ಸುವೇಂದು ಅಧಿಕಾರಿ 
ದೇಶ

ಚುನಾವಣಾ ಆಯೋಗದ ವಿಶೇಷ ವೀಕ್ಷಕರಾಗಿದ್ದ ವ್ಯಕ್ತಿ ಬಂಗಾಳ CM ಸಲಹೆಗಾರರಾಗಿ ನೇಮಕ; ಸುವೇಂದು ನಡೆ ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಟಿ?

ಅಧಿಸೂಚನೆಯ ಪ್ರಕಾರ, ನಿವೃತ್ತ ಐಎಎಸ್ ಅಧಿಕಾರಿ ಸುಬ್ರತಾ ಗುಪ್ತಾ ಅವರನ್ನು ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಲಹೆಗಾರರನ್ನಾಗಿ ನೇಮಿಸಲಾಗಿದೆ.

ಕೋಲ್ಕತ್ತಾ: ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ರಾಜ್ಯದಲ್ಲಿ ಚುನಾವಣೆ ಆಯೋಗ ನಡೆಸಿದ ಎಸ್ಐಆರ್ ಗೆ ವಿಶೇಷ ವೀಕ್ಷಕರಾಗಿದ್ದ ವ್ಯಕ್ತಿಯನ್ನು ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿದ್ದಾರೆ. ಸುವೇಂದು ಅಧಿಕಾರಿಯ ಈ ನಡೆ ಎಸ್ಐಆರ್ ಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ಅಧಿಸೂಚನೆಯ ಪ್ರಕಾರ, ನಿವೃತ್ತ ಐಎಎಸ್ ಅಧಿಕಾರಿ ಸುಬ್ರತಾ ಗುಪ್ತಾ ಅವರನ್ನು ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಲಹೆಗಾರರನ್ನಾಗಿ ನೇಮಿಸಲಾಗಿದೆ.

1990ರ ಬ್ಯಾಚ್‌ನ ಐಎಎಸ್ ಅಧಿಕಾರಿ ಗುಪ್ತಾ ಅವರನ್ನು ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಡೆದ ಎಸ್‌ಐಆರ್ ಗೆ ವಿಶೇಷ ವೀಕ್ಷಕರಾಗಿ ಚುನಾವಣಾ ಆಯೋಗ ನೇಮಕ ಮಾಡಿತ್ತು.

"ಗುಪ್ತ ಅವರ ಅಪಾರ ಅನುಭವವು ನೀತಿ ಸಮನ್ವಯ ಮತ್ತು ಆಡಳಿತ ಸಂಬಂಧಿತ ವಿಷಯಗಳಲ್ಲಿ ಹೊಸ ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಸ ಬಿಜೆಪಿ ಸರ್ಕಾರವು ಮತ್ತೊಂದು ಅಧಿಸೂಚನೆಯ ಪ್ರಕಾರ ಐಎಎಸ್ ಅಧಿಕಾರಿ ಶಾಂತನು ಬಾಲಾ ಅವರನ್ನು ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಿದೆ.

2017 ರ ಬ್ಯಾಚ್‌ನ ಅಧಿಕಾರಿ ಬಾಲಾ ಅವರು, ತಮ್ಮ ಕೊನೆಯ ನಿಯೋಜನೆಯಲ್ಲಿ ದಕ್ಷಿಣ 24 ಪರಗಣದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದರು.

ಅಧಿಸೂಚನೆಗಳ ಪ್ರಕಾರ, ಈ ಇಬ್ಬರೂ ಅಧಿಕಾರಿಗಳಿಗೆ ತಮ್ಮ ಹೊಸ ಜವಾಬ್ದಾರಿಯನ್ನು ತಕ್ಷಣವೇ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

120 ಶಾಸಕರ ಬಲ ಸಿಗುತ್ತಿದ್ದಂತೆ ರಾಜ್ಯಪಾಲರ ಭೇಟಿ: ಸರ್ಕಾರ ರಚನೆಗೆ 'ಸರ್ಕಾರ್' ಹಕ್ಕು ಮಂಡನೆ, ನಾಳೆ ಮಧ್ಯಾಹ್ನ 3 ಗಂಟೆಗೆ ಪ್ರಮಾಣವಚನ?

ಅಧಿಕಾರ ತಪ್ಪಿಸಿದ ಅಪವಾದ ಬರಬಾರದು, ರಾಷ್ಟ್ರಪತಿ ಆಳ್ವಿಕೆ ಬೇಡ: ನಟ ವಿಜಯ್ ಬೆಂಬಲ ಘೋಷಣೆ ಬಳಿಕ VCK ಮುಖ್ಯಸ್ಥ ಹೇಳಿಕೆ! Video

ದುಷ್ಟ ಶಕ್ತಿಗಳಿಂದ ರಕ್ಷಣೆ ಸಿಗಲಿ, ದೇಶಕ್ಕೆ ರಾಜ್ಯಕ್ಕೆ ಒಳಿತಾಗಲಿ: ವಿಜಯ್ ಬಹುಮತದ ಬೆನ್ನಲ್ಲೇ ಡಿಕೆ ಶಿವಕುಮಾರ್ ಹೇಳಿಕೆ; DCM ಮಾತಿನ ಮರ್ಮವೇನು?

ಹೃದಯವಿದ್ರಾವಕ ಘಟನೆ: ನರ್ಮದಾ ಕಾಲುವೆಗೆ ಬಿದ್ದು 3 ತಿಂಗಳ ಶಿಶು ಸೇರಿ ಒಂದೇ ಕುಟುಂಬದ ನಾಲ್ವರು ಸಾವು!

ವಿಜಯ್-VCK ಡೀಲ್ ಅಂತಿಮ! EPS ನಿಗೂಢ ಪೋಸ್ಟ್ ಅರ್ಥವೇನು?

SCROLL FOR NEXT