TCS ಅಮಾನತುಗೊಂಡಿದ್ದ ಆರೋಪಿ ನಿದಾಖಾನ್ ಬಂಧನ 
ದೇಶ

TCS ಕಾರ್ಪೋರೇಟ್ ಜಿಹಾದ್ ಪ್ರಕರಣ: ಪರಾರಿಯಲ್ಲಿದ್ದ ಆರೋಪಿ Nida Khan ಕೊನೆಗೂ ಬಂಧನ, ರೋಚಕ ಕಾರ್ಯಾಚರಣೆ

TCS ಕಾರ್ಪೋರೇಟ್ ಜಿಹಾದ್ ಪ್ರಕರಣದಲ್ಲಿ ಸಂಸ್ಥೆಯಿಂದ ಅಮಾನತುಗೊಂಡು ಪರಾರಿಯಲ್ಲಿದ್ದ ನಿದಾ ಖಾನ್ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ

ಪುಣೆ: ಮಹಾರಾಷ್ಟ್ರದ ಟಿಸಿಎಸ್ Tata Consultancy Services (TCS) ಸಂಸ್ಥೆಯಲ್ಲಿ ನಡೆದಿದ್ದ ಕಾರ್ಪೋರೇಟ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡು ಪರಾರಿಯಲ್ಲಿದ್ದ ಪ್ರಮುಖ ಆರೋಪಿ ನಿದಾಖಾನ್ (Nida Khan)ಳನ್ನು ವಶಕ್ಕೆ ಪಡೆಯುವಲ್ಲಿ ಕೊನೆಗೂ ಮಹಾರಾಷ್ಟ್ರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿನ ಕಿರುಕುಳ ಮತ್ತು ಧಾರ್ಮಿಕ ಮತಾಂತರ ಆರೋಪಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ. ಹಲವು ವಾರಗಳಿಂದ ಪರಾರಿಯಾಗಿದ್ದ ನಿದಾ ಖಾನ್ ಅವರನ್ನು ಛತ್ರಪತಿ ಸಂಭಾಜಿನಗರದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ನಾಶಿಕ್‌ನ ಟಿಸಿಎಸ್ ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಕಚೇರಿ ದುರುಳತನ ಹಾಗೂ ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಿದ ಆರೋಪಗಳು ಹೊರಬಂದ ನಂತರ ಟಿಸಿಎಸ್ ಸಂಸ್ಥೆ ನಿದಾ ಖಾನ್ ಅವರನ್ನು ಅಮಾನತುಗೊಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದು, ಇತರ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ರೋಚಕ ಕಾರ್ಯಾಚರಣೆ

ತಾಂತ್ರಿಕ ನಿಗಾವಳಿ ಮೂಲಕ ನಿದಾ ಖಾನ್ ಅವರ ಸ್ಥಳವನ್ನು ಪತ್ತೆಹಚ್ಚಿದ ಪೊಲೀಸರು, ನರೇಗಾಂವ್ ಪ್ರದೇಶದ ಬಾಡಿಗೆ ಮನೆಯಲ್ಲಿ ಹಲವು ದಿನಗಳ ನಿಗಾವಳಿಯ ಬಳಿಕ ಬಂಧಿಸಿದ್ದಾರೆ. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ತನಿಖೆಗಾಗಿ ನಾಶಿಕ್‌ಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಈ ಹಗರಣದಲ್ಲಿ ನಿದಾ ಖಾನ್ ಳನ್ನು "ಪ್ರಮುಖ ಆರೋಪಿ" ಮತ್ತು ಸಂಚು ರೂಪಿಸಿದ ಮಾಸ್ಟರ್‌ಮೈಂಡ್ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು ಮತ್ತು ಮಹಿಳಾ ಉದ್ಯೋಗಿಗಳ ಬಲವಂತದ ಮತಾಂತರಕ್ಕೆ ಪ್ರಚೋದನೆ ನೀಡಿದ ಆರೋಪ ಆಕೆಯ ಮೇಲಿದೆ. ಸಂತ್ರಸ್ಥೆಯರು ದೂರು ನೀಡದಂತೆ ಆಕೆ ತಡೆದಿದ್ದರು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ನ್ಯಾಯಾಲಯವು ಆಕೆಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಈ ಬಂಧನ ನಡೆದಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಎಂಟನೇ ವ್ಯಕ್ತಿ ಈಕೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೊನೆಗೂ ವಿಜಯ್​ಗೆ ಸಿಕ್ತು ಮ್ಯಾಜಿಕ್​ ನಂಬರ್: CPI, VCKಯಿಂದಲೂ ಬೆಂಬಲ; ಶೀಘ್ರ CM ಆಗಿ ದಳಪತಿ ಪ್ರಮಾಣ!

ಶಾಸಕಾಂಗ ಪಕ್ಷದ ನಾಯಕರಾಗಿ ಸುವೇಂದು ಅಧಿಕಾರಿ ಆಯ್ಕೆ; ಬಂಗಾಳದ ಮೊದಲ ಬಿಜೆಪಿ CM ಆಗಿ ನಾಳೆ ಪ್ರಮಾಣ

LPG, ಟೊಮ್ಯಾಟೊ ಬೆಲೆ ಏರಿಕೆ ಎಫೆಕ್ಟ್: ಏಪ್ರಿಲ್‌ನಲ್ಲಿ ಸಸ್ಯಾಹಾರಿ, ಮಾಂಸಾಹಾರಿ ಊಟದ ಬೆಲೆ ಗಣನೀಯ ಹೆಚ್ಚಳ: Crisil

ದಳಪತಿ ವಿಜಯ್ ಸಂಪುಟದಲ್ಲಿ VCKಗೆ ಒಂದು, CPIಗೆ ಎರಡು ಸಚಿವ ಸ್ಥಾನ; ಕಾಂಗ್ರೆಸ್ ಗೆ ಎಷ್ಟು?

ವಿಜಯ್ ಪರ ಅಖಾಡಕ್ಕಿಳಿದ ಖರ್ಗೆ: CPIನ ಡಿ ರಾಜಾ ಜೊತೆ ಮಾತುಕತೆ; TVKಗೆ ಬೆಂಬಲ ಕೋರಿದ ಕಾಂಗ್ರೆಸ್ ಅಧ್ಯಕ್ಷ!

SCROLL FOR NEXT