ತಮಿಳುನಾಡು ರೈತರ ಪ್ರತಿಭಟನೆ 
ದೇಶ

ಮೇಕೆದಾಟು ಅಣೆಕಟ್ಟು: ಸಿಎಂ ಡಿಕೆಶಿಯ ನಿಲುವಿಗೆ ವಿರೋಧ; ಕಾವೇರಿ ನದಿಯ ಮರಳಿನಲ್ಲಿ ಹೂತುಕೊಂಡು ತಮಿಳುನಾಡು ರೈತರ ಪ್ರತಿಭಟನೆ!

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಲೇಬೇಕೆಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪದೇ ಪದೇ ನೀಡುತ್ತಿರುವ ಹೇಳಿಕೆಗಳ ವಿರುದ್ಧವೂ ರೈತರು ಆಕ್ರೋಶ ವ್ಯಕ್ತಪಡಿಸಿದರು.

ತಿರುಚಿರಾಪಳ್ಳಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದರಲ್ಲಿ ಕರ್ನಾಟಕ ಸರ್ಕಾರದ ವಿಳಂಬ ಹಾಗೂ ಸಿಎಂ ಡಿಕೆ ಶಿವಕುಮಾರ್ ಅವರ ಮೇಕೆದಾಟು ಅಣೆಕಟ್ಟು ನಿಲುವನ್ನು ವಿರೋಧಿಸಿ 'ನ್ಯಾಷನಲ್ ಸೌತ್ ಇಂಡಿಯನ್ ರಿವರ್ಸ್ ಇಂಟರ್‌ಲಿಂಕಿಂಗ್ ಫಾರ್ಮರ್ಸ್ ಅಸೋಸಿಯೇಷನ್' ಸಂಘಟನೆಯ ರೈತರು ತಿರುಚಿರಾಪಳ್ಳಿಯಲ್ಲಿ ಕಾವೇರಿ ನದಿಯ ಮರಳಿನಲ್ಲಿ ತಮ್ಮ ದೇಹವನ್ನು ಹೂತುಕೊಂಡು ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಲೇಬೇಕೆಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪದೇ ಪದೇ ನೀಡುತ್ತಿರುವ ಹೇಳಿಕೆಗಳ ವಿರುದ್ಧವೂ ರೈತರು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿಗೆ ಕಾವೇರಿ ನದಿಯು ನೀರಿನ ಪ್ರಮುಖ ಮೂಲವಾಗಿದ್ದು, ಈ ನದಿ ಹರಿಯುವ ಜಿಲ್ಲೆಗಳ ರೈತರ ಜೀವನಾಡಿಯಾಗಿದೆ. ಈ ಜಿಲ್ಲೆಗಳಲ್ಲಿನ ಸಾವಿರಾರು ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಈ ನದಿಯ ನೀರನ್ನೇ ಅವಲಂಬಿಸಿದ್ದು, ತಮಿಳುನಾಡಿಗೆ ಸಲ್ಲಬೇಕಾದ ಕಾವೇರಿ ನೀರಿನ ನ್ಯಾಯಯುತ ಪಾಲನ್ನು ಬಿಡುಗಡೆ ಮಾಡಬೇಕೆಂಬುದು ರೈತರು ಆಗ್ರಹಿಸಿದ್ದಾರೆ.

ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವ ಯೋಜನೆಯು ಜಾರಿಯಾದರೆ ತಮಿಳುನಾಡಿಗೆ ಹರಿದು ಬರುವ ನೀರಿನ ಪ್ರಮಾಣದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತಪಡಿಸಿರುವ ತಮಿಳುನಾಡಿನ ರೈತರು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಸವಣ್ಣನವರ ಗೌರವಕ್ಕೆ ಧಕ್ಕೆ ಆರೋಪ: ಲೇಖಕ ರವಿ ಹಂಜ್ 'ಬಸವ ಮಂಟಪ' ಕೃತಿ ಮುಟ್ಟುಗೋಲಿಗೆ ಸಂಪುಟ ಒಪ್ಪಿಗೆ

ಇತಿಹಾಸ ಸೃಷ್ಟಿಸಿದ ಬುಮ್ರಾ: ಶ್ರೀನಾಥ್ ಹಿಂದಿಕ್ಕಿ ಭಾರತದ 10ನೇ ಯಶಸ್ವಿ ಟೆಸ್ಟ್ ಬೌಲರ್ ಸ್ಥಾನಕ್ಕೆ ಎಂಟ್ರಿ!

ಸಂಧಾನ ಸಭೆ ವಿಫಲ: ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ, ಹೋರಾಟ ಕೈಬಿಡುವಂತೆ ಸಿಎಂ ಶಿವಕುಮಾರ್ ಮನವಿ! Video

'ಬಸವ ಮಂಟಪ' ಕೃತಿ ವಿರುದ್ಧ ಭುಗಿಲೆದ್ದ ಆಕ್ರೋಶ: ಧರ್ಮ ವಿರೋಧಿಗಳು ನನ್ನ ವಾದ ಒಪ್ಪಲ್ಲ- ಲೇಖಕ ರವಿ ಹಂಜ್ ಸ್ಪಷ್ಟನೆ

'ಪರಮಾಣು ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ, ಅದನ್ನು ಎಂದಿಗೂ ಮಾಡಬಾರದು': ಶಾಂತಿ ಘೋಷಣೆಗೆ ಟ್ರಂಪ್, ಪುಟಿನ್, ಕ್ಸಿ ಜಿನ್ ಪಿಂಗ್ ಸಹಿ