ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

'Thalaivi Trisha': ತ್ರಿಶಾಗೆ ಜಯಲಲಿತಾ ಬಿರುದು; ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ನಟಿ?

"ಕಲ್ಯಾಣ ಕಾರ್ಯಗಳ ಮೂಲಕ, ವಿಜಯ್ ಅವರೊಂದಿಗೆ ತ್ರಿಶಾ ಕೂಡ ರಾಜಕೀಯಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ. ಅವರಿಬ್ಬರೂ ಒಟ್ಟಾಗಿ ರಾಜಕೀಯದಲ್ಲಿ ಸಾಗಿದರೆ, ತಮಿಳುನಾಡಿನ ಅಭಿವೃದ್ಧಿ ಇನ್ನಷ್ಟು ಉತ್ತಮಗೊಳ್ಳುತ್ತದೆ" ಎಂದು ಈ ಹೊಸ ಸಂಘಟನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇಲೈಯಾ ಪುರಚ್ಚಿ ತಲೈವಿ ತ್ರಿಶಾ ಸಂಘಟನೆ
Lingaraj Badiger
Updated On : 23 Nov 2026, 5:11 pm

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೊಂದಿಗೆ, ನಟಿ ತ್ರಿಶಾ ಕೃಷ್ಣನ್ ಕೂಡ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಲಿದ್ದಾರೆ ಎಂದು ತ್ರಿಶಾ ಅವರ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ತ್ರಿಶಾ ಅವರ ಅಭಿಮಾನಿಗಳು, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಿರುದಿನಿಂದ ಸ್ಫೂರ್ತಿ ಪಡೆದು ಹೊಸ ಸಂಘಟನೆಯೊಂದನ್ನು ಶುರು ಮಾಡಿದ್ದು, ನಟಿ ರಾಜಕೀಯಕ್ಕೆ ಪ್ರವೇಶಿಸುತ್ತಾರೆಯೇ? ಎಂಬ ಚರ್ಚೆ ಹುಟ್ಟು ಹಾಕಿದೆ.

ನಟಿ ತ್ರಿಶಾ ಅವರ ಅಭಿಮಾನಿಗಳ ಗುಂಪೊಂದು 'ಇಲೈಯಾ ಪುರಚ್ಚಿ ತಲೈವಿ ತ್ರಿಶಾ'(Ilaiya Puratchi Thalaivi Trisha) ಎಂಬ ಸಂಘಟನೆಯನ್ನು ಆರಂಭಿಸಿದ್ದು, ನಟಿ ಮುಂದೊಂದು ದಿನ ವಿಜಯ್ ಅವರೊಂದಿಗೆ ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಂದೆ ಜಯಲಲಿತಾ ಅವರನ್ನು ಅಭಿಮಾನಿಗಳು ‘ಪುರಚ್ಚಿ ತಲೈವಿ’ ಎಂದು ಕರೆಯುತ್ತಿದ್ದರು. ಈಗ ಅದೇ ಹೆಸರಿಗೆ ‘ಯುವ’ (ಇಲೈಯಾ) ಎಂಬ ಪದ ಸೇರಿಸಿ ತ್ರಿಶಾ ಅವರಿಗೆ ಈ ಬಿರುದು ಕೊಟ್ಟಿರುವುದು ಎಲ್ಲರ ಗಮನ ಸೆಳೆದಿದೆ.

Advertisement

Advertisement

"ಕಲ್ಯಾಣ ಕಾರ್ಯಗಳ ಮೂಲಕ, ವಿಜಯ್ ಅವರೊಂದಿಗೆ ತ್ರಿಶಾ ಕೂಡ ರಾಜಕೀಯಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ. ಅವರಿಬ್ಬರೂ ಒಟ್ಟಾಗಿ ರಾಜಕೀಯದಲ್ಲಿ ಸಾಗಿದರೆ, ತಮಿಳುನಾಡಿನ ಅಭಿವೃದ್ಧಿ ಇನ್ನಷ್ಟು ಉತ್ತಮಗೊಳ್ಳುತ್ತದೆ" ಎಂದು ಈ ಹೊಸ ಸಂಘಟನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Also Read

ಧ್ರುವ್ ರಾಠಿಗೆ ಬಿಗ್ ಶಾಕ್: ದೆಹಲಿ ಕೋರ್ಟ್'ನಿಂದ ಜಾಮೀನು ರಹಿತ ಬಂಧನ ವಾರಂಟ್ ಜಾರಿ!

ಈ ವೇದಿಕೆಯು ತ್ರಿಷಾ ಅವರಿಗೆ 'ಇಲೈಯಾ ಪುರಚ್ಚಿ ತಲೈವಿ' (ಯುವ ಕ್ರಾಂತಿಕಾರಿ ನಾಯಕಿ) ಎಂಬ ಬಿರುದನ್ನು ನೀಡಿದ್ದು, ನಟಿಯನ್ನು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಹೋಲಿಕೆ ಮಾಡಿದೆ.

ಮಾಜಿ ಮುಖ್ಯಮಂತ್ರಿ ದಿ.ಜೆ. ಜಯಲಲಿತಾ ಅವರನ್ನೇ ಹೋಲುವ ವ್ಯಕ್ತಿತ್ವವನ್ನು ತ್ರಿಶಾ ಹೊಂದಿದ್ದಾರೆ ಎಂದು ಬಣ್ಣಿಸಿರುವ ಈ ವೇದಿಕೆಯು, ಅವರನ್ನು "ಜಯಲಲಿತಾ ಅವರ ಪ್ರತಿರೂಪ" ಎಂದು ಕರೆದಿದೆ. ಈ ಇಬ್ಬರು ಮಹಿಳೆಯರ ನಡುವೆ ತಮಗೆ ಕಂಡುಬಂದ ಹೋಲಿಕೆಗಳ ಆಧಾರದ ಮೇಲೆಯೇ ಈ ಬಿರುದನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘ ತಿಳಿಸಿದೆ.

ಜಯಲಲಿತಾ ಅವರ ಬಗ್ಗೆ ತಮಗಿರುವ ಮೆಚ್ಚುಗೆಯನ್ನು ವ್ಯಕ್ತಪಡಿಸುವಾಗ, ಈ ವೇದಿಕೆಯು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯ ಆಡಳಿತ ಶೈಲಿಯನ್ನು ನೆನಪಿಸಿಕೊಂಡಿದೆ. ತಮಿಳುನಾಡಿನಾದ್ಯಂತ ನಡೆಯುವ ಬೆಳವಣಿಗೆಗಳ ಬಗ್ಗೆ ಅವರು ಸಂಪೂರ್ಣ ಮಾಹಿತಿ ಹೊಂದಿದ್ದರು ಮತ್ತು ಸರ್ಕಾರಿ ಅಧಿಕಾರಿಗಳ ಕಾರ್ಯನಿರ್ವಹಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಎಂದು ಹೇಳಿದೆ.

ಈ ಸಂಘಟನೆಯ ಸಂಯೋಜಕ ರಾಜಗೋಪಾಲ್ ಮಾತನಾಡಿ, ತ್ರಿಷಾ ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಜೊತೆ ಸೇರಿ ರಾಜಕೀಯಕ್ಕೆ ಬಂದರೆ ಜನರಿಗೆ ಒಳ್ಳೆಯದಾಗುತ್ತೆ ಅಂತ ತಮ್ಮ ಆಸೆ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement