ಗಾಯಕನ ಮೇಲೆ ನೋಟಿನ ಮಳೆ 
ದೇಶ

ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಮೇಲೆ ನೋಟಿನ ಮಳೆ ಸುರಿಸಿದ ಅಭಿಮಾನಿಗಳು; Video!

ಗುಜರಾತ್‌ನ ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಅವರ ಮೇಲೆ ಅಭಿಮಾನಿಗಳು ನೋಟಿನ ಮಳೆ ಸುರಿಸಿದ್ದಾರೆ. ಜುನಾಗಢದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಕವಿರಾಜ್ ಜಿಗ್ನೇಶ್ ಅವರನ್ನು ಜನರು ನೋಟುಗಳಿಂದ ಮುಚ್ಚಿದ್ದಾರೆ.

ಗುಜರಾತ್‌ನ ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಅವರ ಮೇಲೆ ಅಭಿಮಾನಿಗಳು ನೋಟಿನ ಮಳೆ ಸುರಿಸಿದ್ದಾರೆ. ಜುನಾಗಢದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಕವಿರಾಜ್ ಜಿಗ್ನೇಶ್ ಅವರನ್ನು ಜನರು ನೋಟುಗಳಿಂದ ಮುಚ್ಚಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಕವಿರಾಜ್ ಜಿಗ್ನೇಶ್ ಅವರ ಸಾಂಪ್ರದಾಯಿಕ ದೀರೋ ಪ್ರದರ್ಶನದ ಸಮಯದಲ್ಲಿ, ಭಕ್ತರು ವೇದಿಕೆಗೆ ನುಗ್ಗಿದ ನಾಟಕೀಯ ದೃಶ್ಯಗಳು ಕಂಡುಬಂದಿತು. ಗಾಯಕನ ಮೇಲೆ ಕರೆನ್ಸಿ ನೋಟುಗಳನ್ನು ಎಸೆಯಲಾಯಿತು. ಅದು ಎಷ್ಟು ಎಂದರೇ ಗಾಯಕನಿಗೆ ಹಾಡಲು ಸಾಧ್ಯವಾಗದಷ್ಟು ನೋಟುಗಳಿಂದ ಮುಚ್ಚಲಾಯಿತು.

ಖರ್ಚುಗಳ ನಂತರ ಉಳಿದ ಹಣವನ್ನು ಅಹಿರ್ ಚಾರಿಟೇಬಲ್ ಟ್ರಸ್ಟ್‌ಗೆ ದೇಣಿಗೆ ನೀಡುವುದಾಗಿ ಸಂಘಟಕರು ಘೋಷಿಸಿದ್ದಾರೆ. ಇದನ್ನು ಅಹಮದಾಬಾದ್‌ನಲ್ಲಿ ಗುಜರಾತ್ ಬಾಲಕಿಯರ ಹಾಸ್ಟೆಲ್ ಮತ್ತು ಶಿಕ್ಷಣ ಸಂಕೀರ್ಣವನ್ನು ನಿರ್ಮಿಸಲು ಬಳಸಲಾಗುತ್ತದೆ.

ಕವಿರಾಜ್ ಜಿಗ್ನೇಶ್ ಅವರ 'ದಯಾರೋ' ಹಾಡಿಗೆ ಹಣದ ಸುರಿಮಳೆಯೇ ಹರಿದು ಬಂದಿತು. 'ದಯಾರೋ' ಎಂದರೇನು? ಇದು ಕಥೆಗಳು, ಹಾಸ್ಯಗಳು ಮತ್ತು ಸ್ತೋತ್ರಗಳನ್ನು ಒಳಗೊಂಡಿರುವ ಗುಜರಾತಿ ಜಾನಪದ ಗೀತೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video