ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕ್ಷೇತ್ರ ಪುನರ್ ವಿಂಗಡಣೆ ಮಸೂದೆ: 371 ಸಂಸದರ ಬೆಂಬಲವಿದೆ ಎಂದ ಕೇಂದ್ರ ಸರ್ಕಾರ!

ಕಳೆದ ಏಪ್ರಿಲ್ ನಲ್ಲಿ ಸೋಲಾಗಿದ್ದ ತಿದ್ದುಪಡಿ ಮಸೂದೆಯನ್ನು ಕೆಲವು ಬದಲಾವಣೆಗಳೊಡನೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಈಗ ಮತ್ತೆ ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಲು ಮುಂದಾಗಿದೆ.

ಲೋಕಸಭೆ
Nagaraja AB
Updated On : 29 Nov 2026, 6:51 pm

ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯ ಸಂವಿಧಾನದ 132ನೇ ತಿದ್ದುಪಡಿ ಮಸೂದೆ ಮಂಡನೆಗಾಗಿ ನಾಳೆಯಿಂದ ಮೂರು ದಿನಗಳ ವಿಶೇಷ ಅಧಿವೇಶನ ಆರಂಭವಾಗುತ್ತಿದ್ದು, ಕಳೆದ ಏಪ್ರಿಲ್ ನಲ್ಲಿ ಸೋಲಾಗಿದ್ದ ತಿದ್ದುಪಡಿ ಮಸೂದೆಯನ್ನು ಕೆಲವು ಬದಲಾವಣೆಗಳೊಡನೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಈಗ ಮತ್ತೆ ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಲು ಮುಂದಾಗಿದೆ.

ಈ ಬಾರಿ ಈ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಎನ್ ಡಿಎ ಸರ್ಕಾರ ಹತ್ತಾರು ಕಸರತ್ತುಗಳನ್ನು ನಡೆಸುತ್ತಿದೆ. ಈ ನಡುವೆ ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಲೋಕಸಭೆಯ 371 ಸಂಸದರ ಬೆಂಬಲ ತನಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಈ ಪ್ರಸ್ತಾವಿತ ಮಸೂದೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಸ್ಥಾನಗಳನ್ನು ಶೇಕಡಾ 50ರಷ್ಟು ಹೆಚ್ಚಿಸಲು ಅವಕಾಶ ಕಲ್ಪಿಸುತ್ತದೆ. ಅಲ್ಲದೆ, ಈ ಹೆಚ್ಚುವರಿ ಮೀಸಲಾತಿ ಕೋಟಾದ ಒಳಗಡೆಯೇ ಮಹಿಳೆಯರಿಗೆ ಮೀಸಲಾತಿಯನ್ನೂ ಜಾರಿಗೊಳಿಸಲಾಗುತ್ತದೆ ಎಂದು ಆ ಅಧಿಕಾರಿ ಮಾಹಿತಿ ನೀಡಿದ್ದಾರೆ.

Advertisement

Advertisement

Also Read

'ಪಿಚ್ಚರ್ ಅಭಿ ಬಾಕಿ ಹೈ, ಬ್ರೋ'; ಕ್ಷೇತ್ರ ಮರುವಿಂಗಡಣೆ ಮಸೂದೆ ಹಗ್ಗಜಗ್ಗಾಟದ ನಡುವೆ ನಿಗೂಢ ಪೋಸ್ಟ್ ಹಂಚಿಕೊಂಡ ಜೈರಾಮ್ ರಮೇಶ್!

ಕ್ಷೇತ್ರ ಪುನರ್ ವಿಂಗಡಣಾ ಆಯೋಗದಲ್ಲಿ ಒಬ್ಬ ಅಧ್ಯಕ್ಷರು, ಮುಖ್ಯ ಚುನಾವಣಾ ಆಯುಕ್ತರು ಅಥವಾ ಒಬ್ಬ ಚುನಾವಣಾ ಆಯುಕ್ತರು ಹಾಗೂ ಆಯಾ ರಾಜ್ಯದ ರಾಜ್ಯ ಚುನಾವಣಾ ಆಯುಕ್ತರು ಇರುತ್ತಾರೆ.

ಇದಲ್ಲದೆ, ಆಯಾ ರಾಜ್ಯಗಳಿಂದ ಐವರು ಸಂಸದರು (ಲೋಕಸಭಾ ಸದಸ್ಯರು) ಮತ್ತು ಐವರು ಶಾಸಕರು (ವಿಧಾನಸಭಾ ಸದಸ್ಯರು) ಕೂಡ ಈ ಆಯೋಗದ ಭಾಗವಾಗಿರುತ್ತಾರೆ ಎಂದು ಅಧಿಕಾರಿ ಹೇಳಿದ್ದಾರೆ. ಪ್ರಸ್ತಾವಿತ ಮಸೂದೆಯ ಕುರಿತು ಸಂಸತ್ತಿನಲ್ಲಿ ನಡೆಯಲಿರುವ ನಿರ್ಣಾಯಕ ಕಲಾಪಗಳಿಗೆ ಮುನ್ನವೇ 371 ಸಂಸದರ ಬೆಂಬಲವಿದೆ ಎಂಬ ಸರ್ಕಾರದ ಈ ಹೇಳಿಕೆ ಹೊರಬಿದ್ದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement