ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕೇರಳ: ಶಾಲೆಗೆ ಬಂದೂಕು ತಂದ ಬಾಲಕ; ಆಕಸ್ಮಿಕವಾಗಿ ಸಿಡಿದು ವಿದ್ಯಾರ್ಥಿ ಗಾಯ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕುತೂಹಲದಿಂದ ವಿದ್ಯಾರ್ಥಿಯೊಬ್ಬ ಮನೆಯಿಂದ ಬಂದೂಕನ್ನು ಶಾಲೆಗೆ ತಂದಿದ್ದ. ಅದನ್ನು ಸಹಪಾಠಿಗಳಿಗೆ ತೋರಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದಿದೆ. ಗುಂಡು ಮತ್ತೊಬ್ಬ 9ನೇ ತರಗತಿ ವಿದ್ಯಾರ್ಥಿಯ ತೋಳಿಗೆ ತಗುಲಿದೆ.

ಸಾಂದರ್ಭಿಕ ಚಿತ್ರ
Sumana Upadhyaya
Updated On : 25 Nov 2026, 11:16 am

ಪಾಲಕ್ಕಾಡ್: ಸಹಪಾಠಿಯೊಬ್ಬ ಶಾಲೆಗೆ ತಂದಿದ್ದ ಬಂದೂಕು ಆಕಸ್ಮಿಕವಾಗಿ ಸಿಡಿದ ಪರಿಣಾಮ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಗುಂಡೇಟಿನಿಂದ ಗಾಯಗೊಂಡ ಘಟನೆ ನಿನ್ನೆ ಮಂಗಳವಾರ ಬೆಳಗ್ಗೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ನಡೆದಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕುತೂಹಲದಿಂದ ವಿದ್ಯಾರ್ಥಿಯೊಬ್ಬ ಮನೆಯಿಂದ ಬಂದೂಕನ್ನು ಶಾಲೆಗೆ ತಂದಿದ್ದ. ಅದನ್ನು ಸಹಪಾಠಿಗಳಿಗೆ ತೋರಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದಿದೆ. ಗುಂಡು ಮತ್ತೊಬ್ಬ 9ನೇ ತರಗತಿ ವಿದ್ಯಾರ್ಥಿಯ ತೋಳಿಗೆ ತಗುಲಿದೆ.

ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ಪ್ರಜ್ಞಾವಸ್ಥೆಯಲ್ಲಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

Advertisement

Advertisement

Also Read

Watch | ಬೆಂಗಳೂರು ಕಟ್ಟಡದಲ್ಲಿ ಸ್ಫೋಟ: ಇಬ್ಬರಿಗೆ ಗಾಯ; ಪ್ರಿಯಾಂಕ್ ಖರ್ಗೆ ರಿಯಾಕ್ಷನ್!

ಪ್ರಾಥಮಿಕ ಬ್ಯಾಲಿಸ್ಟಿಕ್ ಪರೀಕ್ಷೆಯಲ್ಲಿ ಇದು ಕಾರ್ಯನಿರ್ವಹಿಸುವ ಸುಧಾರಿತ ಮಾದರಿಯ ಡಬಲ್ ಆ್ಯಕ್ಷನ್ ರಿವಾಲ್ವರ್ ಎಂಬುದು ದೃಢಪಟ್ಟಿದೆ. ದೇಶೀಯವಾಗಿ ತಯಾರಿಸಲಾದ ಈ ಆಯುಧ ಮೇಲೆ ತಯಾರಕರ ಹೆಸರಿನ ಗುರುತು ಇಲ್ಲ. ಈ ರಿವಾಲ್ವರ್‌ಗೆ ಅಧಿಕೃತ ಪರವಾನಗಿ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭಿಕ ವರದಿಗಳ ಪ್ರಕಾರ, ಬಂದೂಕು ವಿದ್ಯಾರ್ಥಿಯ ಅಜ್ಜನಿಗೆ ಸೇರಿರಬಹುದು ಎಂದು ಹೇಳಲಾಗಿದೆಯಾದರೂ, ಅದರ ಮಾಲೀಕತ್ವ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಂದೂಕಿನ ಮೂಲ ಯಾವುದು, ಅದನ್ನು ಹೇಗೆ ಮತ್ತು ಏಕೆ ಖರೀದಿಸಲಾಗಿತ್ತು ಹಾಗೂ ವಿದ್ಯಾರ್ಥಿಗೆ ಅದು ಹೇಗೆ ಲಭ್ಯವಾಯಿತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement