ಅಯಾನ್ ಭಟ್ನಾಗರ್ - ಅಭಿಜೀತ್ ದೀಪ್ಕೆ 
ದೇಶ

ಕಾಕ್ರೋಚ್‌(CJP)ಗಳಿಗೆ ಠಕ್ಕರ್ ಕೊಡಲು 'ಲಾಲ್ ಹಿಟ್ ಜನತಾ ಪಾರ್ಟಿ' ಘೋಷಣೆ! ಏನಿದು ಸಂಘಟನೆ?

“ನಾವೇ ಇಷ್ಟು ಜನ ಸೇರಿದ್ದೇವೆ, ಇನ್ನು ಪ್ರಧಾನಿ ನರೇಂದ್ರ ಮೋದಿಯವರೇ ಕರೆ ಕೊಟ್ಟರೆ ಎಷ್ಟು ಜನ ಜಮಾಯಿಸಬಹುದು ಯೋಚಿಸಿ” ಎಂದ ಅವರು, ಜನರು ಕೇವಲ ಸಾಮಾಜಿಕ ಮಾಧ್ಯಮಗಳಿಗೆ ಸೀಮಿತವಾಗದೆ ಬೀದಿಗಿಳಿಯಬೇಕು ಎಂದು ಕರೆ ನೀಡಿದರು.

ನವದೆಹಲಿ: ಎಸ್ಐಆರ್ ವಿರೋಧಿಸಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ'(Cockroach Janta Party)ಗೆ ಠಕ್ಕರ್ ಕೊಡಲು 'ಲಾಲ್ ಹಿಟ್ ಜನತಾ ಪಾರ್ಟಿ' ಎಂಬ ಸಂಘಟನೆಯನ್ನು ಭಾನುವಾರ ಘೋಷಣೆ ಮಾಡಲಾಗಿದೆ.

ಸಿಜೆಪಿ ದೆಹಲಿಯ ಕನ್ನಾಟ್ ಪ್ಲೇಸ್ ಮತ್ತು ಇತರ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, 'ಲಾಲ್ ಹಿಟ್ ಜನತಾ ಪಾರ್ಟಿ' ಎಂಬ ಹೊಸ ಸಂಘಟನೆಯೊಂದು ರಚನೆಯಾಗಿದೆ,

ಇಂದು ದೆಹಲಿಯ ಮಾಳವೀಯ ಸ್ಮೃತಿ ಭವನದಲ್ಲಿ ಈ ಸಂಘಟನೆಯು ತನ್ನ ಮೊದಲ ಸದಸ್ಯತ್ವ ಸಭೆಯನ್ನು ನಡೆಸಿತು. ಈ ಸಭೆಯು 'ಕಾಕ್ರೋಚ್ ಜನತಾ ಪಾರ್ಟಿ'(CJP) ವಿರುದ್ಧವಾಗಿತ್ತು.

ಈ ಕಾರ್ಯಕ್ರಮದಲ್ಲಿ, ಸಂಘಟನೆಯ ಮುಖ್ಯಸ್ಥ ಅಯಾನ್ ಭಟ್ನಾಗರ್ ಮತ್ತು ಇತರ ಭಾಷಣಕಾರರು, CJP, ಕಾಂಗ್ರೆಸ್ ಪಕ್ಷ ಹಾಗೂ ಪ್ರತಿಭಟನಾಕಾರರನ್ನು ತೀವ್ರವಾಗಿ ಟೀಕಿಸಿದರು. ಈ ಪ್ರತಿಭಟನೆಗಳು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನೇ ಪ್ರಶ್ನಿಸುವಂತಿದ್ದು, ವ್ಯಾಪಾರ-ವಹಿವಾಟುಗಳಿಗೆ ನಷ್ಟವನ್ನು ಉಂಟುಮಾಡುತ್ತಿವೆ ಎಂದು ಆರೋಪಿಸಿದರು.

ಏನಿದು ಸಂಘಟನೆ?

ಅಯಾನ್ ಭಟ್ನಾಗರ್ ಅವರು ಐಎಎನ್ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುವ ವೇಳೆ ತಮ್ಮ ಸಂಘಟನೆಯ ಉದ್ದೇಶವನ್ನು ವಿವರಿಸಿದ್ದಾರೆ. 'ಲಾಲ್ ಹಿಟ್ ಜನತಾ ಪಾರ್ಟಿ'ಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ರಚಿಸಲಾಗಿಲ್ಲ. ನಾವು ಸಿಜೆಪಿ (CJP) ಮತ್ತು ಅದರ ಪ್ರತಿಭಟನೆಗಳ ವಿರುದ್ಧ ನಿಲ್ಲುತ್ತೇವೆ. ದೇಶದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಬಯಸುವ ಮತ್ತು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸುವ 'ಜಿರಳೆ'ಗಳಂತಹ ಶಕ್ತಿಗಳನ್ನು ನಾವು ವಿರೋಧಿಸುತ್ತೇವೆ. ನಾವು ವಿವಿಧ ಗುಂಪುಗಳಾಗಿ, ದೊಡ್ಡ ಅಥವಾ ಸಣ್ಣ ಪ್ರಮಾಣದಲ್ಲಿ ಒಗ್ಗೂಡಿ, ನಮ್ಮ ಅಭಿಪ್ರಾಯಗಳು ಹಾಗೂ ವಾದಗಳನ್ನು ಮಂಡಿಸುತ್ತೇವೆ ಎಂದು ಹೇಳಿದ್ದಾರೆ.

'ಮೋದಿ ಕರೆ ಕೊಟ್ಟರೆ ಇನ್ನೂ ಹೆಚ್ಚಿನ ಜನ ಸೇರುತ್ತಾರೆ'

“ನಾವೇ ಇಷ್ಟು ಜನ ಸೇರಿದ್ದೇವೆ, ಇನ್ನು ಪ್ರಧಾನಿ ನರೇಂದ್ರ ಮೋದಿಯವರೇ ಕರೆ ಕೊಟ್ಟರೆ ಎಷ್ಟು ಜನ ಜಮಾಯಿಸಬಹುದು ಯೋಚಿಸಿ” ಎಂದ ಅವರು, ಜನರು ಕೇವಲ ಸಾಮಾಜಿಕ ಮಾಧ್ಯಮಗಳಿಗೆ ಸೀಮಿತವಾಗದೆ ಬೀದಿಗಿಳಿಯಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಹಲವರಿಗೆ ಗಾಯ; ನಟ ಪ್ರಾಣಾಪಾಯದಿಂದ ಪಾರು, Video

ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್

ಬಿಜೆಪಿ ಉಚ್ಚಾಟಿತ ನಾಯಕ ಯತ್ನಾಳ್-ವಿಜಯೇಂದ್ರ ಭೇಟಿ: ರಾಜಕೀಯದಲ್ಲಿ ಗರಿಗೆದರಿದ ಲೆಕ್ಕಾಚಾರ!

'ಸಲ್ಮಾನ್ ಖಾನ್ ಜೊತೆ ಕೆಲಸ ಮಾಡೋರನ್ನ ಬಿಡಲ್ಲ': Tiger Shroff ದಾಳಿ ಬೆನ್ನಲ್ಲೇ ಬಿಷ್ಣೋಯ್ ಗ್ಯಾಂಗ್ ಪೋಸ್ಟ್!

ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ ಬೆಂಬಲಿಸಿ ತಪ್ಪು ಮಾಡಿದೆ: ಆಂಧ್ರ ಮಾಜಿ ಸಿಎಂ ಜಗನ್