ಮತದಾರರ ಪಟ್ಟಿ ಪರಿಷ್ಕರಣೆ(ಸಂಗ್ರಹ ಚಿತ್ರ)  online desk
ದೇಶ

ಪಶ್ಚಿಮ ಬಂಗಾಳದಲ್ಲಿ SIRನಿಂದ ಹೊರಗಿಡಲಾದ ವ್ಯಕ್ತಿಗಳಿಗೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ: ಬಿಜೆಪಿ ಸರ್ಕಾರ

"ಮತದಾರರ ಪಟ್ಟಿಯಲ್ಲಿರುವ ಮಹಿಳೆಯರಿಗೆ ಮಾತ್ರ 3 ಸಾವಿರ ರೂ. ನೀಡಲಾಗುವುದು" ಎಂದು ಪಾಲ್ ಹೇಳಿರುವುದಾಗಿ IANS ಸಹ ವರದಿ ಮಾಡಿದೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ನಡೆದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಸಮಯದಲ್ಲಿ ಹೆಸರುಗಳನ್ನು ತೆಗೆದು ಹಾಕಿದ ಮಹಿಳೆಯರಿಗೆ ಬಿಜೆಪಿ ಸರ್ಕಾರ ಬಿಗ್ ಶಾಕ್ ನೀಡಿದ್ದು, ರಾಜ್ಯ ಸರ್ಕಾರದ ಅನ್ನಪೂರ್ಣ ಭಂಡಾರ್ ಯೋಜನೆಯ ಪ್ರಯೋಜನಗಳು ಅವರಿಗೆ ಸಿಗುವುದಿಲ್ಲ ಎಂದು ಸಚಿವ ಅಗ್ನಿಮಿತ್ರ ಪಾಲ್ ಅವರು ಸೋಮವಾರ ಹೇಳಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಈ ಯೋಜನೆಯಡಿಯಲ್ಲಿ, ಮಹಿಳೆಯರು ಮಾಸಿಕ 3,000 ರೂ. ನಗದು ಪಡೆಯುತ್ತಾರೆ. ಜೂನ್ 1 ರಿಂದ ತೃಣಮೂಲ ಕಾಂಗ್ರೆಸ್ ಸರ್ಕಾರದ ಲಕ್ಷ್ಮಿ ಭಂಡಾರ್ ಕಾರ್ಯಕ್ರಮದ ಬದಲಿಗೆ ಬಿಜೆಪಿ ಅನ್ನಪೂರ್ಣ ಭಂಡಾರ್ ಆರಂಭಿಸಿದೆ. ಲಕ್ಷ್ಮಿ ಭಂಡಾರ್ ಕಾರ್ಯಕ್ರಮದ ಫಲಾನುಭವಿಗಳಿಗೆ ತಿಂಗಳಿಗೆ 1,500 ರೂ.ಗಳನ್ನು ನೀಡಲಾಗುತ್ತಿತ್ತು.

"ಮತದಾರರ ಪಟ್ಟಿಯಲ್ಲಿರುವ ಮಹಿಳೆಯರಿಗೆ ಮಾತ್ರ 3 ಸಾವಿರ ರೂ. ನೀಡಲಾಗುವುದು" ಎಂದು ಪಾಲ್ ಹೇಳಿರುವುದಾಗಿ IANS ಸಹ ವರದಿ ಮಾಡಿದೆ.

"ಇದಕ್ಕೂ ಮೊದಲು, ಒಂದು ವಿಶ್ಲೇಷಣೆ ಇರುತ್ತದೆ. SIR ಸಮಯದಲ್ಲಿ ತೆಗೆದುಹಾಕಲ್ಪಟ್ಟವರಿಗೆ ಅನ್ನಪೂರ್ಣ ಭಂಡಾರ್ ಸೇರಿದಂತೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

"ಮೃತಪಟ್ಟವರು ಲಕ್ಷ್ಮಿ ಭಂಡಾರ್ ಅನ್ನು ಹೇಗೆ ಪಡೆಯುತ್ತಾರೆ? ಭಾರತೀಯ ನಾಗರಿಕರಲ್ಲದವರು, ಲಕ್ಷ್ಮಿ ಭಂಡಾರ್ ಅನ್ನು ಹೇಗೆ ಪಡೆಯುತ್ತಾರೆ? ಯಾರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬುದರ ವಿಶ್ಲೇಷಣೆ ಇರುತ್ತದೆ" ಎಂದು ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!