ಅಭಿಜೀತ್ ದೀಪ್ಕೆ, ನೇಹಾ ಬೋರಾ 
ದೇಶ

ಅಭಿಜೀತ್ ದೀಪ್ಕೆ, ನೇಹಾ ಬೋರಾ ವಶಕ್ಕೆ ಪಡೆದ ದೆಹಲಿ ಪೊಲೀಸರು; ಅಲ್ಲಲ್ಲಿ ದಿಢೀರ್ ಪ್ರತಿಭಟನೆ ಮುಂದುವರಿಕೆ!

ಇನ್ನು ಮಂಡಿ ಹೌಸ್‌ ಬಳಿ ತಿರಂಗಾ ಮಾರ್ಚ್ ನಡೆಸುತ್ತಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್​​(AISA) ಅಧ್ಯಕ್ಷೆ ನೇಹಾ ಬೋರಾ ಮತ್ತು ಇತರರನ್ನು ಸಹ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನವದೆಹಲಿ: ಎಚ್ಚರಿಕಾ ನೋಟಿಸ್​ ನಡುವೆಯೂ 'ಲೆಹ್ರಾ ದೋ ತಿರಂಗಾ' ಪ್ರತಿಭಟನೆಯಲ್ಲಿ ಭಾಗವಹಿಸಲು ಕನ್ನಾಟ್ ಪ್ಲೇಸ್‌ಗೆ ತೆರಳುತ್ತಿದ್ದ 'ಕಾಕ್ರೋಚ್ ಜನತಾ ಪಾರ್ಟಿ'(CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಶುಕ್ರವಾರ ದೆಹಲಿಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಸೆಂಟ್ರಲ್ ಪಾರ್ಕ್‌ನಲ್ಲಿ 'ಲೆಹರಾ ದೋ ತಿರಂಗಾ'(ತ್ರಿವರ್ಣ ಧ್ವಜ ಹಾರಿಸುವ) ರ್ಯಾಲಿ ನಡೆಸಲು ತೆರಳುತ್ತಿದ್ದ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಂದು ವಾರದ ಅವಧಿಯಲ್ಲಿ ದೀಪ್ಕೆ ಅವರನ್ನು ವಶಕ್ಕೆ ಪಡೆಯುತ್ತಿರುವುದು ಇದು ಎರಡನೇ ಬಾರಿಯಾಗಿದೆ.

ಇನ್ನು ಮಂಡಿ ಹೌಸ್‌ ಬಳಿ ತಿರಂಗಾ ಮಾರ್ಚ್ ನಡೆಸುತ್ತಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್​​(AISA) ಅಧ್ಯಕ್ಷೆ ನೇಹಾ ಬೋರಾ ಮತ್ತು ಇತರರನ್ನು ಸಹ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು, ಪೊಲೀಸರ ಕ್ರಮ ಖಂಡಿಸಿ ಸಿಜೆಪಿ ಪ್ರತಿಭಟನೆ ಮುಂದುವರೆಸುತ್ತಿದೆ.

ದೀಪ್ಕೆ ಅವರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ, 'ನಾವು ನಿಮ್ಮನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಕನ್ನಾಟ್ ಪ್ಲೇಸ್‌ನಲ್ಲಿ ಸೆಕ್ಷನ್ 163 ಜಾರಿಯಲ್ಲಿರುವುದರಿಂದ ವಶಕ್ಕೆ ಪಡೆಯಲಾಗುತ್ತಿದೆ' ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇಂದು ಸಂಜೆ ಐದು ಗಂಟೆಗೆ ನಡೆಯಬೇಕಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಮಧ್ಯ ದೆಹಲಿಯಾದ್ಯಂತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಇದಕ್ಕೂ ಮುನ್ನ, ಕಾಕ್ರೋಚ್​ ಜನತಾ ಪಕ್ಷ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಬೆನ್ನಲ್ಲೇ, ದೆಹಲಿ ಪೊಲೀಸರು ಅಭಿಜೀತ್​ ದೀಪ್ಕೆ ಅವರ ಮನೆಗೆ ತೆರಳಿ, ಪ್ರತಿಭಟನೆಯಲ್ಲಿ ಭಾಗವಹಿಸದಂತೆ ನೋಟಿಸ್​ ಜಾರಿ ಮಾಡಿದ್ದರು.

ದೀಪ್ಕೆ ಅವರು ತಂಗಿದ್ದ ಎನ್‌ಸಿಪಿ-ಎಸ್‌ಸಿಪಿ (NCP-SCP) ವಕ್ತಾರ ಅನೀಶ್ ಗವಾಂಡೆ ಅವರ ನಿವಾಸಕ್ಕೆ ಆಗಮಿಸಿದ 20ಕ್ಕೂ ಹೆಚ್ಚು ಪೊಲೀಸರು, ಕನ್ನಾಟ್ ಪ್ಲೇಸ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಅವರಿಗೆ ನೋಟಿಸ್ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆ ಶಿವಕುಮಾರ್ ಆನೆ ಇದ್ದಂತೆ, ಬಾಕಿಯವರು ನಾಯಿ...: HDKಗೆ ಬಾಲಕೃಷ್ಣ ತಿರುಗೇಟು

ವಿಪಕ್ಷಗಳಿಂದ 'ಆಡಳಿತ ಬದಲಾವಣೆ'ಯ ಕಾರ್ಯಸೂಚಿ ಅನುಸರಣೆ- ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಗಂಭೀರ ಆರೋಪ

ಕಾನ್ಪುರದ ದಾಂಡಿಯಾ ಕಾರ್ಯಕ್ರಮದ ವೇಳೆ ಹೈಡ್ರಾಮಾ: ‘ಕಚ್ಚಾ ಬಾದಾಮ್‌’ ಹಾಡಿಗೆ ನಟಿ ಅಂಜಲಿ ಅರೋರಾ ಗರಂ? ಆಗಿದ್ದೇನು?

ಸರ್ಕಾರಿ ನೌಕರಿ ಅವಧಿ 10-15 ವರ್ಷಕ್ಕೆ ಲಿಮಿಟ್‌ ಮಾಡಿದ್ರೆ ಹೇಗೆ?: ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ ಕಲ್ಪಿಸಲು HDK ಹೊಸ ಚಿಂತನೆ!

'ಯಾರಿಗೆ ಯಾವ ಸಿನಿಮಾ ಮಾಡಬೇಕು ಅಂತ ನಮಗೆ ಗೊತ್ತು..': ಕಾಂಡೋಮ್ ಆ್ಯಡ್ ಎಂದವರಿಗೆ ನಟ ಯಶ್‌ ತಿರುಗೇಟು!