ಅಮೃತಾ ಫಡ್ನವೀಸ್ 
ದೇಶ

ಹಾಡುವುದಷ್ಟೇ ಅಲ್ಲ, ನಾನೂ ಅತ್ಯುತ್ತಮವಾಗಿ ನಟಿಸಬಲ್ಲೆ: ಮಹಾ CM ಪತ್ನಿ ಅಮೃತಾ ಫಡ್ನವೀಸ್

ಇದೀಗ ಅಮೃತಾ ಫಡ್ನವೀಸ್ ಅವರು ತಾವು ಹಾಡುವಾಗಲೆಲ್ಲಾ ತಮ್ಮ ಭಾವನೆಗಳನ್ನೆಲ್ಲಾ ಧಾರೆಯೆರೆದು ಹಾಡುತ್ತೇನೆ ಎಂದು ಹೇಳಿದ್ದಾರೆ.

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರು ತಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದಾಗಿ ನಿರಂತರವಾಗಿ ಸುದ್ದಿಯಲ್ಲಿರುತ್ತಾರೆ.

ಇದೀಗ ಅಮೃತಾ ಫಡ್ನವೀಸ್ ಅವರು ತಾವು ಹಾಡುವಾಗಲೆಲ್ಲಾ ತಮ್ಮ ಭಾವನೆಗಳನ್ನೆಲ್ಲಾ ಧಾರೆಯೆರೆದು ಹಾಡುತ್ತೇನೆ ಎಂದು ಹೇಳಿದ್ದಾರೆ.

'ರೆಡ್‌ಎಫ್‌ಎಂ ಇಂಡಿಯಾ'ದ ಆರ್‌ಜೆ ಮಲಿಷ್ಕಾ ಅವರೊಂದಿಗೆ ನಡೆಸಿದ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.

'ಡೋಂಟ್ ಸ್ಟಾಪ್ - ಮಾರಿ ಮಹಿಸಾಗರ್' (Don't Stop - Maari Mahisagar) ಹಾಡಿನಲ್ಲಿ ನೀವು ಅತ್ಯುತ್ತಮವಾಗಿ ನಟಿಸಿದ್ದೀರಿ ಎಂದು ಮಲಿಷ್ಕಾ ಹೇಳಿದಾಗ, "ಈ ಹಾಡಿನಲ್ಲಿ ನಾನು ಯಾವ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು. ಹಾಗೆಯೇ, ನಾನು ಅತ್ಯುತ್ತಮವಾಗಿ ನಟಿಸಬಲ್ಲೆ. ಬಾಲ್ಯದಿಂದಲೂ ನಾನು ಇದನ್ನು ಮಾಡುತ್ತಾ ಬಂದಿರುವುದರಿಂದ, ನನಗಿದು ಸುಲಭ" ಎಂದು ಮಹಾ ಸಿಎಂ ಪತ್ನಿ ಹೇಳಿದ್ದಾರೆ.

"ನಾನು ಸಂಸ್ಕೃತ, ಹಿಂದಿ, ಪಂಜಾಬಿ, ಮರಾಠಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡಲು ಪ್ರಯತ್ನಿಸಿದ್ದೇನೆ" ಅವರು ತಿಳಿಸಿದ್ದಾರೆ.

'ಮಾರಿ ಮಹಿಸಾಗರ್' ಹಾಡಿನ ಕುರಿತು ಮಾತನಾಡಿದ ಅಮೃತಾ, "ಇದು ಹಬ್ಬದ ಋತುವಿಗೆ, ಅದರಲ್ಲೂ ಗರ್ಬಾ ಆಚರಣೆಯ ಸಮಯಕ್ಕೆ ಸೂಕ್ತವಾದ ಹಾಡು. ಇದೊಂದು ಸಾಂಪ್ರದಾಯಿಕ ಜಾನಪದ ಹಾಡಾಗಿದ್ದು, ಇದರ ತಾಳ (beat) ನನಗೆ ತುಂಬಾ ಇಷ್ಟವಾಯಿತು. ಅವರು ಇದಕ್ಕೆ ಹೊಸ ರೂಪ ನೀಡಿದ್ದರು; ಒಂದು ಪ್ರಯೋಗವಾಗಿ ಈ ಹಾಡನ್ನು ಹಾಡಲು ನಾನು ಒಪ್ಪಿಕೊಂಡೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ತುರ್ತಾಗಿ ಮಧ್ಯಪ್ರವೇಶಿಸಿ: ಪ್ರಧಾನಿ ಮೋದಿಗೆ ಸಿಎಂ ಶಿವಕುಮಾರ್ ಪತ್ರ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಮೂವರು ಹತ್ಯೆಗೈದ ಉಗ್ರರು; ಭುಗಿಲೆದ್ದ ಆಕ್ರೋಶ, ಸಿಎಂ ನಿವಾಸದ ಹೊರಗೆ ಪ್ರತಿಭಟನೆ!

Scrap ಮಾರಾಟ: ಭಾರತ ಸರ್ಕಾರಕ್ಕೆ ರೂ. 500 ಕೋಟಿ ಗಳಿಕೆ!

CJP ಮುಖಂಡರಿಗಿಲ್ಲ ಬಿಡುಗಡೆ ಭಾಗ್ಯ; ಅಶುತೋಷ್ ರಾಂಕಾ, ಸೌರವ್ ದಾಸ್ ಗೆ ಇನ್ನೂ 2 ದಿನ ಜೈಲೇ ಗತಿ!

"ನಿಮಗೆ ಯಾವುದೇ ರೀತಿಯ ಅಧಿಕಾರವಿಲ್ಲ, ಪಾಕ್ ಕಾರ್ಯಸೂಚಿ ಈಡೇರೆಗೆ ವೇದಿಕೆ ದುರ್ಬಳಕೆ": OIC ಯಲ್ಲಿ ಭಾರತ-ವಿರೋಧಿ ಉಲ್ಲೇಖಕ್ಕೆ MEA ಕೆಂಡಾಮಂಡಲ!