ಸೋನಿಯಾ ಗಾಂಧಿ - ರಾಹುಲ್ ಗಾಂಧಿ 
ದೇಶ

'ಭಕ್ತರೇ, ನೀವು ಎಷ್ಟು ಕಾಮೆಂಟ್ ಮಾಡುತ್ತೀರೋ, ಅಷ್ಟು ಆ ಪುಸ್ತಕ ಜನಪ್ರಿಯವಾಗುತ್ತದೆ': ನೀವು ಮುಂದುವರಿಸಿ; ರಾಹುಲ್ ಗಾಂಧಿ

'ಅವರಲ್ಲಿ ಅನೇಕರು ವಾಸ್ತವವಾಗಿ ಸೋನಿಯಾ ಅವರನ್ನು ಗುಪ್ತವಾಗಿ ಇಷ್ಟಪಡುತ್ತಾರೆ ಮತ್ತು ಅವರು ಅದ್ಭುತ ಎಂದು ಭಾವಿಸುತ್ತಾರೆ. ಆದರೆ ದುರದೃಷ್ಟವಶಾತ್ ಅವರಿಗೆ ಅದನ್ನು ಹೇಳಲು ಸಾಧ್ಯವಾಗುತ್ತಿಲ್ಲ' ಎಂದರು.

ನವದೆಹಲಿ: ಎಐಸಿಸಿ (AICC) ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಕುರಿತು ಬಿಜೆಪಿ ನಾಯಕರು ವ್ಯಕ್ತಪಡಿಸಿರುವ ಟೀಕೆಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ವ್ಯಂಗ್ಯವಾಡಿದ್ದಾರೆ. 'ಭಕ್ತರು' ಈ ಪುಸ್ತಕದ ಬಗ್ಗೆ ಎಷ್ಟು ಹೆಚ್ಚಾಗಿ ಟೀಕೆಗಳನ್ನು ಮಾಡುತ್ತಾರೋ, ಅಷ್ಟೇ ಈ ಪುಸ್ತಕ ಜನಪ್ರಿಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಬಿಜೆಪಿ ನಾಯಕರಲ್ಲಿ ಅನೇಕರು ತಮ್ಮ ತಾಯಿಯನ್ನು (ಸೋನಿಯಾ ಗಾಂಧಿ) ಗುಪ್ತವಾಗಿ ಇಷ್ಟಪಡುತ್ತಾರೆ ಮತ್ತು ಅವರು ಅದ್ಭುತ ವ್ಯಕ್ತಿ ಎಂದು ಭಾವಿಸುತ್ತಾರೆ. ಆದರೆ, ದುರದೃಷ್ಟವಶಾತ್ ಅವರು ಅದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ' ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ನಡೆದ 'ಆಸ್ಕ್ ಮೀ' (Ask Me) ಸಂವಾದದ ವೇಳೆ, ಸೋನಿಯಾ ಗಾಂಧಿ ಅವರ ಇತ್ತೀಚೆಗಷ್ಟೇ ಬಿಡುಗಡೆಯಾದ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey Of Love) ಎಂಬ ಪುಸ್ತಕದ ಬಗ್ಗೆ ಬಿಜೆಪಿ ಏಕೆ ಇಷ್ಟೊಂದು ಮಾತನಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸೋನಿಯಾ ಗಾಂಧಿ, 'ಇದು ಅತ್ಯುತ್ತಮ ಪುಸ್ತಕ, ಅವರೆಲ್ಲರೂ ಇದನ್ನು ಓದುತ್ತಿದ್ದಾರೆ. ಇದನ್ನು ಓದದಿರಲು ಅವರಿಗೆ ಸಾಧ್ಯವಾಗುತ್ತಿಲ್ಲ, ಹಾಗಾಗಿ ಅದರ ಬಗ್ಗೆ ಪ್ರತಿಕ್ರಿಯಿಸಲೇಬೇಕಾದ ಅನಿವಾರ್ಯತೆ ಅವರಿಗೆ ಉಂಟಾಗಿದೆ' ಎಂದು ಹೇಳಿದರು.

'ಅವರಲ್ಲಿ ಅನೇಕರು ವಾಸ್ತವವಾಗಿ ಸೋನಿಯಾ ಅವರನ್ನು ಗುಪ್ತವಾಗಿ ಇಷ್ಟಪಡುತ್ತಾರೆ ಮತ್ತು ಅವರು ಅದ್ಭುತ ಎಂದು ಭಾವಿಸುತ್ತಾರೆ. ಆದರೆ ದುರದೃಷ್ಟವಶಾತ್ ಅವರಿಗೆ ಅದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಇನ್ನೊಂದು ವಿಷಯವೆಂದರೆ - 'ಭಕ್ತರೇ', ದಯವಿಟ್ಟು ಆ ಪುಸ್ತಕದ ಬಗ್ಗೆ ಕಾಮೆಂಟ್ ಮಾಡುವುದನ್ನು ಮುಂದುವರಿಸಿ; ಏಕೆಂದರೆ ನೀವು ಎಷ್ಟು ಹೆಚ್ಚು ಕಾಮೆಂಟ್ ಮಾಡುತ್ತೀರೋ, ಅಷ್ಟು ಉತ್ತಮವಾಗಿ ಆ ಪುಸ್ತಕವು ಜನಪ್ರಿಯವಾಗುತ್ತದೆ. ಸರಿನಾ ಗೆಳೆಯರೇ' ಎಂದರು.

'ಇದನ್ನು ಬಲವಾಗಿ ಮಾತನಾಡಿ, ಆಕ್ರಮಣಕಾರಿಯಾಗಿರಿ, ಕಠೋರವಾಗಿರಿ; ಏಕೆಂದರೆ ಇದೇ ಅವರಿಗೆ ಸಹಾಯ ಮಾಡುತ್ತಿದೆ, ಸರಿನಾ? ಧನ್ಯವಾದಗಳು' ಎಂದು ಅವರು ಹೇಳಿದರು.

ಈ ಆತ್ಮಕಥೆಯ ಪ್ರತಿಗಳನ್ನು ಪಡೆಯಲು ದೆಹಲಿ ಮಧ್ಯಭಾಗದಲ್ಲಿರುವ ಪ್ರಮುಖ ಪುಸ್ತಕ ಮಳಿಗೆಗಳ ಮುಂದೆ ಓದುಗರು ಸಾಲುಗಟ್ಟಿ ನಿಂತರು; ಮಂಗಳವಾರ ಬಿಡುಗಡೆಯಾದ ಈ ಪುಸ್ತಕಕ್ಕೆ ಓದುಗರಿಂದ ಭಾರಿ ಉತ್ಸಾಹ ವ್ಯಕ್ತವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Bengaluru | ನಮ್ಮ ಮೆಟ್ರೊ ಪಿಂಕ್ ಲೈನ್ ಪ್ರಧಾನಿ ಮೋದಿ ಉದ್ಘಾಟನೆ; ನ.14ರಿಂದ ಕಾರ್ಯಾಚರಣೆ

ಸಾಂಪ್ರದಾಯಿಕ ಮದುವೆಗೆ ಬ್ರೇಕ್; ಸೆಲ್ಫ್ ರೆಸ್ಪೆಕ್ಟ್ ಮ್ಯಾರೇಜ್ ಆದ ಅನಿರುದ್ಧ್-ಕಾವ್ಯಾ ಮಾರನ್: ಏನಿದು ಹೊಸ ಪದ್ಧತಿ?

4th ODI: 16 ವರ್ಷಗಳ ಬಳಿಕ ಮತ್ತದೇ ಆಘಾತ, ಒಂದೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ!

4th ODI: ಒಂದೇ ಓವರ್ ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಡಕೌಟ್, Matt Henry ಮಾರಕ ಬೌಲಿಂಗ್, ವಿಶ್ವದಾಖಲೆ!

4th ODI: ಒಂದೂ ರನ್ ಗಳಿಸದೇ 3 ವಿಕೆಟ್ ಪತನ, ಕ್ರಿಕೆಟ್ ಇತಿಹಾಸದ ಹೀನಾಯ ದಾಖಲೆ ಬರೆದ ಭಾರತ!