ಮ್ಯಾಡ್‌ ಸಂಧು 
ದೇಶ

ಪಂಜಾಬಿನ ಖ್ಯಾತ LGBTQ ಇನ್‌ಫ್ಲುಯೆನ್ಸರ್ ಮ್ಯಾಡ್‌ ಸಂಧು ಗುಂಡಿಕ್ಕಿ ಹತ್ಯೆ!

LGBTQ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿರುವ ಪಂಜಾಬಿ ಇನ್‌ಫ್ಲುಯೆನ್ಸರ್ ಮತ್ತು ಮೇಕಪ್ ಕಲಾವಿದ ಮ್ಯಾಡ್ ಸಂಧು ಅವರನ್ನು ಶನಿವಾರ (ಅ.3) ಅಮೃತಸರದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಚಂಡಿಗಢ: ಪಂಜಾಬಿನ ಖ್ಯಾತ ಸೋಶಿಯಲ್‌ ಮೀಡಿಯಾ ಪ್ರಭಾವಿ ಮತ್ತು ಮೇಕಪ್ ಆರ್ಟಿಸ್ಟ್ ಮ್ಯಾಡ್‌ ಸಂಧು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

LGBTQ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿರುವ ಪಂಜಾಬಿ ಇನ್‌ಫ್ಲುಯೆನ್ಸರ್ ಮತ್ತು ಮೇಕಪ್ ಕಲಾವಿದ ಮ್ಯಾಡ್ ಸಂಧು ಅವರನ್ನು ಶನಿವಾರ (ಅ.3) ಅಮೃತಸರದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಗುಂಡೇಟಿನಿಂದ ರಕ್ತಸಿಕ್ತವಾಗಿ ರಸ್ತೆಯಲ್ಲಿ ಮ್ಯಾಡ್ ಸಂಧು ಬಿದ್ದಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಬಥಿಂಡಾದಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವಿಯೊಬ್ಬರ ಇದೇ ರೀತಿಯ ಹತ್ಯೆ ನಡೆದ ಒಂದು ವರ್ಷದ ನಂತರ ಈ ಘಟನೆ ಸಂಭವಿಸಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.

ಸಂಧು ಅವರು ಮೇಕಪ್, ಚಲನಚಿತ್ರ ಉದ್ಯಮ ಮತ್ತು ಲಿಂಗತ್ವ ವಿಷಯಗಳ ಕುರಿತು ಮಾತನಾಡಲು ಪಾಡ್‌ಕಾಸ್ಟ್‌ಗಳಲ್ಲಿ ಆಗಾಗ್ಗೆ ಅತಿಥಿಯಾಗಿ ಭಾಗವಹಿಸುತ್ತಿದ್ದರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸಲಿಂಗಕಾಮಿ ವಿರೋಧಿ ಟ್ರೋಲ್‌ಗಳನ್ನು ಎದುರಿಸುತ್ತಿದ್ದರು.

ದೇವರು ನನ್ನನ್ನು ಹೇಗಿದ್ದೇನೋ ಹಾಗೆಯೇ ಸೃಷ್ಟಿಸಿದ್ದಾನೆ" ಎಂದು ಹೇಳುವ ಮೂಲಕ ಅವರು ಸಾಮಾನ್ಯವಾಗಿ ಇದಕ್ಕೆ ತಿರುಗೇಟು ನೀಡುತ್ತಿದ್ದರು ಮತ್ತು ತಾವು ಸಲಿಂಗಕಾಮಿ ಎಂಬುದನ್ನು ಎಂದಿಗೂ ಮುಚ್ಚಿಡುತ್ತಿರಲಿಲ್ಲ.

ಶನಿವಾರ ನಡೆದ ದಾಳಿಯ ನಂತರ ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮೃತಪಟ್ಟರು. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗುಂಡಿನ ದಾಳಿಯ ಕುರಿತು ತನಿಖೆ ಆರಂಭಿಸಿದ್ದಾರೆ. "ಸಂಜೆ 6 ಗಂಟೆ ಸುಮಾರಿಗೆ ಅಪರಿಚಿತ ಇಬ್ಬರು ವ್ಯಕ್ತಿಗಳು ಅವರ ಮೇಲೆ ಗುಂಡು ಹಾರಿಸಿದರು," ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಸಿರಿವೆನ್ನೆಲ ತಿಳಿಸಿದ್ದಾರೆ.

ಸಂಧು ಅವರ ಕುಟುಂಬದ ಬಗ್ಗೆ ನಿರ್ದಿಷ್ಟವಾಗಿ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ, ಸಂಧು ಅವರು ಪಂಜಾಬ್ ಮತ್ತು ಮುಂಬೈಯ ಚಲನಚಿತ್ರಗಳಲ್ಲಿ ಸ್ಟೈಲಿಸ್ಟ್ ಮತ್ತು ಸಹಾಯಕ ಮೇಕಪ್ ವಿನ್ಯಾಸಕರಾಗಿ ಫ್ಯಾಷನ್ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ‌

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭಾರತೀಯ ಪೈಲಟ್‌ಗೆ Israel ಅತ್ಯುನ್ನತ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ, ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ..!

5 IAS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ; ಯಾರಿಗೆಲ್ಲಾ ಬದಲಾವಣೆ

ಆಧಾರ ರಹಿತ ಆರೋಪ ಸರಿಯಲ್ಲ, ‘ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ; HDK NICE ಆರೋಪಕ್ಕೆ ಸಚಿವ ಬಾಲಕೃಷ್ಣ ತಿರುಗೇಟು

SIR ಅಕ್ರಮಗಳ ಕುರಿತು ರಾಜ್ಯದಿಂದ ಪ್ರತ್ಯೇಕ ತನಿಖೆ ಇಲ್ಲ: CM ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ