1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿ' 
ದೇಶ

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 73 ವರ್ಷದ ವೃದ್ಧ ಗಮನ ಬೇರೆಡೆ ಸೆಳೆದು ಬಳಿಕ ಆತನ ಬ್ಯಾಗ್ ನಲ್ಲಿದ್ದ 1 ಕೋಟಿ ರೂ ಮೌಲ್ಯದ ಚಿನ್ನದ ಗಟ್ಟಿಗಳನ್ನು ಈ ಖತರ್ನಾಕ್ ಗ್ಯಾಂಗ್ ಕಳ್ಳತನ ಮಾಡಿದೆ ಎಂದು ಹೇಳಲಾಗಿದೆ.

ಚೆನ್ನೈ: ಚಲಿಸುತ್ತಿದ್ದ ಸಿಟಿ ಬಸ್‌ನಲ್ಲೇ 73 ವರ್ಷದ ಆಭರಣ ವ್ಯಾಪಾರಿ ಉದ್ಯೋಗಿಯ ಗಮನವನ್ನು ಬೇರೆಡೆ ಸೆಳೆದು, ಆತನ ಬ್ಯಾಗ್‌ನಲ್ಲಿದ್ದ ಬರೋಬ್ಬರಿ 1 ಕೋಟಿ ಮೌಲ್ಯದ 714 ಗ್ರಾಂ ಚಿನ್ನದ ಗಟ್ಟಿಯನ್ನು ಕಳವು ಮಾಡಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಆಂಧ್ರಪ್ರದೇಶ ಮೂಲದ ಸುಧಾ ಅಲಿಯಾಸ್ ಸುಕನ್ಯಾ ಎಂದು ಗುರುತಿಸಲಾಗಿದೆ. ಕಳವು ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ಪೊಲೀಸ್ ತಂಡ ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕೃತ್ಯದಲ್ಲಿ ಆಕೆಯೊಂದಿಗೆ ಇನ್ನೂ ಮೂವರು ಮಹಿಳೆಯರು ಭಾಗಿಯಾಗಿರುವ ಶಂಕೆ ಇದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 73 ವರ್ಷದ ವೃದ್ಧ ಗಮನ ಬೇರೆಡೆ ಸೆಳೆದು ಬಳಿಕ ಆತನ ಬ್ಯಾಗ್ ನಲ್ಲಿದ್ದ 1 ಕೋಟಿ ರೂ ಮೌಲ್ಯದ ಚಿನ್ನದ ಗಟ್ಟಿಗಳನ್ನು ಈ ಖತರ್ನಾಕ್ ಗ್ಯಾಂಗ್ ಕಳ್ಳತನ ಮಾಡಿದೆ ಎಂದು ಹೇಳಲಾಗಿದೆ.

ಈ ಕುರಿತ ಸಿಸಿಟಿವಿ ವಿಡಿಯೋ ಪೊಲೀಸರಿಗೆ ಲಭಿಸಿದ್ದು ಇದು ವ್ಯಾಪಕ ವೈರಲ್ ಆಗುತ್ತಿದೆ.

ಆಗಿದ್ದೇನು?

ಇನ್ನು ಸಿದ್ಕೋ ನಗರದ ನಿವಾಸಿ ವರದರಾಜುಲು (73) ಕೊಯಮತ್ತೂರಿನ ಆಭರಣ ಅಂಗಡಿ ಮಾಲೀಕ ಸುಂದರ್ ಅವರ ಬಳಿ ಕೆಲಸ ಮಾಡುತ್ತಿದ್ದರು. ಮಾಲೀಕರ ಸೂಚನೆಯಂತೆ ಅವರು ರೆಡ್ ಹಿಲ್ಸ್‌ನಲ್ಲಿರುವ ರೆಡಿಮೇಡ್ ಜವಳಿ ಅಂಗಡಿಯೊಂದರಿಂದ 714 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಖರೀದಿಸಿದ್ದರು.

ಮರುದಿನ ಚಿನ್ನದ ಗಟ್ಟಿಯನ್ನು ಬಟ್ಟೆಯ ಚೀಲದಲ್ಲಿ ಸುತ್ತಿ, ಅದನ್ನು ತಮ್ಮ ಹ್ಯಾಂಡ್‌ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ಬಳಿಕ ಕೊಯಮತ್ತೂರಿಗೆ ತೆರಳುವ ಸಲುವಾಗಿ ವಿಲ್ಲಿವಾಕ್ಕಂನಿಂದ ಬ್ರಾಡ್‌ವೇಗೆ ತೆರಳುವ 35ನೇ ಮಾರ್ಗದ ಸಿಟಿ ಬಸ್ ಹತ್ತಿದ್ದರು.

ಪ್ರಯಾಣದ ವೇಳೆ ನಾಲ್ವರು ಮಹಿಳೆಯರ ತಂಡ ವೃದ್ಧನ ಸುತ್ತ ಅನುಮಾನಾಸ್ಪದವಾಗಿ ಓಡಾಡಿದೆ. ಈ ವೇಳೆ ಅವರಲ್ಲಿ ಒಬ್ಬಳು ಉದ್ದೇಶಪೂರ್ವಕವಾಗಿ ವರದರಾಜುಲು ಅವರ ಮೇಲೆ ಬಿದ್ದಂತೆ ಮಾಡಿ ಅವರ ಗಮನವನ್ನು ಬೇರೆಡೆ ಸೆಳೆದಿದ್ದಾಳೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಮತ್ತೊಬ್ಬರು ಅವರ ಬ್ಯಾಗ್‌ನಿಂದ ಚಿನ್ನದ ಗಟ್ಟಿಯನ್ನು ಎಗರಿಸಿರುವ ಶಂಕೆ ವ್ಯಕ್ತವಾಗಿದೆ. ಚೆನ್ನೈ ಸೆಂಟ್ರಲ್‌ನಲ್ಲಿ ಬಸ್‌ನಿಂದ ಇಳಿದ ಬಳಿಕ ವರದರಾಜುಲು ತಮ್ಮ ಹ್ಯಾಂಡ್‌ಬ್ಯಾಗ್ ಪರಿಶೀಲಿಸಿದಾಗ ಚಿನ್ನದ ಗಟ್ಟಿ ನಾಪತ್ತೆಯಾಗಿರುವುದು ಗೊತ್ತಾಗಿದೆ. ತಕ್ಷಣ ಪೆರಿಯಮೆಟ್ ಪೊಲೀಸರಿಗೆ ದೂರು ನೀಡಿದ್ದಾರೆ.

ಚಲಿಸುತ್ತಿದ್ದ ಬಸ್ ನಲ್ಲೇ ವೃದ್ಧನ ಮೈ ಬಿಸಿ ಏರಿಸಿದ್ದ ಮಹಿಳೆ

ಇನ್ನು ಪ್ರಯಾಣದ ವೇಳೆ ವರದರಾಜುಲು ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಬೇಕೆಂದೇ ವೃದ್ಧನ ಮೇಲೆ ಬೀಳುವುದು, ಮೈ ಮುಟ್ಟುವುದು ಮಾಡುತ್ತಿದ್ದರು.

ಇದೇ ಸಂದರ್ಭದಲ್ಲಿ ಅಕ್ಕ ಪಕ್ಕದ ಸೀಟ್ ಗಳಲ್ಲಿ ಕುಳಿತಿದ್ದ ಕೆಲ ಮಹಿಳೆಯರು ಅವರನ್ನು ಸುತ್ತುವರೆದು ಅದನ್ನು ಯಾರೂ ನೋಡದಂತೆ ಕಾವಲು ಕಾಯುತ್ತಾರೆ. ಮಹಿಳೆಯರ ಈ ಅನುಮಾನಾಸ್ಪದ ಚಲನವಲನಗಳೇ ಪೊಲೀಸರಿಗೆ ಶಂಕೆ ಮೂಡುವಂತೆ ಮಾಡಿದೆ.

ಸಿಸಿಟಿವಿ ದೃಶ್ಯಗಳಿಂದ ಬಯಲಾದ ಮಹಿಳೆಯರ ಚಲನವಲನ

ವಿಶೇಷ ಪೊಲೀಸ್ ತಂಡ ಬಸ್ ಸಂಚರಿಸಿದ ಮಾರ್ಗದಲ್ಲಿನ ವಿವಿಧ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದೆ. ಈ ವೇಳೆ ಒಟ್ಟಾಗಿ ಓಡಾಡುತ್ತಿದ್ದ ನಾಲ್ವರು ಮಹಿಳೆಯರ ಚಲನವಲನ ಅನುಮಾನಾಸ್ಪದವಾಗಿರುವುದು ಕಂಡುಬಂದಿದೆ.

ಒಟೇರಿ ಮತ್ತು ಟಿ.ಪಿ. ಪಾರ್ಕ್ ಬಸ್ ನಿಲ್ದಾಣಗಳ ಸುತ್ತಮುತ್ತ ಮಹಿಳೆಯರು ಅನುಮಾನಾಸ್ಪದವಾಗಿ ಓಡಾಡಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ತನಿಖೆ ಮುಂದುವರಿಸಿದ ಪೊಲೀಸರು ಆರೋಪಿಗಳು ಆಂಧ್ರಪ್ರದೇಶದವರು ಎಂಬ ಮಾಹಿತಿ ಪಡೆದುಕೊಂಡಿದ್ದಾರೆ.

ಕಳವು ಪ್ರಕರಣ ಸಿಸಿಬಿಗೆ ವರ್ಗಾವಣೆ

ಇನ್ನು ಕಳವಾಗಿರುವ ಚಿನ್ನದ ಮೌಲ್ಯ ಬರೋಬ್ಬರಿ ₹1 ಕೋಟಿ ಆಗಿದ್ದರಿಂದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸೆಂಟ್ರಲ್ ಕ್ರೈಂ ಬ್ರಾಂಚ್‌ (CCB)ಗೆ ವರ್ಗಾಯಿಸಲಾಯಿತು. ಬಳಿಕ ಸುಕನ್ಯಾಳನ್ನು ಆಂಧ್ರಪ್ರದೇಶದಲ್ಲಿ ಪತ್ತೆಹಚ್ಚಿದ ಪೊಲೀಸರು ಆಕೆಯನ್ನು ಚೆನ್ನೈಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

'ನಾನು ಚಿನ್ನ ಕದ್ದಿಲ್ಲ' ಎಂದ ಸುಕನ್ಯಾ

ವಿಚಾರಣೆ ವೇಳೆ ಸುಕನ್ಯಾ ತಾನು ಚಿನ್ನ ಕಳವು ಮಾಡಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ತನ್ನೊಂದಿಗೆ ಬಂದಿದ್ದ ಮೂವರು ಮಹಿಳೆಯರ ಗುರುತನ್ನೂ ಪೊಲೀಸರಿಗೆ ತಿಳಿಸಿ, ಅವರಲ್ಲಿ ಒಬ್ಬಳು ಚಿನ್ನದ ಗಟ್ಟಿಯನ್ನು ಕದ್ದಿದ್ದಾಳೆ ಎಂದು ಹೇಳಿದ್ದಾಳೆ ಎನ್ನಲಾಗಿದೆ.

ಆದರೆ ಪೊಲೀಸರು ಸುಕನ್ಯಾಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಿರುವ ಉಳಿದ ಮೂವರು ಮಹಿಳೆಯರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ

ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಬಸ್‌ಗೆ ಬೆಂಕಿ; ಚಾಲಕ-ಕ್ಲೀನರ್ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಸೇಫ್, Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್