ಸೌರವ್ ದಾಸ್, ಆಶುತೋಷ್ ರಂಕಾ file photo
ದೇಶ

CJP ಮುಖಂಡರಿಗಿಲ್ಲ ಬಿಡುಗಡೆ ಭಾಗ್ಯ: ಅಶುತೋಷ್ ರಾಂಕಾ, ಸೌರವ್ ದಾಸ್ ಗೆ ಇನ್ನೂ 2 ದಿನ ಜೈಲೇ ಗತಿ!

ಅಶುತೋಷ್ ರಾಂಕಾ, ಸೌರವ್ ದಾಸ್ ಅವರನ್ನು ಇಂದು ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ನೂತನವಾಗಿ ನೇಮಕಗೊಂಡ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್(Special Executive Magistrate) ಅವರ ಮುಂದೆ ಹಾಜರುಪಡಿಸಲಾಯಿತು.

ನವದೆಹಲಿ: ಅಕ್ರಮವಾಗಿ ಜಂತರ್ ಮಂತರ್ ಪ್ರವೇಶಿಸಿದ ಆರೋಪದ ಮೇಲೆ ಬಂಧಿತರಾಗಿರುವ 'ಕಾಕ್ರೋಚ್ ಜನತಾ ಪಾರ್ಟಿ' (CJP) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್(Special Executive Magistrate) ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಿ ಸೋಮವಾರ ಆದೇಶಿಸಿದ್ದಾರೆ.

ಅಶುತೋಷ್ ರಾಂಕಾ, ಸೌರವ್ ದಾಸ್ ಅವರನ್ನು ಇಂದು ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ನೂತನವಾಗಿ ನೇಮಕಗೊಂಡ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್(Special Executive Magistrate) ಅವರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಅವರನ್ನು ಇನ್ನೂ ಎರಡು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ (judicial remand) ಒಪ್ಪಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವಾಗ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ, ಅಕ್ಟೋಬರ್ 13 ರಂದು ಈ ಇಬ್ಬರನ್ನು ಬಂಧಿಸಲಾಗಿತ್ತು. ನಂತರ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

ಇದೀಗ, ಅಶುತೋಷ್ ರಾಂಕಾ, ಸೌರವ್ ದಾಸ್ ಬಿಡುಗಡೆಯನ್ನು ತಡೆಯುವ ಉದ್ದೇಶದಿಂದಲೇ ಜಾಮೀನು ಪ್ರಕ್ರಿಯೆಗಳನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲಾಗುತ್ತಿದೆ ಎಂದು CJP ಆರೋಪಿಸಿದೆ.

ಜಂತರ್ ಮಂತರ್ ಪ್ರತಿಭಟನಾ ಸ್ಥಳವೆಂಬ ಸ್ಥಾನಮಾನವನ್ನು ತೆಗೆದುಹಾಕಲಾಗಿತ್ತು. ಆದರೂ, ಅಲ್ಲಿನ ಬೀಗ ಹಾಕಿದ್ದ ಗೇಟ್ ಅನ್ನು ಹತ್ತಿ ಒಳಗೆ ಪ್ರವೇಶಿಸಿದ ಆರೋಪದ ಮೇಲೆ ಈ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು.

ಬಂಧಿತ CJP ಮುಖಂಡರು, ಇತರ ಕಾರ್ಯಕರ್ತರೊಂದಿಗೆ ಸೇರಿ, ಅಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದರು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದು, ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟೈಗರ್ ಶ್ರಾಫ್‌ ಮೇಲೆ ಶೂಟ್ ಔಟ್ ಕೇಸ್: ಮೂವರು ಆರೋಪಿಗಳಲ್ಲಿ ಯಾರೊಬ್ಬರೂ ಅಪ್ರಾಪ್ತರಲ್ಲ- ಡಿಸಿಪಿ ರಾಜ್ ತಿಲಕ್ ರೋಷನ್ ಸ್ಪಷ್ಟನೆ

ಮೊದಲು ವೈಭವ್​ ಸೂರ್ಯವಂಶಿಯನ್ನು ತಂಡದಿಂದ ಕೈಬಿಡಿ; ಇದು ಆಘಾತಕಾರಿ, ಆದ್ರೆ...: ಮಾಜಿ ಕ್ರಿಕೆಟಿಗನ ಅಚ್ಚರಿ ಹೇಳಿಕೆ!

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಉಗ್ರರಿಂದ ಮೂವರ ಹತ್ಯೆ; ಭುಗಿಲೆದ್ದ ಆಕ್ರೋಶ, ಸಿಎಂ ನಿವಾಸದ ಹೊರಗೆ ಪ್ರತಿಭಟನೆ!

'ರಾಹುಲ್ ಗಾಂಧಿ ನನ್ನ ಪರ್ಸ್, ಮೊಬೈಲ್ ಕದ್ದಿದ್ದಾರೆ': ಅಮೆರಿಕನ್ ಕಾರ್ಯಕರ್ತೆ ರೆನೀ ಲಿನ್ ವ್ಯಂಗ್ಯಾತ್ಮಕ ಹೇಳಿಕೆ; Video

ಹಾಡುವುದಷ್ಟೇ ಅಲ್ಲ, ನಾನೂ ಅತ್ಯುತ್ತಮವಾಗಿ ನಟಿಸಬಲ್ಲೆ: ಮಹಾ CM ಪತ್ನಿ ಅಮೃತಾ ಫಡ್ನವೀಸ್