ಪ್ರಧಾನಿ ಮೋದಿ,ಜೈರಾಮ್ ರಮೇಶ್ 
ದೇಶ

‘Expiry Date'ಮುಗಿಯುತ್ತಾ ಬಂದಿದೆ: ಪಿಎಂ-ದಕ್ಷ್ ಯೋಜನೆ ಅನುಷ್ಟಾನದಲ್ಲಿ ಲೋಪದ ಆರೋಪ,ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ!

ಮೋದಿ ಸರ್ಕಾರದ "ಅವಧಿ ಮುಗಿಯುವ ಸಮಯ" (expiry date) ಹತ್ತಿರ ಬಂದಿದೆ ಮತ್ತು ಈಗ ಚೀಲ ಹೊತ್ತು ಹೊರಡುವ ಸಮಯ ಬಂದಿದೆ ಎಂದು ವ್ಯಂಗ್ಯವಾಡಿದೆ.

ನವದೆಹಲಿ: ಅರ್ಹ ವ್ಯಕ್ತಿಗಳಿಗೆ ಕೌಶಲ್ಯ ತರಬೇತಿ ನೀಡುವ ಉದ್ದೇಶದ 'ಪ್ರಧಾನ ಮಂತ್ರಿ ದಕ್ಷತಾ ಔರ್ ಕುಶಲತಾ ಸಂಪನ್ನ ಹಿತಗ್ರಾಹಿ' (PM-DAKSH) ಯೋಜನೆಯ ಅನುಷ್ಠಾನದಲ್ಲಿ ಲೋಪದೋಷಗಳಾಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬುಧವಾರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಒಂದು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದೆ. ಮೋದಿ ಸರ್ಕಾರದ "ಅವಧಿ ಮುಗಿಯುವ ಸಮಯ" (expiry date) ಹತ್ತಿರ ಬಂದಿದೆ ಮತ್ತು ಈಗ ಚೀಲ ಹೊತ್ತು ಹೊರಡುವ ಸಮಯ ಬಂದಿದೆ ಎಂದು ವ್ಯಂಗ್ಯವಾಡಿದೆ.

ಈ ಸಂಬಂಧ ಮಾಧ್ಯಮ ವರದಿಯೊಂದರ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್, ಈ ವರದಿಯ ಪ್ರಕಾರ, 'ಪ್ರಧಾನ ಮಂತ್ರಿ ದಕ್ಷತಾ ಔರ್ ಕುಶಲತಾ ಸಂಪನ್ನ ಹಿತಗ್ರಾಹಿ' (PM-DAKSH) ಯೋಜನೆಯ ಅನುಷ್ಠಾನದಲ್ಲಿ "ಗಂಭೀರ ಲೋಪದೋಷಗಳು" ಕಂಡುಬಂದಿವೆ ಎಂದು ಆರೋಪಿಸಿದ್ದಾರೆ.

ಪರಿಶಿಷ್ಟ ಜಾತಿಗಳು, ಇತರೆ ಹಿಂದುಳಿದ ವರ್ಗಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಅಧಿಸೂಚಿತ ಮತ್ತು ಅಲೆಮಾರಿ ಬುಡಕಟ್ಟು ಜನಾಂಗದವರು ಹಾಗೂ ನೈರ್ಮಲ್ಯ ಕಾರ್ಮಿಕರಂತಹ ಅರ್ಹ ವ್ಯಕ್ತಿಗಳಿಗೆ ಕೌಶಲ್ಯ ತರಬೇತಿ ನೀಡಿ, ಅವರನ್ನು ಉದ್ಯೋಗಕ್ಕೆ ಸಿದ್ಧಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಹೆಸರು ದೊಡ್ಡದು, ಆದರೆ ವಾಸ್ತವ ಶೂನ್ಯ ಎಂದು ಟೀಕಿಸಿದ್ದಾರೆ.

"ಈ ಯೋಜನೆಗೆ ಪ್ರಧಾನ ಮಂತ್ರಿಯವರ ಹೆಸರನ್ನೇ ಇಡಲಾಗಿದೆ, ಆದರೆ ವಾಸ್ತವದಲ್ಲಿ ಇದರ ಫಲಿತಾಂಶ - ಅವರ ಇತರ ಭರವಸೆಗಳಂತೆಯೇ - ಸಂಪೂರ್ಣ ಶೂನ್ಯವಾಗಿದೆ. ಮೋದಿ ಸರ್ಕಾರಕ್ಕೆ ಒಂದೇ ಒಂದು ನಿಜವಾದ ಕಾರ್ಯಸೂಚಿ ಇದೆ - ಭವ್ಯವಾದ ಜಾಹೀರಾತುಗಳು, ಸುದ್ದಿಗಳ ನಿರ್ವಹಣೆ (headline management), ಆದರೆ ವಾಸ್ತವದಲ್ಲಿ ಯಾವುದೇ ಸಾಧನೆ ಇಲ್ಲ ಎಂದು ಅವರು ಆರೋಪಿಸಿದ್ದಾರೆ.

'ಪಿಎಂ-ದಕ್ಷ್' (PM-DAKSH) ಯೋಜನೆಯನ್ನು ಕಳೆದ ಎರಡು ವರ್ಷಗಳಿಂದ ಜಾರಿಗೊಳಿಸಲು ವಿಫಲವಾಗಿರುವುದು ಮತ್ತು ಹಿಂದಿನ ವರ್ಷಗಳಲ್ಲಿ ಮೀಸಲಿಟ್ಟ ಬಜೆಟ್ ಅನ್ನು ಬಳಸಿಕೊಳ್ಳದಿರುವುದು, ಮೋದಿ ಸರ್ಕಾರದ ಮತ್ತೊಂದು "ದೊಡ್ಡ ವೈಫಲ್ಯ"ವನ್ನು ಬಯಲು ಮಾಡಿದೆ. ಅಂಚಿನಲ್ಲಿರುವ ವರ್ಗಗಳಿಗೆ ಕೌಶಲ್ಯ, ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ದೇಶವಿದ್ದ ಈ ಯೋಜನೆಯನ್ನು, ಮೋದಿ ಸರ್ಕಾರವು ಕೇವಲ ಕಾಗದದ ಮೇಲಿನ ಪ್ರಕ್ರಿಯೆಯಾಗಿ (paperwork) ಸೀಮಿತಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಮೋದಿ ಜೀ, ನಿಮ್ಮ ಸರ್ಕಾರದ ಮೇಲಿನ ಜನರ ನಂಬಿಕೆ ಕಳೆದುಹೋಗಿದೆ. ನಿಮ್ಮ ಸರ್ಕಾರದ ಅವಧಿ ಮುಗಿಯುವ ಕಾಲ ಹತ್ತಿರ ಬಂದಿದೆ. ಈಗ ನಿಮ್ಮ ಬ್ಯಾಗ್‌ಗಳನ್ನು ಕಟ್ಟಿಕೊಂಡು ಹೊರಡುವ ಸಮಯ ಬಂದಿದೆ. ಇಂದಿನ ಯುವ ಪೀಳಿಗೆ) ಯ ಭವಿಷ್ಯದೊಂದಿಗೆ ಮೋದಿ ಸರ್ಕಾರ ಇನ್ನು ಎಷ್ಟು ಕಾಲ ಚೆಲ್ಲಾಟವಾಡಲಿದೆ?" ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.

2024ರ ಚುನಾವಣೆಯಲ್ಲಿ ಕೇವಲ 240 ಸ್ಥಾನಗಳಿಗೆ ಸೀಮಿತಗೊಂಡಿದ್ದಕ್ಕಾಗಿ, ಮೋದಿ ಸರ್ಕಾರವು ಪರಿಶಿಷ್ಟ ಜಾತಿಗಳು (SC), ಇತರೆ ಹಿಂದುಳಿದ ವರ್ಗಗಳು (OBC), ಆರ್ಥಿಕವಾಗಿ ಹಿಂದುಳಿದ ವರ್ಗಗಳು (EWS) ಹಾಗೂ ಅಧಿಸೂಚಿತ, ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ ಎಂದು ಅವರು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ; ಮೈಸೂರು ಪೇಟ ಧರಿಸಿ ನಂದಿಧ್ವಜ ಪೂಜೆ ನೆರವೇರಿಸಿದ ಸಿಎಂ; Live Video

ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ: ಗಜಪಡೆಗೆ ಸಿಂಗಾರ, ಅಂಬಾರಿ ಹೊರಲು ಪ್ರಶಾಂತ ಸಜ್ಜು

'ಮೊದಲು ಬೆದರಿಕೆ, ನಿರ್ಬಂಧ ನಿಲ್ಲಿಸಿ'.. 'ಒಂಚೂರು ಯುರೇನಿಯಂ ಹೊರಗೋಗಲ್ಲ'; ಪಾಕ್ ಸೇನಾ ಮುಖ್ಯಸ್ಥನಿಗೆ ಇರಾನ್ ಖಡಕ್ ಉತ್ತರ!

ಸುಮಾರು 2-3 ಕಿ.ಮೀ.ನಷ್ಟು ದೂರಕ್ಕೆ 120 ರೂಗೆ ಡಿಮ್ಯಾಂಡ್! ಬೇಡವೆಂದು ರಾಪಿಡೋ' ಬೈಕ್ ಹತ್ತಿದ ಪ್ರಯಾಣಿಕನಿಗೆ ಆಟೋ ಚಾಲಕ ಮಾಡಿದ್ದೇನು?

ಮಾಲಿಯಲ್ಲಿ ಐಸಿಸ್ ಉಗ್ರರ ನರಮೇಧ: 70 ನಾಗರಿಕರ ಗುಂಡಿಕ್ಕಿ ಹತ್ಯೆ, ಹಲವರ ಜೀವಂತ ಸುಟ್ಟ ಭಯೋತ್ಪಾದಕರು!: ವರದಿ