ಪರಕಾಲ ಪ್ರಭಾಕರ್  
ದೇಶ

'ಹರ್ ಗಲಿ ಮೇ ಜಂತರ್ ಮಂತರ್': SIR ವಿರುದ್ಧದ ಪ್ರತಿಭಟನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಭಾಗಿ!

ಈ ಪ್ರತಿಭಟನೆಯಲ್ಲಿ ಅವರು 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜೀತ್ ಡಿಪ್ಕೆ ಮತ್ತು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

ನವದೆಹಲಿ: ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ವಿರುದ್ಧ ಇದೇ 23 ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಪಾಲ್ಗೊಳ್ಳಲಿದ್ದಾರೆ.

ಈ ಪ್ರತಿಭಟನೆಯಲ್ಲಿ ಅವರು 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜೀತ್ ಡಿಪ್ಕೆ ಮತ್ತು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

'ಪೀಪಲ್ ಆಗೆನೆಸ್ಟ್ ಎಸ್‌ಐಆರ್' (People Against SIR) ಒಕ್ಕೂಟವು ಅಕ್ಟೋಬರ್ 23 ರಂದು ಈ ಪ್ರತಿಭಟನೆಯನ್ನು ಆಯೋಜಿಸಿದೆ. ಇದರಲ್ಲಿ ಸಾಮಾಜಿಕ ಕಾರ್ಯಕರ್ತರು, ರಾಜಕೀಯ ನಾಯಕರು ಮತ್ತು ಸಾರ್ವಜನಿಕ ವ್ಯಕ್ತಿಗಳು ಒಂದಾಗಲಿದ್ದು, ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಿದ್ದಾರೆ.

"ಹರ್ ಗಲಿ ಮೇ ಜಂತರ್ ಮಂತರ್! ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಜನರ ನಡಿಗೆ. ಈ ಸವಾಲನ್ನು ಎದುರಿಸಲು ನಾವೆಲ್ಲರೂ ಒಗ್ಗೂಡೋಣ," ಎಂದು ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸುತ್ತಾ ಬಂದಿರುವ ಪ್ರಭಾಕರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇವರು ಹಿರಿಯ ವಕೀಲ ಪ್ರಶಾಂತ್ ಭೂಷಣ್, ರೈತ ನಾಯಕ ರಾಕೇಶ್ ಟಿಕಾಯತ್, ಐಸಾ (AISA) ಅಧ್ಯಕ್ಷೆ ನೇಹಾ ಬೋರಾ ಮತ್ತು ಲೇಖಕ ತುಷಾರ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ನಿರೀಕ್ಷೆಯಿದೆ.

ಈ ಒಕ್ಕೂಟವು 'ಇಂಡಿಯಾ' (INDIA) ಮೈತ್ರಿಕೂಟದ ಪಕ್ಷಗಳಿಗೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದೆ, ಆದರೆ ಅವರ ಭಾಗವಹಿಸುವಿಕೆ ಇನ್ನೂ ಖಚಿತಗೊಂಡಿಲ್ಲ.

ಈ ಹಿಂದೆ ಅಕ್ಟೋಬರ್ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಆಯೋಜಿಸಿದ್ದ ಪ್ರತಿಭಟನೆಯಲ್ಲಿಯೂ ಪ್ರಭಾಕರ್ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಯೂಟ್ಯೂಬರ್ ಧ್ರುವ ರಾಠೀ ಮತ್ತು ಪ್ರಕಾಶ್ ರಾಜ್ ಕೂಡ ಉಪಸ್ಥಿತರಿದ್ದರು. ತಮ್ಮ ಪತ್ನಿ ದೀರ್ಘಕಾಲದಿಂದ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರೂ, ಪ್ರಭಾಕರ್ ಅವರು ಆಡಳಿತ ಪಕ್ಷದ ಕಟು ಟೀಕಾಕಾರರಾಗಿದ್ದಾರೆ.

ತಮ್ಮ 'ದಿ ಕ್ರೂಕ್ಡ್ ಟಿಂಬರ್ ಆಫ್ ನ್ಯೂ ಇಂಡಿಯಾ' (The Crooked Timber of New India) ಎಂಬ ಪುಸ್ತಕದಲ್ಲಿ, ಪ್ರಭಾಕರ್ ಅವರು ನೋಟು ಅಮಾನ್ಯೀಕರಣದಂತಹ ನಿರ್ಧಾರಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಲ್ಲದೆ, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಎತ್ತಿ ತೋರಿಸಿರುವ ಅವರು, ಪ್ರಜಾಪ್ರಭುತ್ವ ಸಂಸ್ಥೆಗಳು ದುರ್ಬಲಗೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ನರಸಾಪುರದಲ್ಲಿ ಜನಿಸಿದ ಪ್ರಭಾಕರ್ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಇದ್ದಾಗ ಸೀತಾರಾಮನ್ ಜೊತೆ ಸ್ನೇಹ ಬೆಳೆಸಿದ್ದರು. ಅವರ ರಾಜಕೀಯ ಸಿದ್ಧಾಂತಗಳು ಭಿನ್ನವಾಗಿದ್ದರೂ 1986ರಲ್ಲಿ ಅವರಿಬ್ಬರೂ ವಿವಾಹವಾದರು. ಅರ್ಥಶಾಸ್ತ್ರದ ಕುರಿತು ತಮ್ಮ ಮುಕ್ತ ಅಭಿಪ್ರಾಯಗಳಿಗೆ ಪ್ರಭಾಕರ್ ಪರಿಚಿತರಾಗಿದ್ದರೂ, ಅವರ ಅಲ್ಪಕಾಲದ ರಾಜಕೀಯ ಜೀವನವೂ ಸಾಕಷ್ಟು ಮಹತ್ವದ ಘಟನೆಗಳಿಂದ ಕೂಡಿದೆ.

ಅಕ್ಟೋಬರ್ 23ರಂದು ತಮ್ಮ ತಮ್ಮ ಪ್ರದೇಶಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸುವಂತೆ ಹಾಗೂ ದೇಶಾದ್ಯಂತ "ಜಂತರ್ ಮಂತರ್"ಗಳನ್ನು ಸ್ಥಾಪಿಸುವಂತೆ ನಾಗರಿಕರಿಗೆ ಕರೆ ನೀಡಲಾಗಿದೆ. ಇದಕ್ಕಾಗಿ "ಹರ್ ಹಾತ್ ಮೇ ತಿರಂಗಾ, ಹರ್ ಗಲಿ ಮೇ ಜಂತರ್ ಮಂತರ್" (ಪ್ರತಿಯೊಬ್ಬರ ಕೈಯಲ್ಲಿ ತ್ರಿವರ್ಣ ಧ್ವಜ, ಪ್ರತಿ ಬೀದಿಯಲ್ಲಿಯೂ ಒಂದು ಜಂತರ್ ಮಂತರ್) ಎಂಬ ಘೋಷವಾಕ್ಯವನ್ನೂ ರೂಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾ: ವೈಭವದ ಜಂಬೂ ಸವಾರಿ ಮೆರವಣಿಗೆ; ಮೊದಲ ಬಾರಿಗೆ ಅಂಬಾರಿ ಹೊತ್ತು ಸಾಗಿದ ಪ್ರಶಾಂತ ಆನೆ, ಲಕ್ಷಾಂತರ ಜನರಿಂದ ವೀಕ್ಷಣೆ! Video

ದರ್ಶನ್ ಬಗ್ಗೆ ವಿಜಯಲಕ್ಷ್ಮೀ ಪೋಸ್ಟ್‌ ಬೆನ್ನಲ್ಲೇ 'ಶಕುನಿ' ಅಂತ ಪೋಸ್ಟ್ ಹಾಕಿದ ನಟ ಧನ್ವೀರ್ ಗೌಡ, ಯಾರಿಗೆ ಟಾಂಗ್?

CJPಗೆ ಬಿಗ್ ರಿಲೀಫ್: ಅಶುತೋಷ್ ರಾಂಕಾ, ಸೌರವ್ ದಾಸ್ ಬಿಡುಗಡೆ ಮಾಡುವಂತೆ SEM ಆದೇಶ

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಯುವತಿಯರು ಸೇರಿದಂತೆ ಮತ್ತೆ ಐವರ ಬಂಧನ!

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಚಾಲನೆ: ತಾಯಿ ಚಾಮುಂಡೇಶ್ವರಿಗೆ CM ಡಿಕೆ ಶಿವಕುಮಾರ್ ಪುಷ್ಪಾರ್ಚನೆ