ಜಗನ್ ಮೋಹನ್ ರೆಡ್ಡಿ 
ದೇಶ

ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ ಬೆಂಬಲಿಸಿ ತಪ್ಪು ಮಾಡಿದೆ: ಆಂಧ್ರ ಮಾಜಿ ಸಿಎಂ ಜಗನ್

ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯು ಆಡಳಿತಾರೂಢ ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು ಎಂದು ಜಗನ್ ಪ್ರತಿಪಾದಿಸಿದ್ದಾರೆ.

ವಿಶಾಖಪಟ್ಟಣಂ: ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕೆಂದು ವೈಎಸ್‌ಆರ್‌ಸಿಪಿ(YSRCP) ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಭಾನುವಾರ ಕರೆ ನೀಡಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯು ಆಡಳಿತಾರೂಢ ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು ಎಂದು ಜಗನ್ ಪ್ರತಿಪಾದಿಸಿದ್ದಾರೆ.

2023ರಲ್ಲಿ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಕಾನೂನನ್ನು ತಮ್ಮ ಪಕ್ಷವು ಬೆಂಬಲಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಜಗನ್, ಚುನಾವಣೆಗಳ ಮೇಲೆ ಸಾರ್ವಜನಿಕರ ನಂಬಿಕೆಯನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಇಂದು ವಿಶಾಖಪಟ್ಟಣಂನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಗನ್, "ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ ಬೆಂಬಲಿಸಿ ತಪ್ಪು ಮಾಡಿದೆ. ಬೆಂಬಲ ನೀಡಿದ್ದಕ್ಕಾಗಿ ನಾನೀಗ ವಿಷಾದಿಸುತ್ತೇನೆ" ಎಂದು ಹೇಳಿದರು.

ಜಗನ್ ಅವರು 'ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವೆಯ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯಿದೆ, 2023' ಅನ್ನು ಉಲ್ಲೇಖಿಸಿದರು. ಸಂಸತ್ತಿನಲ್ಲಿ ಅವರ ಪಕ್ಷವು ಈ ಕಾಯಿದೆಗೆ ಬೆಂಬಲ ನೀಡಿತ್ತು.

ಚುನಾವಣೆಗಳು ಮತ್ತು ಪರೀಕ್ಷೆಗಳ ನಡುವೆ ಹೋಲಿಕೆ ಮಾಡಿದ ಜಗನ್, ವಿದ್ಯಾರ್ಥಿಯಿಂದ ಪರೀಕ್ಷಕನನ್ನು ನೇಮಿಸಲು ಸಾಧ್ಯವಿಲ್ಲ. ತಟಸ್ಥವಲ್ಲದ ಪ್ರಕ್ರಿಯೆ ಮೂಲಕ ನೇಮಕಗೊಂಡರೆ ಪ್ರಾಮಾಣಿಕ ಚುನಾವಣಾ ಆಯುಕ್ತರೂ ಸಹ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಹಲವರಿಗೆ ಗಾಯ; ನಟ ಪ್ರಾಣಾಪಾಯದಿಂದ ಪಾರು, Video!

ಸಲ್ಮಾನ್ ಖಾನ್ ಜೊತೆ ಕೆಲಸ ಮಾಡೋರನ್ನ ಬಿಡಲ್ಲ, ಇದೇ ಕೊನೆ ಎಚ್ಚರಿಕೆ: Tiger Shroff ದಾಳಿ ಬೆನ್ನಲ್ಲೇ ಬಿಷ್ಣೋಯ್ ಗ್ಯಾಂಗ್ ಪೋಸ್ಟ್!

ನಟ ಸುದೀಪ್‌-ಪ್ರಿಯಾ ದಾಂಪತ್ಯಕ್ಕೆ ಬೆಳ್ಳಿ ಹಬ್ಬದ ಸಂಭ್ರಮ; ಆಪ್ತರ ಸಮ್ಮುಖದಲ್ಲಿ ಅದ್ದೂರಿ ಸೆಲೆಬ್ರೇಷನ್! Video ನೋಡಿ

'ಬಿಜೆಪಿ ಅಂದ್ರೆ ಭಾರತ ಅಲ್ಲ, BJP ವಿರುದ್ಧ ಮಾತನಾಡುವುದೂ ದೇಶದ್ರೋಹವಲ್ಲ': CJP ಪ್ರತಿಭಟನೆ ಬೆಂಬಲಿಸಿ ನಟಿ ಪೂಜಾ ಬೇಡಿ Video

ರಾವಣನ ಹತ್ತು ತಲೆಗಳಲ್ಲಿ ರಾಹುಲ್ ಗಾಂಧಿ, ಅಖಿಲೇಶ್, ಎಲಾನ್ ಮಸ್ಕ್; ವಿವಾದಾತ್ಮಕ ಪೋಸ್ಟರ್‌ ವೈರಲ್