ್ ಚೆಲ್ಲಪ್ಪ (ತಿರುಪ್ಪರಕುಂದ್ರಂ), ಕೆ.ಸಿ. ಕರುಪ್ಪಣ್ಣನ್ (ಭವಾನಿ), ಕೆ.ಸಿ. ವೀರಮಣಿ (ಜೋಲಾರಪೇಟೆ), ಎಂ.ಆರ್.ವಿಜಯಭಾಸ್ಕರ್ (ಕರೂರು), ಮತ್ತು ಎಸ್.ರಾಜೇಂದ್ರನ್ (ಅರಿಯಲೂರು).

ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಇಂದು ಸಂಜೆ ಮೈಲಾಪುರದಿಂದ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರಾಚ್ಯ ಸಂಘರ್ಷ: ಅಮೆರಿಕಾ ನಂಬಿಕೆಗೆ ಅರ್ಹವಲ್ಲ, ಭಾರತ ಬಂದರೆ ಶಾಂತಿ ಸಾಧ್ಯ; ಇರಾನ್

ಇರಾನ್ ಅಣ್ವಸ್ತ್ರ ಹೊಂದಬಾರದು, ಹಾರ್ಮುಜ್ ಜಲಸಂಧಿ ಮುಕ್ತವಾಗಿರಬೇಕು: ಅಮೆರಿಕಾ ನಿಲುವಿಗೆ ಚೀನಾ ಸಹಮತ

ದಳಪತಿ ವಿಜಯ್ ಪ್ರಧಾನ ಮಂತ್ರಿಯಾಗುತ್ತಾರಾ? ತಮಿಳು ನಾಡು ಸಿಎಂ ರಾಜಕೀಯ ಭವಿಷ್ಯ ನುಡಿದ ಜ್ಯೋತಿಷಿ ರಾಧನ್ ಪಂಡಿತ್-Video

ರೈತರು ಎರಡೇಟು ಹೊಡೆದರೂ, ನನ್ನ ಬಟ್ಟೆ ಹರಿದರೂ ಬಿಡದಿ ಟೌನ್‌ಶಿಪ್‌ ಮಾಡಿಯೇ ಸಿದ್ದ: ಡಿ ಕೆ ಶಿವಕುಮಾರ್

ದಾವಣಗೆರೆಯಲ್ಲಿ ಭಾರೀ ಮಳೆ: ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

SCROLL FOR NEXT