ಇತ್ತೀಚಿಗೆ ನಡೆದ ಮತದಾನದ ಚಿತ್ರ 
ದೇಶ

ಪಶ್ಚಿಮ ಬಂಗಾಳ: ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮೇ 21 ರಂದು ಮರು ಮತದಾನ; ಚುನಾವಣಾ ಆಯೋಗ ಆದೇಶ

ಹೆಚ್ಚಿನ ಸಂಖ್ಯೆಯ ಮತಗಟ್ಟೆಗಳಲ್ಲಿ ಅಕ್ರಮಗಳು ವರದಿಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದರಿಂದಾಗಿ ಹಿಂದಿನ ಪ್ರಕ್ರಿಯೆಯನ್ನು ರದ್ದುಗೊಳಿಸಿ ಎಲ್ಲಾ ಮತಗಟ್ಟೆಗಳಲ್ಲಿ ಹೊಸದಾಗಿ ಮತದಾನ ನಡೆಸಲು ನಿರ್ಧರಿಸಲಾಗಿದೆ.

ಫಾಲ್ಟಾ: ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಮೇ 21 ರಂದು ಮರು ಮತದಾನ ನಡೆಸಲು ಭಾರತೀಯ ಚುನಾವಣಾ ಆಯೋಗ ಶನಿವಾರ ಆದೇಶಿಸಿದೆ.

ಏಪ್ರಿಲ್ 29 ರಂದು ನಡೆದ ಮತದಾನದ ಸಮಯದಲ್ಲಿ "ಗಂಭೀರ ಚುನಾವಣಾ ಅಪರಾಧಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಬುಡಮೇಲು ಕೃತ್ಯಗಳಾಗಿರುವುದನ್ನು ಗುರುತಿಸಿದ ನಂತರ ಚುನಾವಣಾ ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ.

ಹೆಚ್ಚಿನ ಸಂಖ್ಯೆಯ ಮತಗಟ್ಟೆಗಳಲ್ಲಿ ಅಕ್ರಮಗಳು ವರದಿಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದರಿಂದಾಗಿ ಹಿಂದಿನ ಪ್ರಕ್ರಿಯೆಯನ್ನು ರದ್ದುಗೊಳಿಸಿ ಎಲ್ಲಾ ಮತಗಟ್ಟೆಗಳಲ್ಲಿ ಹೊಸದಾಗಿ ಮತದಾನ ನಡೆಸಲು ನಿರ್ಧರಿಸಲಾಗಿದೆ.

ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಲಿದೆ ಎಂದು ಚುನಾವಣಾ ಸಮಿತಿ ಹೇಳಿದೆ. ಘೋಷಿಸಲಾದ ವೇಳಾಪಟ್ಟಿ ಪ್ರಕಾರ, ಮೇ 21 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮರು ಮತದಾನ ನಡೆಯಲಿದ್ದು, ಮೇ 24 ರಂದು ಮತ ಎಣಿಕೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಸತ್ತಿನಲ್ಲಿ ತೀವ್ರ ಗದ್ದಲ: ಅಮಿತ್ ಶಾ ಹೇಳಿಕೆಗೆ ವಿಪಕ್ಷಗಳ ಪಟ್ಟು, ಆಗಸ್ಟ್ 10ರವರೆಗೆ ಲೋಕಸಭೆ-ರಾಜ್ಯಸಭೆ ಕಲಾಪ ಮುಂದೂಡಿಕೆ..!

ಸುಳ್ಳು ಸುದ್ದಿ ಬಿತ್ತರ ಆರೋಪ: NDTV, India Todayಗೆ ಉದಯನಿಧಿ ಶಾಕ್, 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್..!

Video: ಕೌಲಾಲಂಪುರ-ಕೊಚ್ಚಿ ವಿಮಾನದಲ್ಲಿ ಹೈಡ್ರಾಮಾ: ಆಗಸದಲ್ಲೇ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕ! ಆತಂಕ ಸೃಷ್ಟಿ!

'Islamic NATO' ಊಹಾಪೋಹಗಳಿಗೆ ಮತ್ತಷ್ಟು ಬಲ: ಹೊಸ ರಕ್ಷಣಾ ಒಪ್ಪಂದದತ್ತ ಟರ್ಕಿ-ಸೌದಿ-ಪಾಕಿಸ್ತಾನ, ಜಾಗತಿಕ ಮಟ್ಟದಲ್ಲಿ ಹೆಚ್ಚಿದ ಕುತೂಹಲ..!

ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ಲಕ್ಷಾಂತರ ರೂ ವಂಚನೆ; ಪ್ರಶ್ನಿಸಿದ ಕನ್ನಡಿಗರಿಗೆ ಅಪಮಾನ, ಕೊನೆಗೂ ಕ್ಷಮೆ ಯಾಚನೆ! Video