ನವದೆಹಲಿ: ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟಗಳು ಹೆಚ್ಚುತ್ತಿವೆ. ಎಂಟು ವರ್ಷಗಳ ಹಿಂದಿನ ಪ್ರಕರಣದಲ್ಲಿ ದೆಹಲಿಯ ಸಾಕೇತ್ ನ್ಯಾಯಾಲಯವು ಧ್ರುವ್ ರಾಠಿಗೆ ಹೊಸ ಸಮನ್ಸ್ ಜಾರಿ ಮಾಡಲು ಆದೇಶಿಸಿದೆ. ವಿಷಯದ ಗಂಭೀರತೆಯನ್ನು ಪರಿಗಣಿಸಿ, ಕೋರ್ಟ್ ದೂರುದಾರರಿಗೆ ಅಧಿಕಾರಿಯೊಂದಿಗೆ ಹೋಗಲು ಅನುಮತಿ ನೀಡಿದ್ದು ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 17ಕ್ಕೆ ಮುಂದೂಡಿದೆ. ವಿಕಾಸ್ ಪಾಂಡೆ ಅಲಿಯಾಸ್ ವಿಕಾಸ್ ಸಾಂಕೃತ್ಯಾಯನ್ ಅವರ ಹಿಂದಿನ ಅರ್ಜಿಯ ಮೇರೆಗೆ ಈ ಸಮನ್ಸ್ ಜಾರಿಯಾಗಿದೆ. ಧ್ರುವ್ ರಾಠಿಗೆ ಗುರುಗ್ರಾಮ್ ವಿಳಾಸದಲ್ಲಿ ಸಮನ್ಸ್ ಸರಿಯಾಗಿ ತಲುಪಿಸಲು ಸಾಧ್ಯವಾಗುವಂತೆ ನ್ಯಾಯಾಲಯವು ದೂರುದಾರರಿಗೆ ಅಧಿಕಾರಿಯೊಂದಿಗೆ ಹೋಗಲು ಅನುಮತಿ ನೀಡಿದೆ.
ಧ್ರವ್ ರಾಠಿ ಕಾನೂನು ತೊಂದರೆಯಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. ಆತನ ವಿರುದ್ಧ ಹಲವಾರು ಇತರ ಪ್ರಕರಣಗಳು ಬಾಕಿ ಇವೆ. ಬಿಜೆಪಿ ನಾಯಕ ಸುರೇಶ್ ಕರಮ್ಶಿ ನಖುವಾ ಎಂಬುವರು ಧ್ರುವ ರಾಠಿ ವಿರುದ್ಧ ಸಾಕೇತ್ ನ್ಯಾಯಾಲಯದಲ್ಲಿ 20 ಲಕ್ಷ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 2024ರ ಜುಲೈನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೊದಲ್ಲಿ ಧ್ರುವ ರಾಠಿ ತಮ್ಮನ್ನು "ಹಿಂಸಾತ್ಮಕ ಮತ್ತು ನಿಂದನೀಯ ಟ್ರೋಲ್" ಎಂದು ಕರೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಜುಲೈ 2024ರಲ್ಲಿ ಜಿಲ್ಲಾ ನ್ಯಾಯಾಧೀಶ ಗುಂಜನ್ ಗುಪ್ತಾ ಅವರ ನ್ಯಾಯಾಲಯವು ಈ ವಿಷಯದಲ್ಲಿ ರಾಠಿಗೆ ಸಮನ್ಸ್ ಮತ್ತು ನೋಟಿಸ್ಗಳನ್ನು ನೀಡಿತ್ತು.
ಸನಾತನ ಧರ್ಮ ಮತ್ತು ದೇವತೆಗಳ ಮೇಲಿನ ಕಾಮೆಂಟ್ಗಳ ಸುತ್ತ ವಿವಾದವಿದೆ. ಅಮಿತ್ ಸಚ್ದೇವ್ ಎಂಬ ದೂರುದಾರರು ಧ್ರುವ ರಾಠಿ ವೀಡಿಯೊಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ. ವೀಡಿಯೊದಲ್ಲಿ ಹಿಂದೂ ದೇವತೆಗಳು ಮತ್ತು ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳಿವೆ ಎಂದು ಅವರು ಆರೋಪಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 196 ಮತ್ತು 299ರ ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಅವರು ಕೋರಿದ್ದಾರೆ. ಇದಲ್ಲದೆ 2026ರ ಅಕ್ಟೋಬರ್ 10ರಂದು ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸುವ ಮೊದಲು, ಧ್ರುವ ರಥೀ ಅವರನ್ನು ದೆಹಲಿ-ಗುರುಗ್ರಾಮ್ ಪೊಲೀಸರು ಗುರುಗ್ರಾಮ್ನ ಸೆಕ್ಟರ್ 56 ರಲ್ಲಿರುವ ಅವರ ನಿವಾಸದಲ್ಲಿ ಬಂಧಿಸಿ, ಸುಮಾರು 22 ಗಂಟೆಗಳ ನಂತರ ಬಿಡುಗಡೆ ಮಾಡಿದರು.