ಮಾಲ್ ನಲ್ಲಿ ಕಳ್ಳತನ ಮಾಡಿದ ಮಹಿಳೆ. 
ದೇಶ

ಐಷಾರಾಮಿ ಮಾಲ್‌ನಲ್ಲಿ ದಿನಸಿ ಕಳ್ಳತನ: ತುಪ್ಪ, ಎಣ್ಣೆ ಎಗರಿಸಲು ಹೋಗಿ ಮಹಿಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳೆ; Video ವೈರಲ್..!

ಮಳಿಗೆಯಲ್ಲಿದ್ದ ಬೆಲೆಬಾಳುವ ದೇಶಿ ತುಪ್ಪದ ಜಾರ್‌ಗಳು ಮತ್ತು ರಿಫೈನ್ಡ್ ಅಡುಗೆ ಎಣ್ಣೆಯ ಬಾಟಲಿಗಳನ್ನು ಯಾರಿಗೂ ತಿಳಿಯದಂತೆ ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುತ್ತಿದ್ದರು.

ನೋಯ್ಡಾ: ನೋಯ್ಡಾದ ಸೆಕ್ಟರ್ 18ರಲ್ಲಿರುವ ಪ್ರತಿಷ್ಠಿತ ಡಿಎಲ್‌ಎಫ್ ಮಾಲ್ ಆಫ್ ಇಂಡಿಯಾದಲ್ಲಿ (DLF Mall of India) ದಿನಸಿ ವಸ್ತುಗಳನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ಮಾಲ್‌ನ ಭದ್ರತಾ ಸಿಬ್ಬಂದಿ ರೆಡ್-ಹ್ಯಾಂಡ್ ಆಗಿ ಹಿಡಿದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾಲ್‌ನ ಒಳಗಿರುವ 'ಲೆ ಮಾರ್ಶೆ' (Le Marche) ಸೂಪರ್ ಮಾರ್ಕೆಟ್‌ನಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಸೋಮವಾರ (ಅಕ್ಟೋಬರ್ 5, 2026) ಗ್ರಾಹಕರ ಸೋಗಿನಲ್ಲಿ ಬಂದಿದ್ದ ಮಹಿಳೆಯೊಬ್ಬರು, ಮಳಿಗೆಯಲ್ಲಿದ್ದ ಬೆಲೆಬಾಳುವ ದೇಶಿ ತುಪ್ಪದ ಜಾರ್‌ಗಳು ಮತ್ತು ರಿಫೈನ್ಡ್ ಅಡುಗೆ ಎಣ್ಣೆಯ ಬಾಟಲಿಗಳನ್ನು ಯಾರಿಗೂ ತಿಳಿಯದಂತೆ ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುತ್ತಿದ್ದರು. ಸಿಸಿಟಿವಿ ಕ್ಯಾಮೆರಾಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮಳಿಗೆಯ ಆಡಳಿತ ಮಂಡಳಿಗೆ ಈಕೆಯ ನಡವಳಿಕೆ ಅನುಮಾನಾಸ್ಪದವಾಗಿ ಕಂಡಿದೆ.

ಮಹಿಳೆ ಬಿಲ್ ಪಾವತಿಸದೆ ಎಕ್ಸಿಟ್ ಗೇಟ್ ಮೂಲಕ ಹೊರಹೋಗಲು ಯತ್ನಿಸಿದ ತಕ್ಷಣ, ಅಲ್ಲಿ ಸನ್ನದ್ಧರಾಗಿದ್ದ ಮಹಿಳಾ ಭದ್ರತಾ ಸಿಬ್ಬಂದಿ ಮತ್ತು ಮಳಿಗೆಯ ಉದ್ಯೋಗಿಗಳು ಆಕೆಯನ್ನು ತಡೆದು ನಿಲ್ಲಿಸಿದ್ದಾರೆ. ಸಿಬ್ಬಂದಿ ಆಕೆಯ ಬ್ಯಾಗ್ ಪರಿಶೀಲಿಸಿದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ.

ಈ ನಡುವೆ ಭದ್ರತಾ ಸಿಬ್ಬಂದಿ ತಡೆದು ಪ್ರಶ್ನಿಸುತ್ತಿದ್ದಂತೆ ಕಂಗಾಲಾದ ಮಹಿಳೆ, ತನ್ನ ಮುಖವನ್ನು ಮೊಬೈಲ್ ಫೋನ್‌ನಿಂದ ಮುಚ್ಚಿಕೊಳ್ಳಲು ಯತ್ನಿಸಿದ್ದಾರೆ. ಸಿಬ್ಬಂದಿ ಆಕೆಯನ್ನು ಕಚೇರಿಯತ್ತ ಕರೆದೊಯ್ಯುತ್ತಿರುವ ದೃಶ್ಯಗಳನ್ನು ಅಲ್ಲಿದ್ದ ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈಕೆ ಈ ಹಿಂದೆಯೂ ಇಂತಹ ಕೃತ್ಯ ಎಸಗಿರುವ ಹಳೇ ಕಳ್ಳಿ ಎಂದು ಮಳಿಗೆಯ ಸಿಬ್ಬಂದಿ ಆರೋಪಿಸಿದ್ದಾರೆ.

ಘಟನೆ ದೊಡ್ಡದಾಗುತ್ತಿದ್ದಂತೆ ಮಹಿಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. "ನನ್ನ ಜೊತೆ ಬಂದಿದ್ದ ಮತ್ತೊಬ್ಬರು ಈಗಾಗಲೇ ಬಿಲ್ಲಿಂಗ್ ಕೌಂಟರ್‌ನಲ್ಲಿ ಕ್ಯೂ ನಿಂತಿದ್ದಾರೆ, ಅವರು ಹಣ ಪಾವತಿಸುತ್ತಾರೆ" ಎಂದು ಮಹಿಳೆ ಹೇಳಿದ್ದಾರೆ.

ತಕ್ಷಣವೇ ಕಳ್ಳತನದ ಆರೋಪಕ್ಕೆ ಒಳಗಾಗಿದ್ದ ಎಲ್ಲಾ ದಿನಸಿ ವಸ್ತುಗಳ ಸಂಪೂರ್ಣ ಬಿಲ್ ಮೊತ್ತವನ್ನು ಕೌಂಟರ್‌ನಲ್ಲಿ ಪಾವತಿಸಿ ಪ್ರಕರಣವನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು.

ಹಣ ಪಾವತಿಯಾದ ಹಿನ್ನೆಲೆಯಲ್ಲಿ ಮಳಿಗೆಯವರು ಯಾವುದೇ ಅಧಿಕೃತ ದೂರನ್ನು ನೀಡಿಲ್ಲ. ಹಾಗಾಗಿ ಈ ಬಗ್ಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ನೋಯ್ಡಾ ಸೆಕ್ಟರ್ 20 ರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಬಿಲ್ ಪಾವತಿಯಾದ ಬಳಿಕ ಮಹಿಳೆಗೆ ಅಲ್ಲಿಂದ ಹೋಗಲು ಬಿಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ; ಡೊನಾಲ್ಡ್ ಟ್ರಂಪ್

ಸೌದಿ ಮಿಲಿಟರಿ ಕಾರ್ಯಾಚರಣೆಗೆ ಹೌತಿ ಬಂಡುಕೋರರ ತಿರುಗೇಟು: ರಿಯಾದ್ ವಿಮಾನ ನಿಲ್ದಾಣ, ಅರಾಮ್ಕೊ ಸಂಸ್ಕರಣಾಗಾರ ಗುರಿಯಾಗಿಸಿಕೊಂಡು ದಾಳಿ!

ರಾಜ್ಯದಲ್ಲಿ ಮಳೆ ಮತ್ತೆ ಚುರುಕು: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಮಳೆ ಸಾಧ್ಯತೆ..!

ಬೆಂಗಳೂರಿನಲ್ಲಿ ವರುಣ ಆರ್ಭಟ: 17.3 ಮಿ.ಮೀ. ಮಳೆಗೆ ಬೆಂಗಳೂರು ತತ್ತರ; ಹಲವೆಡೆ ಜಲಾವೃತ, ಮರಗಳು ಧರೆಗೆ..!

ಸರ್ಕಾರದ ಬೊಕ್ಕಸಕ್ಕೆ ಕಿಕ್ ಕೊಟ್ಟ ಮದ್ಯ ಪ್ರಿಯರು: ಮಾರಾಟ ಶೇ.41ರಷ್ಟು ಹೆಚ್ಚಳ, ಅಬಕಾರಿ ಆದಾಯ ಭಾರೀ ಏರಿಕೆ..!