ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ 
ದೇಶ

ಹಣತೆಗಳು ಮತ್ತು ಕಾಶ್ಮೀರಿ ಆಹಾರ: ಇಂದಿರಾ ಗಾಂಧಿಯ ಸಫ್ದರ್ ಜಂಗ್ ನಿವಾಸದಲ್ಲಿನ 'ದೀಪಾವಳಿ' ಸಂಭ್ರಮವನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ! Video

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸಫ್ದರ್ ಜಂಗ್ ನಿವಾಸದಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಸೋನಿಯಾ ಗಾಂಧಿ ತಮ್ಮ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮೊಮ್ಮಗಳೊಂದಿಗೆ ಮಾತನಾಡಿದ್ದಾರೆ.

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಕುಟುಂಬದಲ್ಲಿನ ದೀಪಾವಳಿ ಆಚರಣೆಯನ್ನು ನೆನಪಿಸಿಕೊಂಡಿದ್ದಾರೆ. ಉದ್ಯಾನವು ಮಣ್ಣಿನ ದೀಪಗಳಿಂದ ಹೇಗೆ ಬೆಳಗುತಿತ್ತು ಮತ್ತು ಸಾಂಪ್ರದಾಯಿಕ ಆಹಾರದೊಂದಿಗೆ ಎಲ್ಲರೂ ಸೇರಿ ಹೇಗೆಲ್ಲಾ ಒಟ್ಟಾಗಿ ಹಬ್ಬವನ್ನು ಆಚರಿಸಲಾಗುತಿತ್ತು ಎಂಬುದನ್ನು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸಫ್ದರ್ ಜಂಗ್ ನಿವಾಸದಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಸೋನಿಯಾ ಗಾಂಧಿ ತಮ್ಮ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮೊಮ್ಮಗಳೊಂದಿಗೆ ಮಾತನಾಡಿದ್ದಾರೆ. ಈ ವೀಡಿಯೊವನ್ನು ಸೋನಿಯಾ ಗಾಂಧಿಯವರ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಮಾತುಕತೆ ವೇಳೆ ಪ್ರಿಯಾಂಕಾ ಗಾಂಧಿ, ತನ್ನ ತಂದೆ ಫುಲ್ಜಾರಿಗಳು ಸೇರಿದಂತೆ ಪಟಾಕಿಗಳನ್ನು ಖರೀದಿಸಲು ಹಳೆ ದೆಹಲಿಯ ಚಾಂದನಿ ಚೌಕ್‌ಗೆ ಅವರನ್ನು ಹೇಗೆ ಕರೆದೊಯ್ಯುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ಹಬ್ಬಗಳ ಸಮಯದಲ್ಲಿ ತಯಾರಿಸಲಾಗುತ್ತಿದ್ದ ಸಾಂಪ್ರದಾಯಿಕ ಕಾಶ್ಮೀರಿ ಆಹಾರವನ್ನು ಸಹ ಸೋನಿಯಾ ನೆನಪಿಸಿಕೊಂಡಿದ್ದಾರೆ. ಆ ದಿನಗಳಲ್ಲಿದ್ದ ಸ್ಪಷ್ಟ ನೀಲಿ ಆಕಾಶ ಮತ್ತು ಉದ್ಯಾನವನ್ನು ಕೂಡಾ ನೆನಪು ಮಾಡಿಕೊಂಡಿದ್ದಾರೆ.

ರಾಹುಲ್ ಗಾಂಧಿ ಕೂಡ ದೀಪಾವಳಿ ಶುಭಾಶಯಗಳನ್ನು ಸಲ್ಲಿಸುತ್ತಾ, ಜನರಿಗೆ ಮತ್ತು ಅವರ ಕುಟುಂಬಗಳಿಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಹಾರೈಸಿದ್ದಾರೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿಯ ಹಾರ್ದಿಕ ಶುಭಾಶಯಗಳು! ಪ್ರತಿ ಮನೆಯಲ್ಲೂ ಸಂತೋಷ ಮತ್ತು ಸಮೃದ್ಧಿಯ ದೀಪಗಳು ಬೆಳಗಲಿ. ಈ ಪವಿತ್ರ ಹಬ್ಬವು ಇಡೀ ಭಾರತಕ್ಕೆ ಸಂತೋಷ, ಶಾಂತಿ, ಸಾಮರಸ್ಯ ಮತ್ತು ಹೊಸ ಭರವಸೆಗಳ ಬೆಳಕನ್ನು ತರಲಿ ಎಂದು ಅವರು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತೇಜೋವಧೆಗೆ ಹುನ್ನಾರ: 'ಸತ್ಯಾಸತ್ಯತೆ' ಹೊರಬರಬೇಕಿದೆ; HD ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು, Video

ಟಿವಿಯಲ್ಲಿ ಬಾಬರಿ ಮಸೀದಿ ಧ್ವಂಸ ದೃಶ್ಯ ನೋಡಿ ಕಣ್ಣೀರಿಟಿದ್ದೆ ಎಂದ ಸೋನಿಯಾ ಗಾಂಧಿ: ಬಿಜೆಪಿ ಟೀಕೆ

ಹಾಸನಾಂಬೆ ಪಾದದಾಣೆಗೂ ಒಂದೇ ಒಂದು ಪೈಸೆ ಲೋಪ ಮಾಡಿಲ್ಲ: ಹೆಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಶಿವಲಿಂಗೇಗೌಡ ಖಡಕ್ ಉತ್ತರ!

ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣ; 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿ ಕೆ ಶಿವಕುಮಾರ್

'ಇದು ನಮಗೆ ಅತ್ಯಂತ ಭರ್ಜರಿ ದೀಪಾವಳಿ': ಪುತ್ರ ವಿಹಾನ್‌ ಮೊದಲ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್, ವಿಕ್ಕಿ ಕೌಶಲ್!