ಸಾಂದರ್ಭಿಕ ಚಿತ್ರ 
ದೇಶ

ಗಂಡನಿಗೆ ವರವಾದ ಅಪರೂಪದ 'ಖುಲಾ' ತೀರ್ಪು: ಮಾಜಿ ಪತಿಗೆ ಚಿನ್ನಾಭರಣ ಹಿಂತಿರುಗಿಸುವಂತೆ ಕೇರಳದ ಮಹಿಳೆಗೆ ಆದೇಶ!

'ಖುಲಾ' ಎನ್ನುವುದು ಮಹಿಳೆಯು ಪ್ರಾರಂಭಿಸುವ ವಿಚ್ಛೇದನ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಮಹಿಳೆಯು 'ಮಹರ್' ಅನ್ನು ಹಿಂತಿರುಗಿಸಬೇಕಾಗುತ್ತದೆ ಅಥವಾ ನಿಗದಿಪಡಿಸಿದ ಇತರ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.

ಪಾಲಕ್ಕಾಡ್ : ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಹಿಳೆಯೊಬ್ಬರು ವಿಚ್ಛೇದನ ಪಡೆಯುವ ವಿಧಾನವಾದ 'ಖುಲಾ' ಕುರಿತಾದ ಒಂದು ಅಪರೂಪದ ತೀರ್ಪಿನಲ್ಲಿ, ಪಾಲಕ್ಕಾಡ್‌ನ ಕೌಟುಂಬಿಕ ನ್ಯಾಯಾಲಯವು ಮಹಿಳೆಯೊಬ್ಬರಿಗೆ 11 ಸವರನ್ (ಪವನ್) ಚಿನ್ನದ ಆಭರಣಗಳನ್ನು ತನ್ನ ಮಾಜಿ ಪತಿಗೆ ಹಿಂತಿರುಗಿಸುವಂತೆ ಆದೇಶಿಸಿದೆ.

ಇದರಲ್ಲಿ 'ಮಹರ್' ಮತ್ತು 2008ರಲ್ಲಿ ಅವರ ವಿವಾಹದ ಸಮಯದಲ್ಲಿ ಆಕೆಗೆ ನೀಡಲಾದ ಚಿನ್ನದ ಉಡುಗೊರೆಗಳು ಸೇರಿವೆ. ತಿರುವೇಗಾಪ್ಪುರ ಮೂಲದ ಮಹಿಳೆಗೆ, ವಿವಾಹದ ಸಮಯದಲ್ಲಿ ಉಡುಗೊರೆಯಾಗಿ ಪಡೆದ ಐದು ಸವರನ್ ಚಿನ್ನ ಮತ್ತು ಪತಿ ನೀಡಿದ ಆರು ಸವರನ್ ಚಿನ್ನದ ಆಭರಣಗಳನ್ನು (ಮಹರ್) ತೀರ್ಪು ಬಂದ 30 ದಿನಗಳ ಒಳಗೆ ಹಿಂತಿರುಗಿಸಬೇಕೆಂದು ಒಟ್ಟಪಾಲಂ ಕೌಟುಂಬಿಕ ನ್ಯಾಯಾಲಯ ನಿರ್ದೇಶಿಸಿದೆ.

ಒಂದು ವೇಳೆ ಆಕೆ ಇದನ್ನು ಪಾಲಿಸಲು ವಿಫಲವಾದರೆ, ಆಕೆಯ ಆಸ್ತಿಯಿಂದ ಈ ಮೌಲ್ಯವನ್ನು ವಸೂಲಿ ಮಾಡಬಹುದು ಎಂದೂ ನ್ಯಾಯಾಲಯ ಆದೇಶಿಸಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, 'ತಲಾಖ್' (talaq) ಎನ್ನುವುದು ಪುರುಷನು ಪ್ರಾರಂಭಿಸುವ ವಿಚ್ಛೇದನ ಪ್ರಕ್ರಿಯೆಯಾಗಿದೆ. ಸಾಕ್ಷಿಗಳ ಸಮ್ಮುಖದಲ್ಲಿ ಪತ್ನಿಗೆ 'ತಲಾಖ್' ಎಂದು ಹೇಳುವ ಮೂಲಕ ಇದು ಜಾರಿಗೆ ಬರುತ್ತದೆ.

ಅದೇ ರೀತಿ, 'ಖುಲಾ' ಎನ್ನುವುದು ಮಹಿಳೆಯು ಪ್ರಾರಂಭಿಸುವ ವಿಚ್ಛೇದನ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಮಹಿಳೆಯು 'ಮಹರ್' ಅನ್ನು ಹಿಂತಿರುಗಿಸಬೇಕಾಗುತ್ತದೆ ಅಥವಾ ನಿಗದಿಪಡಿಸಿದ ಇತರ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.

"ಸಾಮಾನ್ಯವಾಗಿ ಮಹಿಳೆಯರು ತಮ್ಮ ಪತಿಯಿಂದ ವಿಚ್ಛೇದನ ಪಡೆಯಲು 'ಖುಲಾ' ಪದ್ಧತಿಯನ್ನು ಬಳಸುತ್ತಾರೆ. ಆದರೆ, ಇಲ್ಲಿ ಪುರುಷನೊಬ್ಬ ವಿವಾಹದ ಸಮಯದಲ್ಲಿ ನೀಡಿದ 'ಮಹರ್' ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಮರಳಿ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯವು ಆತನ ಪರವಾಗಿ ತೀರ್ಪು ನೀಡಿದೆ. ಇದು ಒಂದು ಅಪರೂಪದ ಪ್ರಕರಣವಾಗಿದೆ" ಎಂದು ಅರ್ಜಿದಾರರ ಪರ ವಕೀಲ ಶಾಹುಲ್ ಹಮೀದ್ ಪಿ.ಟಿ. ತಿಳಿಸಿದರು. ನ್ಯಾಯಾಲಯವು ಆತನ ಪರವಾಗಿ ತೀರ್ಪು ನೀಡಿದೆ" ಎಂದು ಶಾಹುಲ್ ಹಮೀದ್ ಹೇಳಿದರು.

2019ರಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾದ ನಂತರ, ಮಲಪ್ಪುರಂನ ಪೆರಿಂತಲ್ಮನ್ನಾ ಮೂಲದ ತನ್ನ ಪತಿಯೊಂದಿಗಿನ ವಿವಾಹವನ್ನು ಕೊನೆಗೊಳಿಸಲು, ಆ ಮಹಿಳೆಯು 'ಖುಲಾ' ಮೂಲಕ ವಿಚ್ಛೇದನ ಪಡೆಯುವ ತನ್ನ ಹಕ್ಕನ್ನು ಚಲಾಯಿಸಿ ನೋಟಿಸ್ ನೀಡಿದ್ದರು. ಈ ಮೂಲಕ 2021ರಲ್ಲಿ ಈ ಪ್ರಕರಣವು ಪ್ರಾರಂಭವಾಯಿತು.

ಪತಿಯು 'ಖುಲಾ' ಮೂಲಕ ನೀಡಲಾದ ವಿಚ್ಛೇದನವನ್ನು ಒಪ್ಪಿಕೊಂಡರಾದರೂ, ಮಹಿಳೆಯು 'ಮಹರ್' ಹಿಂತಿರುಗಿಸಲಿಲ್ಲ. ತರುವಾಯ, ನಂತರ ಒಟ್ಟಪಾಲಂ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದರು. 'ಖುಲಾ' ಮೂಲಕ ವಿವಾಹವು ರದ್ದಾದ ಹಿನ್ನೆಲೆಯಲ್ಲಿ, 'ಮಹರ್' ಆಗಿ ನೀಡಲಾದ ಚಿನ್ನದ ಆಭರಣಗಳು ಮತ್ತು ವಿವಾಹದ ಉಡುಗೊರೆಗಳನ್ನು ಹಿಂತಿರುಗಿಸಬೇಕೆಂದು ಕೋರಿ ಅವರು ತಮ್ಮ ಮಾಜಿ ಪತ್ನಿ ಮತ್ತು ಆಕೆಯ ತಾಯಿಯ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲರು, ಈ ತೀರ್ಪನ್ನು ಪತಿಗಳ ಪಾಲಿಗೆ ಅತ್ಯಂತ ಅಪರೂಪದ ತೀರ್ಪು ಎಂದು ಬಣ್ಣಿಸಿದರು.

"ಇತ್ತೀಚಿನ ದಿನಗಳಲ್ಲಿ 'ಖುಲಾ' (ಮಹಿಳೆಯರು ವಿಚ್ಛೇದನ ಕೋರುವ ಪ್ರಕ್ರಿಯೆ) ಸಾಮಾನ್ಯವಾಗಿ ಆಚರಣೆಯಲ್ಲಿದ್ದರೂ, ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ (Muslim Personal Law) ಇದಕ್ಕೆ ಸಂಬಂಧಿಸಿದಂತೆ ವ್ಯಾಖ್ಯಾನಿಸಲಾದ ಹಕ್ಕುಗಳ ಬಗ್ಗೆ ಅನೇಕ ಮುಸ್ಲಿಂ ಪುರುಷರಿಗೆ ಅಷ್ಟಾಗಿ ಅರಿವಿಲ್ಲ," ಎಂದು ಶಾಹುಲ್ ಹಮೀದ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ವಸ್ತುಗಳ ಸುಂಕಗಳಿಗೆ ಡೊನಾಲ್ಡ್ ಟ್ರಂಪ್ ವಿನಾಯಿತಿ; ತೈಲ ಆಮದಿಗೆ ಭಾರತ ನಿಟ್ಟುಸಿರು

Lehra Do Tiranga ಮೆರವಣಿಗೆ: CEC ರಾಜೀನಾಮೆ ಆಗ್ರಹಿಸಿ ದೆಹಲಿಯಲ್ಲಿ ಹೈಡ್ರಾಮಾ; ಪ್ರತಿಭಟನೆಗೂ ಮುನ್ನ ವಶಕ್ಕೆ ಪಡೆದಿದ್ದ ನೆಹಾ ಬೋರಾ ಬಿಡುಗಡೆ, ಅಭಿಜೀತ್ ದೀಪ್ಕೆಗಿಲ್ಲ ರಿಲೀಫ್..!

ಬಾಲಿವುಡ್ ನಟ ಅಜಯ್ ದೇವಗನ್`ಗೆ BMC ಶಾಕ್: ಜುಹು ಬಂಗಲೆ ಅಕ್ರಮ ಒತ್ತುವರಿ ತೆರವು!

BJP ಹಿರಿಯ ನಾಯಕ ಎಲ್‌ಕೆ ಅಡ್ವಾಣಿಗೆ ಅನಾರೋಗ್ಯ; ದೆಹಲಿ ಅಪೋಲೋ ಆಸ್ಪತ್ರೆಗೆ ದಾಖಲು..!

Sting operation ವಿವಾದ: ‘ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ’ ಎಂದ ಡಿಕೆಶಿ, ಗೃಹ ಸಚಿವರ ಜೊತೆ ಮಹತ್ವದ ಚರ್ಚೆ, ಪ್ರಿಯಾಂಕ್ ಖರ್ಗೆ ಹೆಗಲಿಗೆ ತನಿಖೆ ಜವಾಬ್ದಾರಿ..!