ಚಿರಾಗ್ ಪಾಸ್ವಾನ್, ಇಮ್ರಾನ್ ಖಾನ್ 
ದೇಶ

ವಿದೇಶಿ ಶಕ್ತಿಗಳಿಂದ ಅರಾಜಕತೆ: ಭಾರತೀಯ ಪ್ರಜೆಯಲ್ಲದ ಇಮ್ರಾನ್ ಖಾನ್ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದು ತಪ್ಪು: ಚಿರಾಗ್ ಪಾಸ್ವಾನ್

ಬಾಲಿವುಡ್ ನಟ ಇಮ್ರಾನ್ ಖಾನ್ 'ಭಾರತೀಯ ಪ್ರಜೆಯಲ್ಲ'. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧದ ಪ್ರತಿಭಟನೆಗಳಿಂದ ದೂರವಿರಬೇಕಿತ್ತು ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಪಾಟ್ನಾ: ಬಾಲಿವುಡ್ ನಟ ಇಮ್ರಾನ್ ಖಾನ್ 'ಭಾರತೀಯ ಪ್ರಜೆಯಲ್ಲ'. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧದ ಪ್ರತಿಭಟನೆಗಳಿಂದ ದೂರವಿರಬೇಕಿತ್ತು ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಪಾಸ್ವಾನ್ ಈ ಪ್ರತಿಭಟನೆಗಳನ್ನು 'ವಿದೇಶಿ ಶಕ್ತಿಗಳ ಬೆಂಬಲದೊಂದಿಗೆ ಅರಾಜಕತೆಯನ್ನು ಹರಡುವ ಪ್ರಯತ್ನ' ಎಂದು ಬಣ್ಣಿಸಿದ್ದಾರೆ.

ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಸ್ವಾನ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಟೀಕಿಸಿದರು. ರಾಹುಲ್ ಗೋವಾದಲ್ಲಿ ತಮ್ಮ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ದುರ್ಗಾ ಪೂಜೆ ಮಂಟಪದಲ್ಲಿ ಕಾಲ್ತುಳಿತದಲ್ಲಿ 19 ಜನರು ಸಾವನ್ನಪ್ಪಿದ ನಂತರ ಅವರು ಕೋಲ್ಕತ್ತಾದಲ್ಲಿ ತಮ್ಮ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸುವ ಮೂಲಕ 'ಸೂಕ್ಷ್ಮತೆ' ತೋರಿಸಿದ್ದಾರೆ.

ಹಾಜಿಪುರ ಸಂಸದ ಪಾಸ್ವಾನ್ ಗೆ, ಇಮ್ರಾನ್ ಖಾನ್‌ಗೆ ನೀಡಲಾದ "ಭಾರತ ಬಿಟ್ಟು ತೊಲಗಿ" ನೋಟಿಸ್ ಬಗ್ಗೆ ಕೇಳಲಾಯಿತು. OCI ಕಾರ್ಡ್ ಹೊಂದಿರುವ ಖಾನ್ ವಿದೇಶಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇಮ್ರಾನ್ ಅವರ ನಟನೆ ಇಷ್ಟ, ಆದರೆ ಭಾರತದಲ್ಲಿ ಇಷ್ಟು ದಿನ ಸಿನಿಮಾಗಳನ್ನು ಮಾಡಿದ್ದರಿಂದ ಅವರು ಭಾರತೀಯ ಪ್ರಜೆಯಾಗುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ದೇಶದ ನಾಗರಿಕರು ಇಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸಿದರೆ, ನಾನು ಅದನ್ನು ಗೌರವಿಸುತ್ತೇನೆ. ಆದರೆ ವಿದೇಶಿ ನಾಗರಿಕರು ಹಾಗೆ ಮಾಡಿದರೆ, ಅದು ಕಳವಳಕಾರಿ ವಿಷಯ ಎಂದು ಚಿರಾಗ್ ಪಾಸ್ವಾನ್ ಹೇಳಿದರು.

ಇಮ್ರಾನ್ ನಟ ಅಮೀರ್ ಖಾನ್ ನ ಸೋದರಳಿಯ. ಆತ ಅಮೆರಿಕದಲ್ಲಿ ಜನಿಸಿದ್ದು ಅಮೆರಿಕನ್ ಪೌರತ್ವವನ್ನು ಹೊಂದಿದ್ದಾರೆ. ಆದಾಗ್ಯೂ, ಅವರು ಭಾರತದಲ್ಲಿ ಬೆಳೆದಿದ್ದು ಒಂದು ದಶಕಕ್ಕೂ ಹೆಚ್ಚು ಕಾಲ ಚಲನಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಮುಂಬೈನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವು ದಿನಗಳ ನಂತರ ನಟನಿಗೆ "ಭಾರತ ತೊರೆಯಲು" ನೋಟಿಸ್ ನೀಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Kolkata Durga Puja stampede ಕೇಸ್: ಪೂಜಾ ಸಮಿತಿ ಕಾರ್ಯದರ್ಶಿ ಸೇರಿ 7 ಮಂದಿ ಬಂಧನ; SIT ತನಿಖೆಗೆ ಆದೇಶ, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ..!

ಬೆಂಗಳೂರು: ನೈಸ್ ರಸ್ತೆಯಲ್ಲಿ ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್; 5 ಕಿಮೀ ಟ್ರಾಫಿಕ್‌ ಜಾಮ್‌!

ಪ್ರಭಾಸ್'ರ ಸ್ಪಿರಿಟ್ ಹಾಗೂ ರಾಮಾಯಣ 2 ಮುಖಾಮುಖಿ: ನಿರ್ದೇಶಕ ವಂಗಾ ಈ ದಿನವನ್ನೇ ಆಯ್ಕೆ ಮಾಡಿದ್ದೇಕೆ?

ಬೆಂಗಳೂರು: ಬಾಯ್‌ಫ್ರೆಂಡ್‌ಗೆ ಕಳಿಸಿದ್ದ ಖಾಸಗಿ, ನಗ್ನ ಫೋಟೋ, ವಿಡಿಯೋ ಪೋರ್ನ್ ವೆಬ್ ಸೈಟ್‌ಗೆ ಅಪ್‌ಲೋಡ್; ಬೆಚ್ಚಿಬಿದ್ದ ಟೆಕ್ಕಿ!

ಮಂಗಳೂರು: ಚರ್ಚ್‌ನಲ್ಲಿ ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ; ಪೋಕ್ಸೊ ಪ್ರಕರಣ ಬೆನ್ನಲ್ಲೇ ಪಾದ್ರಿ ಬಂಧನ