ನಟಿ ಪೂಜಾ ಬೇಡಿ  
ದೇಶ

'ಬಿಜೆಪಿ ಅಂದ್ರೆ ಭಾರತ ಅಲ್ಲ, BJP ವಿರುದ್ಧ ಮಾತನಾಡುವುದೂ ದೇಶದ್ರೋಹವಲ್ಲ': CJP ಪ್ರತಿಭಟನೆ ಬೆಂಬಲಿಸಿ ನಟಿ ಪೂಜಾ ಬೇಡಿ Video

ಸಿಜೆಪಿ ಪ್ರತಿಭಟನೆ ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿರುವ ಪೂಜಾ ಬೇಡಿ, ಯುವ ಪ್ರತಿಭಟನಾಕಾರರ ಬಂಧನಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುಂಬೈ: ವಿವಾದಾತ್ಮಕ ಎಸ್ಐಆರ್ ವಿರೋಧಿಸಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಿಗೆ ನಟಿ ಪೂಜಾ ಬೇಡಿ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಪ್ರತಿಭಟನಾಕಾರರ ಮೇಲಿನ ದೌರ್ಜನ್ಯವನ್ನು ಪ್ರಶ್ನಿಸುವಂತೆ ಹಾಗೂ ನಾಗರಿಕರು "ಪ್ರಜಾಪ್ರಭುತ್ವದ ದೀವಟಿಗೆ ಹಿಡಿಯಬೇಕು" ಎಂದು ಕರೆ ನೀಡಿದ್ದಾರೆ.

ಸಿಜೆಪಿ ಪ್ರತಿಭಟನೆ ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿರುವ ಪೂಜಾ ಬೇಡಿ, ಯುವ ಪ್ರತಿಭಟನಾಕಾರರ ಬಂಧನಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಬಿಜೆಪಿ ವಿರುದ್ಧ ಧ್ವನಿ ಎತ್ತುವುದು ದೇಶದ್ರೋಹದ ಕೆಲಸವಲ್ಲ, ಏಕೆಂದರೆ ಬಿಜೆಪಿ ಎಂದರೆ ಭಾರತವಲ್ಲ. ಹಾಗೆಯೇ ಭಾರತವೆಂದರೆ ಕೇವಲ ಬಿಜೆಪಿಯಲ್ಲ" ಎಂದು ಪೂಜಾ ಬೇಡಿ ವಿಡಿಯೋದಲ್ಲಿ ಹೇಳಿದ್ದಾರೆ.

"ಬಿಜೆಪಿ ಅಸ್ತಿತ್ವಕ್ಕೆ ಬರುವ ಮೊದಲೇ ಭಾರತ ಇತ್ತು ಮತ್ತು ಬಿಜೆಪಿ ಇಲ್ಲದಿದ್ದರೂ ಭಾರತ ಮುಂದುವರಿಯುತ್ತದೆ. ನಮ್ಮ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ನಾವು ಆಯ್ಕೆ ಮಾಡಿದ ಸರ್ಕಾರವನ್ನೇ ನಾವು ಪ್ರಶ್ನಿಸಬೇಕಿದೆ. ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಹಕ್ಕುಗಳು ಎಲ್ಲಿವೆ? ಹಾಗಾದರೆ ನಿಜವಾದ ದೇಶ ವಿರೋಧಿ ಯಾರು? ಶಾಂತಿಯುತ ಪ್ರತಿಭಟನೆ ನಡೆಸುವುದು ನಮ್ಮೆಲ್ಲರ ಪ್ರಜಾಸತ್ತಾತ್ಮಕ ಹಕ್ಕು; ಇಂತಹ ಪ್ರತಿಭಟನೆ ನಡೆಸುತ್ತಿರುವ ಯುವಕರನ್ನು ಅಥವಾ ಪ್ರತಿಭಟನಾಕಾರರನ್ನು ಬಿಜೆಪಿ ಬಂಧಿಸುತ್ತಿದ್ದರೆ, ನಿಜವಾದ ದೇಶ ದ್ರೋಹಿ ಯಾರು?" ಎಂದು ಬೇಡಿ ಪ್ರಶ್ನಿಸಿದ್ದಾರೆ.

ತಮ್ಮ ಹಕ್ಕುಗಳ ಬಗ್ಗೆ ಪ್ರಶ್ನಿಸುವವರು ದೇಶ ದ್ರೋಹಿಗಳೇ? ಜನ ಸಾಮಾನ್ಯರ ವಿರುದ್ಧ ದಬ್ಬಾಳಿಕೆ ನಡೆಸಿ, ಅವರ ಧ್ವನಿಯನ್ನು ಸರ್ಕಾರವೇ ಹತ್ತಿಕುತ್ತಿದೆ. ನಾವು ಮತ ಚಲಾಯಿಸಿದ ಪ್ರಜಾಪ್ರಭುತ್ವ ದೇಶ ಇದೇನಾ? ಎಂದು ಹಿರಿಯ ನಟಿ ಪ್ರಶ್ನಿಸಿದ್ದಾರೆ.

ಜಂತರ್ ಮಂತರ್ ಗೆ ಅತಿಕ್ರಮ ಪ್ರವೇಶ ಮಾಡಿದ್ದಕ್ಕಾಗಿ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಗಾ ಅವರನ್ನು ಐದು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಕೊಲೆ, ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಒಂದೇ ದಿನದಲ್ಲಿ ಜಾಮೀನು ಸಿಗಲು ಹೇಗೆ ಸಾಧ್ಯ ಎಂದು ಪೂಜಾ ಬೇಡಿ ಪ್ರಶ್ನಿಸಿದ್ದಾರೆ.

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ನಟ ಸೇರಿ ಮೂವರಿಗೆ ಗಾಯ; ಬೆಚ್ಚಿಬಿದ್ದ ಜನತೆ, Video!

ನಟ ಸುದೀಪ್‌-ಪ್ರಿಯಾ ದಾಂಪತ್ಯಕ್ಕೆ ಬೆಳ್ಳಿ ಹಬ್ಬದ ಸಂಭ್ರಮ; ಆಪ್ತರ ಸಮ್ಮುಖದಲ್ಲಿ ಅದ್ದೂರಿ ಸೆಲೆಬ್ರೇಷನ್! Video ನೋಡಿ

ರಾವಣನ ಹತ್ತು ತಲೆಗಳಲ್ಲಿ ರಾಹುಲ್ ಗಾಂಧಿ, ಅಖಿಲೇಶ್, ಎಲಾನ್ ಮಸ್ಕ್; ವಿವಾದಾತ್ಮಕ ಪೋಸ್ಟರ್‌ ವೈರಲ್

ಮೈಸೂರು: ಅರ್ಕೇಶ್ವರ ದೇವಸ್ಥಾನದ ಮೇಲೆ ಶಿಲುಬೆ, ಮಸೀದಿ ಚಿತ್ರ ವಿವಾದ; ಇದು ಕಲಬೆರಕೆ ಹಿಂದೂಗಳ ಕೆಲಸ, ಪ್ರತಾಪ್ ಸಿಂಹ ಆಕ್ರೋಶ, Video!

ಮತದಾರರ ಪಟ್ಟಿಯಲ್ಲಿ ಕೈ ಬಿಟ್ಟ ಹೆಸರು ಮರುಸೇರ್ಪಡೆಗೊಳಿಸಲು 'ನಮೂನೆ 6' ಬಳಸಬಹುದು: ಹೈಕೋರ್ಟ್‌ಗೆ ಚುನಾವಣಾ ಆಯೋಗದ ಮಾಹಿತಿ