ಆಘಾ ಸೈಯದ್ ರುಹುಲ್ಲಾ ಮೆಹದಿ 
ದೇಶ

25 ಶಾಸಕರ ಬಂಡಾಯದ ಬೆನ್ನಲ್ಲೇ ಸಂಸದ ಸ್ಥಾನಕ್ಕೆ ಆಘಾ ರಾಜೀನಾಮೆ; ಪತನದ ಭೀತಿಯಲ್ಲಿ ಒಮರ್ ಅಬ್ದುಲ್ಲಾ ಸರ್ಕಾರ!

ಇಂದು ಬುದ್ಗಾಮ್‌ನಲ್ಲಿ ನಡೆದ ಭಾವನಾತ್ಮಕ ಸಮಾರಂಭವೊಂದರಲ್ಲಿ, ತಮ್ಮ ತಂದೆ ಆಘಾ ಸೈಯದ್ ಮೆಹದಿ ಅವರ 26ನೇ ಪುಣ್ಯಸ್ಮರಣೆಯ ದಿನದಂದು ಅವರು ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು.

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ 'ನ್ಯಾಷನಲ್ ಕಾನ್ಫರೆನ್ಸ್' (NC) ಪಕ್ಷಕ್ಕೆ ದೊಡ್ಡ ಹಿನ್ನಡೆಯುಂಟಾಗಿದ್ದು, ಶ್ರೀನಗರ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಪಕ್ಷದ ಅತ್ಯಂತ ಪ್ರಮುಖ ಶಿಯಾ ಮುಖಂಡರಾದ ಆಘಾ ಸೈಯದ್ ರುಹುಲ್ಲಾ ಮೆಹದಿ ಅವರು ಪಕ್ಷಕ್ಕೆ ಹಾಗೂ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಇಂದು ಬುದ್ಗಾಮ್‌ನಲ್ಲಿ ನಡೆದ ಭಾವನಾತ್ಮಕ ಸಮಾರಂಭವೊಂದರಲ್ಲಿ, ತಮ್ಮ ತಂದೆ ಆಘಾ ಸೈಯದ್ ಮೆಹದಿ ಅವರ 26ನೇ ಪುಣ್ಯಸ್ಮರಣೆಯ ದಿನದಂದು ಅವರು ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು.

ಈ ಬೆಳವಣಿಗೆಯೊಂದಿಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದೊಂದಿಗಿನ ರುಹುಲ್ಲಾ ಅವರ 24 ವರ್ಷಗಳ ಒಡನಾಟ ಅಂತ್ಯಗೊಂಡಿದೆ. ಲೋಕಸಭಾ ಸ್ಪೀಕರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ನಂತರ, ಶ್ರೀನಗರದಲ್ಲಿ ಉಪಚುನಾವಣೆ ನಡೆಯಲಿದೆ.

ಆಘಾ ಅವರು ಕೇವಲ ರಾಜೀನಾಮೆ ಪತ್ರವನ್ನಷ್ಟೇ ಅಲ್ಲದೆ, ಪಕ್ಷದ ನಾಯಕತ್ವದ ವಿರುದ್ಧ ನಾಲ್ಕು ಪುಟಗಳ ರಾಜಕೀಯ ಆರೋಪ ಪಟ್ಟಿಯನ್ನೇ (political indictment) ಸಲ್ಲಿಸಿದ್ದಾರೆ.

2024ರ ವಿಧಾನಸಭಾ ಚುನಾವಣೆಯಲ್ಲಿ ಜನರು ವ್ಯಕ್ತಪಡಿಸಿದ "ಆಕ್ರೋಶ, ಭಾವನೆಗಳು ಮತ್ತು ನೀಡಿದ ಭಾರಿ ಜನಾದೇಶ"ಕ್ಕೆ ನ್ಯಾಷನಲ್ ಕಾನ್ಫರೆನ್ಸ್ ದ್ರೋಹ ಬಗೆದಿದೆ ಎಂದು ಆರೋಪಿಸಿರುವ ರುಹುಲ್ಲಾ, ಚುನಾವಣೆ ಮುಗಿಯುತ್ತಿದ್ದಂತೆಯೇ ಪಕ್ಷವು ಸಂಪೂರ್ಣವಾಗಿ ತನ್ನ ನಿಲುವನ್ನು ಬದಲಿಸಿಕೊಂಡಿದೆ (ಅಂದರೆ 'ಯೂ-ಟರ್ನ್' ತೆಗೆದುಕೊಂಡಿದೆ) ಎಂದು ಹೇಳಿದ್ದಾರೆ.

2019ರಲ್ಲಿ 370 ಮತ್ತು 35-ಎ ವಿಧಿಗಳನ್ನು ರದ್ದುಗೊಳಿಸಿರುವುದನ್ನು ಕಾಶ್ಮೀರಿಗಳ ಹಕ್ಕಿನ ಮೇಲಿನ "ನಿರ್ಲಜ್ಜ ದಾಳಿ" ಎಂದು ಕರೆದಿರುವ ಅವರು, "ಹಕ್ಕುಗಳೇ ಒಂದು ಜನಸಮುದಾಯವನ್ನು ರೂಪಿಸುತ್ತವೆ. ಇವು ಇಲ್ಲದಿದ್ದರೆ, ಒಂದು ಜನಸಮುದಾಯದ ಅಸ್ತಿತ್ವವೇ ಅಳಿಸಿಹೋಗುತ್ತದೆ," ಎಂದು ಹೇಳಿದ್ದಾರೆ.

ಪತನದ ಭೀತಿಯಲ್ಲಿ ಒಮರ್ ಅಬ್ದುಲ್ಲಾ ಸರ್ಕಾರ

ಜಮ್ಮು ಮತ್ತು ಕಾಶ್ಮೀರದಲ್ಲಿ, ಒಮರ್ ಅಬ್ದುಲ್ಲಾನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ ತೀವ್ರ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಾರ್ಟಿಯ ಶಾಸಕರು ಹದಿನಾಲ್ಕು ದಿನಗಳ ಗಡುವನ್ನು ನೀಡಿದ್ದು, ಸರ್ಕಾರ ಪತನಗೊಳಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಯ ಮುಂದಿನ ನಡೆ ಈಗ ಕುತೂಹಲಕ್ಕೆ ಕಾರಣವಾಗಿದೆ.

ಪಾರ್ಟಿಯ 25 ಶಾಸಕರು, ತಮ್ಮ ತೊಂದರೆ ಮತ್ತು ಬೇಡಿಕೆಗಳನ್ನು ಹದಿನಾಲ್ಕು ದಿನದೊಳಗೆ ಸರಿ ಪಡಿಸದಿದ್ದರೆ, ಸರ್ಕಾರ ಬೀಳಿಸಲೂ ಹಿಂದೆಮುಂದೆ ನೋಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ': ನಾಲಿಗೆ ಹರಿಬಿಟ್ಟ ನಾರಾಯಣಸ್ವಾಮಿ!

ದೇಶಾದ್ಯಂತ ಅರಾಜಕತೆ ಸೃಷ್ಟಿಸಲು ರಾಹುಲ್ ಗಾಂಧಿ ಯತ್ನ: ಬಿಜೆಪಿ ಪ್ರತಿಭಟನೆಯಲ್ಲಿ ವಿಜಯೇಂದ್ರ ವಾಗ್ದಾಳಿ

'ಅಂಕಲ್ ಜೊತೆ ರೊಮ್ಯಾನ್ಸ್, ಯಾವಾಗ ಸಾಯುತ್ತೇನೋ ಅಂತ ಕಾಯ್ತಿದ್ದೆ': ತೆಲುಗು ನಟನ ಸಿನಿಮಾ ಕುರಿತು ನಟಿ Radhika Apte ಅಸಮಾಧಾನ! Video

'ಹೆಸರಿಗೆ ಮಾತ್ರ ನಿರ್ಬಂಧ, ಅಂಗಡಿಗಳಲ್ಲಿ ಎಲ್ಲ ರೀತಿಯ ಪಟಾಕಿಗಳೂ ಸಿಗುತ್ತಿವೆ’: ಸುಪ್ರೀಂ ಕೋರ್ಟ್ ಕಳವಳ, ಕೇಂದ್ರಕ್ಕೆ ಖಡಕ್ ಸೂಚನೆ

'ಯಾವಾಗಲೂ PUBG ಆಡುತ್ತಿದ್ದ': ಪಂಚಕುಲ ಶಾಲೆ ದಾಳಿ ಆರೋಪಿ ಬಾಲಕನ ಚಟದ ಕುರಿತು ಅಂಕಲ್ ರೋಚಕ ಮಾಹಿತಿ!