ಡಿಎಂಕೆ ನಾಯಕ ಎಂಕೆ ಸ್ಟ್ಯಾಲಿನ್-ಟಿವಿಕೆ ನಾಯಕ- ಟಿವಿಕೆ ಅಭ್ಯರ್ಥಿ ವಿಎಸ್ ಬಾಬು online desk
ದೇಶ

ಭದ್ರಕೋಟೆ ಕೊಳತ್ತೂರಿನಲ್ಲಿ MK Stalin ಗೆ ಭಾರಿ ಮುಖಭಂಗ: DMK ಯಿಂದ ಹೊರಬಂದು ಸಿಎಂ ಸೋಲಿಸಿದ TVK ಅಭ್ಯರ್ಥಿ!

ಹಾಲಿ ಸಿಎಂ ಡಿಎಂಕೆ ನಾಯಕ ಎಂಕೆ ಸ್ಟ್ಯಾಲಿನ್ ತಮ್ಮ ಭದ್ರಕೋಟೆ ಕೊಳತ್ತೂರಿನಲ್ಲಿ ಸ್ಪರ್ಧಿಸಿರುವ ಎಂಕೆ ಸ್ಟ್ಯಾಲಿನ್, ಟಿವಿಕೆ ವಿಎಸ್ ಬಾಬು ವಿರುದ್ಧ ಹೀನಾಯವಾಗಿ ಸೋತಿದ್ದಾರೆ.

ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅಧಿಕಾರಕ್ಕೇರುವುದು ನಿಶ್ಚಿತವಾಗಿದ್ದು, ಆಡಳಿತಾರೂಢ ಡಿಎಂಕೆಗೆ ಭಾರೀ ಹಿನ್ನಡೆ ಉಂಟಾಗಿದೆ.

ಹಾಲಿ ಸಿಎಂ ಡಿಎಂಕೆ ನಾಯಕ ಎಂಕೆ ಸ್ಟ್ಯಾಲಿನ್ ತಮ್ಮ ಭದ್ರಕೋಟೆ ಕೊಳತ್ತೂರಿನಲ್ಲಿ ಸ್ಪರ್ಧಿಸಿರುವ ಎಂಕೆ ಸ್ಟ್ಯಾಲಿನ್, ಟಿವಿಕೆ ವಿಎಸ್ ಬಾಬು ವಿರುದ್ಧ ಹೀನಾಯವಾಗಿ ಸೋತಿದ್ದಾರೆ. ಇದಷ್ಟೇ ಅಲ್ಲದೇ ಸಿಎಂ ಎಂಕೆ ಸ್ಟ್ಯಾಲಿನ್ ಸೇರಿದಂತೆ 14 ಡಿಎಂಕೆ ಸಚಿವರು ತಾವು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆ ಎದುರಿಸಿದ್ದಾರೆ.

ಸಿಎಂ ಎಂಕೆ ಸ್ಟ್ಯಾಲಿನ್ ವಿರುದ್ಧ ವಿಎಸ್ ಬಾಬು 8 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮುಖ್ಯಮಂತ್ರಿಯನ್ನು ಸೋಲಿಸಿದ ವಿಎಸ್ ಬಾಬು ಡಿಎಂಕೆ ಮಾಜಿ ನಾಯಕನಾಗಿದ್ದು, ಇತ್ತೀಚೆಗಷ್ಟೇ ಟಿವಿಕೆ ಸೇರ್ಪಡೆಯಾಗಿದ್ದರು.

ಸಂಜೆ 4.15 ರ ಹೊತ್ತಿಗೆ, ಟಿವಿಕೆ 11 ಸ್ಥಾನಗಳನ್ನು ಗೆದ್ದು 96 ಇತರ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಏತನ್ಮಧ್ಯೆ, ಆಡಳಿತಾರೂಢ ಡಿಎಂಕೆ 4 ಸ್ಥಾನಗಳಲ್ಲಿ ಜಯಗಳಿಸಿತ್ತು ಮತ್ತು 67 ಇತರ ಕ್ಷೇತ್ರಗಳಲ್ಲಿ ಮುಂದಿತ್ತು. ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಬಹುಮತದ ಸಂಖ್ಯೆ 118. ಏಪ್ರಿಲ್ 23 ರಂದು ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಸ್ಥಾನಗಳಿಗೆ ಚುನಾವಣೆಗಳು ಒಂದೇ ಹಂತದಲ್ಲಿ ನಡೆದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತ್ರಿಶಾ ವಿರುದ್ಧ ಡಬಲ್ ಮೀನಿಂಗ್ ಹೇಳಿಕೆ: ವಿಚಾರಣೆ ಬಳಿಕ ಠಾಣೆಯಿಂದ ಉದಯನಿಧಿ ಬಿಡುಗಡೆ, ಅಭಿಮಾನಿಗಳಿಂದ ಸಂಭ್ರಮ!

585.72 ಕೋಟಿ ರೂ. ಬೆಳೆ ವಿಮೆ ಪರಿಹಾರ ವಿತರಣೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಗಜಿನಿ, ಲಗಾನ್ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಖಳನಾಯಕ ಪ್ರದೀಪ್ ರಾವತ್‌ ನಿಧನ

ಅಶ್ಲೀಲ ಜೋಕ್‌ಗಳು ಸ್ವೀಕಾರಾರ್ಹವಲ್ಲ; ಉದಯನಿಧಿ ವಿರುದ್ಧದ ಪೊಲೀಸರ ಕ್ರಮ ಸರಿಯಾಗಿದೆ: ನಟಿ ಕಂಗನಾ ರಣಾವತ್

ದ್ವೇಷ ಭಾಷಣ: ಪಿಎಫ್‌ಐ ನಾಯಕನಿಗೆ ಆರು ತಿಂಗಳು ಜೈಲು ಶಿಕ್ಷೆ