ಭುಜ್-ಖಾವ್ಡಾ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ Online Desk
ದೇಶ

ರಣ್ ಆಫ್ ಕಚ್ ಪ್ರವಾಸ ಮುಗಿಸಿ ಮರಳುತ್ತಿದ್ದಾಗ ಘೋರ ದುರಂತ: 3 ತಿಂಗಳ ಕಂದಮ್ಮ ಸೇರಿ ಒಂದೇ ಸೇನಾ ಯೋಧನ ಕುಟುಂಬದ 7 ಮಂದಿ ದುರ್ಮರಣ

ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, 3 ತಿಂಗಳ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕಚ್ (ಗುಜರಾತ್): ಗುಜರಾತ್‌ನ ಕಚ್ ಜಿಲ್ಲೆಯ ಭುಜ್-ಖಾವ್ಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಟ್ರೇಲರ್ ಟ್ರಕ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಕುರಿತ ವರಿ ಇಲ್ಲಿದೆ:

ಘಟನೆಯ ಹಿನ್ನೆಲೆ ಏನು?

ಮೃತರೆಲ್ಲರೂ ಉತ್ತರಾಖಂಡದ ಗರ್ವಾಲ್ ಮೂಲದವರಾಗಿದ್ದು, ಭುಜ್‌ನಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನಾ ಯೋಧರೊಬ್ಬರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಾಗಿದ್ದಾರೆ. ರಣ್ ಆಫ್ ಕಚ್ ಪ್ರವಾಸ ಮುಗಿಸಿ ಶನಿವಾರ ರಾತ್ರಿ 9:30 ರಿಂದ 10 ಗಂಟೆಯ ಸುಮಾರಿಗೆ ಕಾರಿನಲ್ಲಿ ಭುಜ್‌ಗೆ ಹಿಂತಿರುಗುತ್ತಿದ್ದಾಗ, ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಟ್ರೇಲರ್ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಎರಡು ತುಂಡುಗಳಾಗಿದ್ದು, ನಜ್ಜುಗುಜ್ಜಾದ ವಾಹನದಿಂದ ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ತಂಡಗಳಿಗೆ ಗಂಟೆಗಟ್ಟಲೆ ಸಮಯ ಹಿಡಿಯಿತು ಎನ್ನಲಾಗಿದೆ.

ಮುಂದುವರೆದು, ಅಪಘಾತದಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಮೃತರನ್ನು ಸೌರಭ್ ಸಿಂಗ್ ನೇಗಿ (30-32), ಅವರ ಪತ್ನಿ ಸವಿತಾ ಮತ್ತು ಅವರ 3 ತಿಂಗಳ ಮಗು ಸಿವಿಕಾ; ರಾಜೇಶ್ ಸಿಂಗ್ ರಾವತ್ (35) ಮತ್ತು ಅವರ 7 ವರ್ಷದ ಮಗಳು ರಕ್ಷಿತಾ; ರಿಂಕಿ ಗೋಸೈನ್ (30) ಮತ್ತು ಅವರ 4 ವರ್ಷದ ಮಗಳು ವಾಮಿಕಾ ಎಂದು ಗುರುತಿಸಲಾಗಿದೆ. ಇನ್ನು, ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭುಜ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸೇನಾ ಅಧಿಕಾರಿಗಳೂ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ, ಒಂದೇ ಕುಟುಂಬದ 9 ಮಂದಿ ದುರ್ಮರಣ..!

ಹಿರಿಯೂರು ಉಪಚುನಾವಣೆಗೆ ರಣಕಹಳೆ: ದಿನಾಂಕ ಘೋಷಣೆಗೂ ಮುನ್ನವೇ ರಂಗೇರಿದ ಅಖಾಡ; ಅನುಕಂಪದ ಅಲೆ v/s ಮೈತ್ರಿ ಬಲ, ಯಾರ ಪಾಲಾಗಲಿದೆ ಕ್ಷೇತ್ರ..?

ಕ್ರಿಕೆಟ್ ಮೈದಾನದಿಂದ ರಾಜಕೀಯ ಅಖಾಡಕ್ಕೆ ಚತುರ್ ಚಾಹಲ್: ಬಿಜೆಪಿ ಒಬಿಸಿ ಮೋರ್ಚಾದಲ್ಲಿ ಸ್ಪಿನ್ ಮಾಂತ್ರಿಕ ಯುಜುವೇಂದ್ರ ಚಾಹಲ್‌ಗೆ ಹೊಸ ಜವಾಬ್ದಾರಿ

ಹಿರಿಯೂರು ಬೈಎಲೆಕ್ಷನ್: ಮೈತ್ರಿ ಪಕ್ಷಗಳಿಗೆ ಮೊದಲ ಪರೀಕ್ಷೆ; ಅಭ್ಯರ್ಥಿ ಆಯ್ಕೆ ಅಮಿತ್ ಶಾ ಕೈಯಲ್ಲಿ, ಯಾರಿಗೆ ಒಲಿಯಲಿದೆ ಟಿಕೆಟ್?

ಅಣ್ಣನ ಮನವಿಗೂ ಜಗ್ಗದ ಆಶಾ ಕಾರ್ಯಕರ್ತೆಯರು: 6ನೇ ದಿನಕ್ಕೆ ಕಾಲಿಟ್ಟ ಧರಣಿ, ಮಾತುಕತೆ ವಿಫಲ ಬೆನ್ನಲ್ಲೇ ಸೋಮವಾರದಿಂದ ಹೋರಾಟ ತೀವ್ರ!