ಕಂಗನಾ - ನೇಹಾ ಸಿಂಗ್ 
ದೇಶ

ವೇಶ್ಯಾವಾಟಿಕೆ ಪ್ರಕರಣಕ್ಕೆ ಲಿಂಕ್; ರಾಜಕೀಯ ಭಿನ್ನಾಭಿಪ್ರಾಯ ಮರೆತು ನೇಹಾ ಸಿಂಗ್ ಬೆಂಬಲಕ್ಕೆ ನಿಂತ ಕಂಗನಾ!

ತಮ್ಮ ಹಾಡುಗಳ ಮೂಲಕ ಆಗಾಗ ಬಿಜೆಪಿಯನ್ನು ಟೀಕಿಸುತ್ತಿದ್ದ ಗಾಯಕಿ ನೇಹಾ ಸಿಂಗ್ ಅವರ ಬೆಂಬಲಕ್ಕೆ ನಿಂತ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್.

ನವದೆಹಲಿ: ಹಾಸ್ಟೇಲ್ ನಲ್ಲಿ ನಡೆದಿದೆ ಎನ್ನಲಾದ ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಜಾನಪದ ಗಾಯಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನೇಹಾ ಸಿಂಗ್ ರಾಥೋಡ್ ಅವರ ಹೆಸರನ್ನು ಉಲ್ಲೇಖಿಸಿ ABP ನ್ಯೂಸ್ ವರದಿ ಮಾಡಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ನೇಹಾ ಸಿಂಗ್ ಅವರು ಇದು ತಮ್ಮ ಘನತೆ ಹಾಗೂ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ತಮ್ಮ ಹಾಡುಗಳ ಮೂಲಕ ಆಗಾಗ ಬಿಜೆಪಿಯನ್ನು ಟೀಕಿಸುತ್ತಿದ್ದ ಗಾಯಕಿ ನೇಹಾ ಸಿಂಗ್ ಅವರ ಬೆಂಬಲಕ್ಕೆ ನಿಂತ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು, ರಾಜಕೀಯವಾಗಿ ಭಿನ್ನ ನಿಲುವುಗಳನ್ನು ಹೊಂದಿದ್ದರೂ ಟಿಆರ್ ಪಿಗಾಗಿ ಯಾವುದೇ ಮಹಿಳೆಯ ಮಾನಹಾನಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ತಮ್ಮನ್ನು ಲೈಂಗಿಕ ಕಾರ್ಯಕರ್ತೆಯಂತೆ ಬಿಂಬಿಸುವ ಮೂಲಕ ತಮ್ಮ ಘನತೆಗೆ ಕಳಂಕ ತರಲು ಸುದ್ದಿ ವಾಹಿನಿ ಪ್ರಯತ್ನಿಸುತ್ತಿದೆ ಎಂದು ಗಾಯಕಿ ನೇಹಾ ಅವರು ಭಾನುವಾರ ತಮ್ಮ 'ಎಕ್ಸ್' (X)ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಈ ವಿಚಾರವಾಗಿ ನಟಿ ಕಂಗನಾ ಅವರು ಏನಾದರೂ ಹೇಳಲು ಬಯಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

“ಆತ್ಮೀಯ ಕಂಗನಾ ರಣಾವತ್, ನಿಮ್ಮಂತೆಯೇ ನಾನೂ ಕೂಡ ಈ ದೇಶದ ಮಗಳೇ. ನಮ್ಮ ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ನಾವಿಬ್ಬರೂ ಮಹಿಳೆಯರು ಎಂಬ ಸತ್ಯವನ್ನು ಈ ಭಿನ್ನಾಭಿಪ್ರಾಯ ಬದಲಾಯಿಸಲು ಸಾಧ್ಯವಿಲ್ಲ. ಆ ವಾಹಿನಿಯು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದು, ನನ್ನನ್ನು ವೇಶ್ಯೆ ಎಂದು ಕರೆದಿದೆ. ಈ ಸುಳ್ಳು ಸುದ್ದಿಯನ್ನು ಇಡೀ ದೇಶವೇ ನೋಡಿದೆ, ಇದರಿಂದ ನನ್ನ ಘನತೆಗೆ ಧಕ್ಕೆಯಾಗಿದೆ” ಎಂದು ನೇಹಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, ರಾಕೀಯವಾಗಿ ನಿಲುವುಗಳು ಭಿನ್ನವಾಗಿದ್ದರೂ ಟಿಆರ್ ಪಿಗಾಗಿ ಯಾವುದೇ ಮಹಿಳೆಯ ಮಾನಹಾನಿ ಮಾಡುವುದು ಸರಿಯಲ್ಲ ಎಂದು ನೇಹಾ ಸಿಂಗ್ ಪರ ಧ್ವನಿ ಎತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತದಾರರ ಪಟ್ಟಿಯಲ್ಲಿ ಕೈ ಬಿಟ್ಟ ಹೆಸರು ಮರುಸೇರ್ಪಡೆಗೊಳಿಸಲು 'ನಮೂನೆ 6' ಬಳಸಬಹುದು: ಹೈಕೋರ್ಟ್‌ಗೆ ಚುನಾವಣಾ ಆಯೋಗದ ಮಾಹಿತಿ

Kolkata Durga Puja stampede ಕೇಸ್: ಪೂಜಾ ಸಮಿತಿ ಕಾರ್ಯದರ್ಶಿ ಸೇರಿ 7 ಮಂದಿ ಬಂಧನ; SIT ತನಿಖೆಗೆ ಆದೇಶ, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ..!

ಉದ್ರಿಕ್ತಗೊಂಡ ಆನೆ; ಮಾವುತನನ್ನು ನೆಲಕ್ಕೆ ಅಪ್ಪಳಿಸಿ ರೋಷಾವೇಶ; ಗಂಭೀರ ಗಾಯ!

ವಿದೇಶಿ ಶಕ್ತಿಗಳಿಂದ ಅರಾಜಕತೆ: ಭಾರತೀಯ ಪ್ರಜೆಯಲ್ಲದ ಇಮ್ರಾನ್ ಖಾನ್ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದು ತಪ್ಪು: ಚಿರಾಗ್ ಪಾಸ್ವಾನ್

ಬೆಂಗಳೂರು: ನೈಸ್ ರಸ್ತೆಯಲ್ಲಿ ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್; 5 ಕಿಮೀ ಟ್ರಾಫಿಕ್‌ ಜಾಮ್‌!