ಸಿದ್ದರಾಮಯ್ಯ, ಜೈರಾಮ್ ರಮೇಶ್ 
ದೇಶ

ಸಿದ್ದರಾಮಯ್ಯ ನಿಜವಾದ ಜನನಾಯಕ, 17 ಬಜೆಟ್‌ಗಳಲ್ಲಿ ಪ್ರತಿಯೊಂದೂ ಪರಿಣಾಮಕಾರಿಯಾದದ್ದು: ಜೈರಾಮ್ ರಮೇಶ್ ಶ್ಲಾಘನೆ!

ಸಿದ್ದರಾಮಯ್ಯ ಅವರ ನಾಲ್ಕು ದಶಕಗಳ ರಾಜಕೀಯ ಜೀವನ ಮತ್ತು 17 ಬಾರಿ ಬಜೆಟ್ ಮಂಡನೆಯು ಅವರ ವರ್ಚಸ್ಸು ಮತ್ತು ಕರ್ನಾಟಕದ ಆಡಳಿತಕ್ಕೆ ಅವರ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ನವದೆಹಲಿ: ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಶುಕ್ರವಾರ ಶ್ಲಾಘಿಸಿದ್ದಾರೆ. ಅವರ ಆಡಳಿತಾತ್ಮಕ ಚತುರತೆ, ಸಾಮಾಜಿಕ ನ್ಯಾಯಕ್ಕೆ ಬದ್ಧತೆ ಮತ್ತು ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಗೌರವಯುತವಾಗಿ ಪದತ್ಯಾಗ ಮಾಡಿದ್ದಾರೆ ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಸಿದ್ದರಾಮಯ್ಯ ಅವರ ನಾಲ್ಕು ದಶಕಗಳ ರಾಜಕೀಯ ಜೀವನ ಮತ್ತು 17 ಬಾರಿ ಬಜೆಟ್ ಮಂಡನೆಯು ಅವರ ವರ್ಚಸ್ಸು ಮತ್ತು ಕರ್ನಾಟಕದ ಆಡಳಿತಕ್ಕೆ ಅವರ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದುದ್ದಕ್ಕೂ ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಪ್ರತಿಪಾದಿಸಿದ್ದಕ್ಕಾಗಿ ಅವರನ್ನು ಜೈರಾಮ್ ರಮೇಶ್ ಶ್ಲಾಘಿಸಿದ್ದಾರೆ. 2013-2018 ಮತ್ತು 2023-2026 ರವರೆಗೆ ಎರಡು ಪ್ರತ್ಯೇಕ ಅವಧಿಗಳಲ್ಲಿ 8 ವರ್ಷಗಳಿಗೂ ಹೆಚ್ಚು ಕಾಲದ ವೃತ್ತಿಜೀವನದೊಂದಿಗೆ ಸಿದ್ದರಾಮಯ್ಯ ಅವರು ರಾಜ್ಯದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಯಾಗಿದ್ದಾರೆ.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ. ಇದು ಸ್ವತಃ ಒಂದು ಅದ್ಭುತ ಸಾಧನೆಯಾಗಿದೆ. ಅವರು ರಾಜ್ಯದಲ್ಲಿ 17 ಬಜೆಟ್‌ಗಳನ್ನು ಮಂಡಿಸಿದ್ದಾರೆ, ಗುಜರಾತ್‌ನಲ್ಲಿ ವಜುಭಾಯಿ ವಾಲಾ ಅವರ ಹೆಸರಿನಲ್ಲಿರುವ ದಾಖಲೆಗಿಂತ ಕೇವಲ ಒಂದು ಕಡಿಮೆ ಮತ್ತು ಪಶ್ಚಿಮ ಬಂಗಾಳದಲ್ಲಿ ಡಾ. ಅಸಿಮ್ ದಾಸ್‌ಗುಪ್ತ ಅವರ ದಾಖಲೆಗಿಂತ ಒಂದು ಹೆಚ್ಚಾಗಿದೆ.

ಸಿದ್ದರಾಮಯ್ಯ ಅವರ 17 ಬಜೆಟ್‌ಗಳಲ್ಲಿ ಪ್ರತಿಯೊಂದೂ ಗಮನಾರ್ಹ ಮತ್ತು ಪ್ರಭಾವಶಾಲಿಯಾಗಿತ್ತು. ಬಜೆಟ್ ರಚನೆ ಮತ್ತು ಆಡಳಿತದ ಮೇಲಿನ ಅವರ ಪಾಂಡಿತ್ಯದ ಹೊರತಾಗಿ, ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಪ್ರಬಲ ಪ್ರತಿಪಾದಕರಾಗಿದ್ದಾರೆ. ಜಾತ್ಯತೀತ ಮೌಲ್ಯಗಳಿಗೆ ರಾಜಿಯಾಗದ ಪ್ರತಿಪಾದಕ ಮತ್ತು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದ ಬಲವಾದ ಧ್ವನಿಯಾಗಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಸಿದ್ದರಾಮಯ್ಯ ಅವರನ್ನು "ನಿಜವಾದ ಜನನಾಯಕ" ಎಂದು ರಮೇಶ್ ಬಣ್ಣಿಸಿದ್ದು,, ಅವರ ರಾಜಕೀಯ ಶೈಲಿ ಮತ್ತು ತೀಕ್ಷ್ಣವಾದ ಭಾಷಣಗಳು ಕರ್ನಾಟಕ ರಾಜಕೀಯದ ಮೇಲೆ ಶಾಶ್ವತವಾದ ಪ್ರಭಾವ ಬೀರಿವೆ. ರಾಜೀನಾಮೆ ನೀಡುವ ಸಮಯದಲ್ಲಿ ಸಿದ್ದರಾಮಯ್ಯ ಅವರ ನಡವಳಿಕೆಯನ್ನು ಶ್ಲಾಘಿಸಿದ ರಮೇಶ್, ಇದು ಅವರ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

"ಸಿದ್ದರಾಮಯ್ಯ ಪೂರ್ಣ ಮತ್ತು ಅತ್ಯುತ್ತಮ ಅರ್ಥದಲ್ಲಿ ನಿಜವಾದ ಜನನಾಯಕರಾಗಿದ್ದಾರೆ. ಮಾತಿನಲ್ಲಿ ನಿರರ್ಗಳತೆ, ರಾಜಕೀಯ ವಿರೋಧಿಗಳನ್ನು ಮಟ್ಟಹಾಕುವ ವಾಕ್ಚಾತುರ್ಯ ಯಾವಾಗಲೂ ಪರಿಣಾಮಕಾರಿಯಾಗಿತ್ತು. ಕರ್ನಾಟಕದ ಅಭಿವೃದ್ಧಿಗೆ ಅವರ ವೈವಿಧ್ಯಮಯ ಕೊಡುಗೆಗಳು ಶಾಶ್ವತವಾಗಿರುತ್ತವೆ. ರಾಜೀನಾಮೆ ನೀಡುವಾಗ ಅವರು ನಡೆದುಕೊಂಡ ರೀತಿ ಅವರ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ರಮೇಶ್ ಬರೆದುಕೊಂಡಿದ್ದಾರೆ.

ನಾಳೆ ನಡೆಯುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗುವುದು ಎಂದು ಶಾಸಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ.

ಇದಕ್ಕೂ ಮುನ್ನಾ ಮಾಡಿದ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ ಎರಡನೇ ಅವಧಿಗೆ ಸಿಎಂ ಆಗುವಾಗಲೇ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸಿದ್ದರಾಮಯ್ಯ ಪರಿಣಾಮಕಾರಿಯಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ತೊಂದರೆಯಾಗಲ್ಲ. ಸ್ಥಿರವಾಗಿರುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶದಲ್ಲಿ ಮತ್ತೆ ಗ್ಯಾಸ್ ಕೊರತೆ?: LPG ಸಿಲಿಂಡರ್ ಪೂರೈಕೆದಾರರಿಗೆ ಕೇಂದ್ರದಿಂದ ಮಹತ್ವದ ಸೂಚನೆ

ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಹಿಂದೂ ವಿರೋಧಿ ಸಿಎಂಗಳು ಒಂದೇ ತಿಂಗಳಲ್ಲಿ ಅಧಿಕಾರ ಕಳೆದುಕೊಂಡ್ರು: ಛಲವಾದಿ ವ್ಯಂಗ್ಯ

ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು; ಆರು ಜನರ ಭೀಕರ ಹತ್ಯೆ

Karnataka CM News LIVE Updates | ನೂತನ ಸಚಿವ ಸಂಪುಟ ರಚನೆ: ದೆಹಲಿಯಲ್ಲಿ ಸಿದ್ದರಾಮಯ್ಯ-ಡಿ.ಕೆ ಶಿವಕುಮಾರ್ ಮಾತುಕತೆ, ಸಹಭೋಜನ

ಮಧ್ಯಪ್ರಾಚ್ಯ ಬಿಕ್ಕಟ್ಟು, ದುರ್ಬಲ ಮುಂಗಾರು ಆತಂಕ; Indian Stock Market ಭಾರಿ ಕುಸಿತ!

SCROLL FOR NEXT