ಪದ್ಮಜಾ ವೇಣುಗೋಪಾಲ್​  online desk
ದೇಶ

ಬಿಜೆಪಿಗೆ ಸೇರಿದ್ದು ನನ್ನ ತಪ್ಪು: ಪಕ್ಷ ತೊರೆದ ಮಾಜಿ ಕಾಂಗ್ರೆಸ್ ಸಿಎಂ ಪುತ್ರಿ!

ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಬಿಜೆಪಿ ತೊರೆದ ನಂತರ ಪ್ರತಿಕ್ರಿಯೆ ನೀಡಿರುವ ಪದ್ಮಜಾ ವೇಣುಗೋಪಾಲ್​ ಬಿಜೆಪಿಗೆ ಸೇರಿದ್ದು ನನ್ನ ತಪ್ಪು ಎಂದು ಹೇಳಿದ್ದಾರೆ.

ತಿರುವನಂತಪುರಂ: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಕೇರಳದ ಮಾಜಿ ಸಿಎಂ ಪುತ್ರಿ ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ.

ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಬಿಜೆಪಿ ತೊರೆದ ನಂತರ ಪ್ರತಿಕ್ರಿಯೆ ನೀಡಿರುವ ಪದ್ಮಜಾ ವೇಣುಗೋಪಾಲ್​ ಬಿಜೆಪಿಗೆ ಸೇರಿದ್ದು ನನ್ನ ತಪ್ಪು ಎಂದು ಹೇಳಿದ್ದಾರೆ.

2024ರ ಲೋಕಸಭಾ ಚುನಾವಣೆಗೂ ಮುನ್ನ ಪದ್ಮಜಾ ವೇಣುಗೋಪಾಲ್​​ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಕುಟುಂಬದ ರಾಜಕೀಯ ಹಿನ್ನೆಲೆ ಹಾಗೂ ಬಿಜೆಪಿಯ ಪರ ಬೆಳೆಯುತ್ತಿರುವ ಅಲೆಯ ಹೊರತಾಗಿಯೂ ಅವರು ಸತತ ಮೂರನೇ ಬಾರಿಗೆ ಸೋಲು ಕಂಡಿದ್ದರು.

ಕಳೆದ ಏಪ್ರಿಲ್ 09ರಂದು ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪದ್ಮಜಾ ವೇಣುಗೋಪಾಲ್ 31,628 ಮತಗಳ ಅಂತರದಿಂದ ಚುನಾವಣೆಯಲ್ಲಿ ಸೋತಿದ್ದರು.

ಕಾಂಗ್ರೆಸ್​ನಲ್ಲೂ ಸಿಕ್ಕಿರಲಿಲ್ಲ ಗೆಲುವು

ಪದ್ಮಜಾ ವೇಣುಗೋಪಾಲ್ ಅವರು ಈ ಹಿಂದೆಯೂ ತ್ರಿಶೂರ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿದ್ದರು. 2016ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿಯೂ ಸೋಲನ್ನು ಎದುರಿಸಿದ್ದರು.

2024ರ ಲೋಕಸಭಾ ಚುನಾವಣೆಗೆ ಮುನ್ನ ಪದ್ಮಜಾ ವೇಣುಗೋಪಾಲ್​ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿ ಟಿಕೆಟ್‌ನಲ್ಲಿ ತ್ರಿಶೂರ್‌ನಿಂದ ಸ್ಪರ್ಧಿಸುವಾಗ ಅವರಿಗೆ ತಮ್ಮ ಗೆಲುವಿನ ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು. ಪಕ್ಷದ ಬೆಳೆಯುತ್ತಿರುವ ಜನಬೆಂಬಲ ಮತ್ತು ಚುನಾವಣೆಯಲ್ಲಿ ಸಂಘಟನೆಯ ಶ್ರಮ ಈ ಬಾರಿ ತಮ್ಮ ಗೆಲುವಿನ ಹಾದಿಯನ್ನು ಸುಗಮಗೊಳಿಸುತ್ತದೆ ಎಂದು ನಿರೀಕ್ಷಿಸಿದ್ದರು. ಆದ್ರೆ ಚುನಾವಣಾ ಫಲಿತಾಂಶಗಳು ಅವರ ಪರವಾಗಿ ಇರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಸವಣ್ಣನವರ ಗೌರವಕ್ಕೆ ಧಕ್ಕೆ ಆರೋಪ: ಲೇಖಕ ರವಿ ಹಂಜ್ 'ಬಸವ ಮಂಟಪ' ಕೃತಿ ಮುಟ್ಟುಗೋಲಿಗೆ ಸಂಪುಟ ಒಪ್ಪಿಗೆ

ಇತಿಹಾಸ ಸೃಷ್ಟಿಸಿದ ಬುಮ್ರಾ: ಶ್ರೀನಾಥ್ ಹಿಂದಿಕ್ಕಿ ಭಾರತದ 10ನೇ ಯಶಸ್ವಿ ಟೆಸ್ಟ್ ಬೌಲರ್ ಸ್ಥಾನಕ್ಕೆ ಎಂಟ್ರಿ!

ಸಂಧಾನ ಸಭೆ ವಿಫಲ: ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ, ಹೋರಾಟ ಕೈಬಿಡುವಂತೆ ಸಿಎಂ ಶಿವಕುಮಾರ್ ಮನವಿ! Video

'ಬಸವ ಮಂಟಪ' ಕೃತಿ ವಿರುದ್ಧ ಭುಗಿಲೆದ್ದ ಆಕ್ರೋಶ: ಧರ್ಮ ವಿರೋಧಿಗಳು ನನ್ನ ವಾದ ಒಪ್ಪಲ್ಲ- ಲೇಖಕ ರವಿ ಹಂಜ್ ಸ್ಪಷ್ಟನೆ

'ಪರಮಾಣು ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ, ಅದನ್ನು ಎಂದಿಗೂ ಮಾಡಬಾರದು': ಶಾಂತಿ ಘೋಷಣೆಗೆ ಟ್ರಂಪ್, ಪುಟಿನ್, ಕ್ಸಿ ಜಿನ್ ಪಿಂಗ್ ಸಹಿ